Asianet Suvarna News Asianet Suvarna News

Breaking: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಸ್ವರ್ಣ, ಬ್ಯಾಡ್ಮಿಂಟನ್‌ನಲ್ಲಿ ಚಿನ್ನ ಗೆದ್ದ ಕೆ. ನಿತೇಶ್‌!


ಭಾರತ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ 2ನೇ ಸ್ವರ್ಣ ಪದಕ ಸಾಧನೆ ಮಾಡಿದೆ. ಎಸ್‌ಎಲ್‌ 3 ಪುರುಷರ ಬ್ಯಾಡ್ಮಿಂಟನ್‌ ವಿಭಾಗದ ಫೈನಲ್‌ನಲ್ಲಿ ಕೆ. ನಿತೇಶ್‌ ಚಿನ್ನದ ಪದಕಕ್ಕೆ ಮುತ್ತಿಟ್ಟರು.

Nitesh Kumar Won Gold Medal in 2024 Para olympics Badminton san
Author
First Published Sep 2, 2024, 5:10 PM IST | Last Updated Sep 2, 2024, 5:25 PM IST

ಪ್ಯಾರಿಸ್‌ (ಸೆ.2): ಭಾರತ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ 2ನೇ ಸ್ವರ್ಣ ಪದಕ ಸಾಧನೆ ಮಾಡಿದೆ. ಸೋಮವಾರ ನಡೆದ ಪುರುಷರ ಎಸ್‌ಎಲ್‌ 3 ಬ್ಯಾಡ್ಮಿಂಟನ್‌ ವಿಭಾಗದ ಫೈನಲ್‌ನಲ್ಲಿ ಭಾರತದ ಕೆ. ನಿತೇಶ್‌ ಮೂರು ಗೇಮ್‌ಗಳ ಹೋರಾಟದಲ್ಲಿ ಎದುರಾಳಿ ಆಟಗಾರ ಬ್ರಿಟನ್‌ನ ಡೇನಿಯಲ್‌ ಬೆಥಲ್‌ರನ್ನು 21-14, 18-21, 23-21 ಗೇಮ್‌ಗಳಿಂದ ಸೋಲಿಸಿ ಚಿನ್ನದ ಪದಕ ಸಾಧನೆ ಮಾಡಿದರು.ಇದು ಪ್ಯಾರಿಸ್‌ ಪ್ಯಾರಾಲಿಂಪಿಕ್‌ನಲ್ಲಿ ಭಾರತದ 9ನೇ ಪದಕವಾಗಿದೆ. 1994ರ ಡಿಸೆಂಬರ್‌ 30 ರಂದು ರಾಜಸ್ಥಾನದ ಬಸ್‌ ಕಿರ್ತನ್‌ನಲ್ಲಿ ಜನಿಸಿದ್ದ ನಿತೇಶ್‌ ಕುಮಾರ್‌., 2009ರಲ್ಲಿ ಸಂಭವಿಸಿದ ರೈಲು ದುರಂತದಲ್ಲಿ  ತನ್ನ ಎಡಗಾಲನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದರು. ಈ ಹಿನ್ನಡೆಯ ನಂತರವೂ ಬ್ಯಾಡ್ಮಿಂಟನ್‌ನಲ್ಲಿ ತಮ್ಮ ಕ್ರೇಜ್‌ ಬೆಳೆಸಿಕೊಂಡ ನಿತೇಶ್‌ ಕುಮಾರ್‌, 2016ರಲ್ಲಿ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಪಾದಾರ್ಪಣೆ ಮಾಡುವ ಮೂಲಕ ದೊಡ್ಡ ಮಟ್ಟದ ಯಶಸ್ಸು ಸಂಪಾದನೆ ಮಾಡಿದ್ದರು.

ಪ್ಯಾರಾ ಬ್ಯಾಡ್ಮಿಂಟನ್‌ನ ಎಸ್‌ಎಲ್‌ 3 ವಿಭಾಗದಲ್ಲಿ ವಿಶ್ವ ಶ್ರೇಯಾಂಕದಲ್ಲಿ ನಂ.1 ಆಗಿರುವ ನಿತೇಶ್‌ ಕುಮಾರ್‌ ತಮ್ಮ ಶ್ರೇಯಾಂಕಕ್ಕೆ ತಕ್ಕ ಆಟವಾಡಿದರು. ಮೊದಲ ಗೇಮ್‌ನಲ್ಲಿ ನಿರಾಯಾಸವಾಗಿ ಗೆಲುವು ಕಂಡ ನಿತೇಶ್‌ಗೆ 2ನೇ ಗೇಮ್‌ನಲ್ಲಿ ಬೆಥಲ್‌ ತಿರುಗೇಟು ನೀಡಿದ್ದರು. ನಿರ್ಣಾಯವಾಗಿ ಅಂತಿಮ ಗೇಮ್‌ನಲ್ಲಿ ತಮ್ಮ 2ನೇ ಗೋಲ್ಡ್‌ಮೆಡಲ್‌ ಪಾಯಿಂಟ್‌ಅನ್ನು ಬಳಸಿಕೊಳ್ಳುವ ಮೂಲಕ ಚಿನ್ನ ಗೆದ್ದರು. ಇದೇ ವೇಳೆ ಬೆಥಲ್‌ಗೆ ಕೂಡ ಒಂದು ಗೋಲ್ಡ್‌ಮೆಡಲ್‌ ಪಾಯಿಂಟ್‌ ಸಿಕ್ಕಿತ್ತು. ಆದರೆ, ಅವಕಾಶ ಬಳಸಿಕೊಳ್ಳುವಲ್ಲಿ ವಿಫಲವಾಗಿದ್ದರು.

ಬೆಳ್ಳಿ ಪದಕ ಗೆದ್ದ ಯೋಗೇಶ್‌ ಕಾಥುನಿಯಾ: ಸೋಮವಾರ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ ಡಿಸ್ಕಸ್ ಥ್ರೋ F56 ಸ್ಪರ್ಧೆಯಲ್ಲಿ ಭಾರತದ ಯೋಗೇಶ್ ಕಥುನಿಯಾ ಅವರು ಡಬಲ್ ಪದಕ ವಿಜೇತರಾದರು. ಟೋಕಿಯೊದಲ್ಲಿ ಬೆಳ್ಳಿ ಗೆದ್ದಿದ್ದ ಯೋಗೇಶ್, ಸ್ಟೇಡ್‌ ಡೆ ಫ್ರಾನ್ಸ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ  42.22 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ತಮ್ಮ ಯಶಸ್ಸನ್ನು ಪುನರಾವರ್ತಿಸಿದರು. ತನಗೆ ನಿಗದಿಪಡಿಸಿದ 6 ಪ್ರಯತ್ನಗಳಲ್ಲಿ ಯೋಗೇಶ್ ಮೊದಲ ಪ್ರಯತ್ನದಲ್ಲಿಯೇ ಅತ್ಯುತ್ತಮ ಪ್ರದರ್ಶನ ನೀಡಿದರು.

ತಮ್ಮ ವೃತ್ತಿಜೀವನದಲ್ಲಿ ಪದಕಗಳ ಸರಮಾಲೆಯನ್ನು ಗೆದ್ದಿರುವ ಭಾರತದ ಪ್ಯಾರಾ ಅಥ್ಲೀಟ್ ಚಿನ್ನದ ಪದಕದ ಗುರಿಯನ್ನು ಹೊಂದಿದ್ದರು. ಆದರೆ ಅದೇ ದಿನ ಬ್ರೆಜಿಲ್‌ನ ಕ್ಲೌಡಿನಿ ಬಟಿಸ್ಟಾ 46.86 ಮೀ ಎಸೆದು ಪ್ಯಾರಾಲಿಂಪಿಕ್ ದಾಖಲೆ ನಿರ್ಮಿಸುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಯೋಗೇಶ್ ಅವರು ತಮ್ಮ ಋತುವಿನ-ಅತ್ಯುತ್ತಮ ಎಸೆತದೊಂದಿಗೆ ಉತ್ತಮವಾಗಿ ಪ್ರಾರಂಭಿಸಿದರು, ಆದರೆ ಅವರ ಉಳಿದ 5 ಪ್ರಯತ್ನಗಳಲ್ಲಿ, ಅವರ ಪ್ರಯತ್ನವನ್ನು ಉತ್ತಮಗೊಳಿಸಲು ಸಾಧ್ಯವಾಗಲಿಲ್ಲ.

ಶೂಟಿಂಗ್‌: ವಿಶ್ವದಾಖಲೆ ನಿರ್ಮಿಸಿದ ಅವನಿ ಲೇಖರಾ..!

2ನೇ ಸ್ವರ್ಣ ಪದಕದೊಂದಿಗೆ ಭಾರತ ಪದಕಪಟ್ಟಿಯಲ್ಲಿ 22ನೇ ಸ್ಥಾನಕ್ಕೆ ಏರಿದೆ. 2 ಚಿನ್ನ, 3 ಬೆಳ್ಳಿ ಹಾಗೂ 4 ಕಂಚಿನ ಪದಕದೊಂದಿಗೆ ಭಾರತ ಈವರೆಗೂ 9 ಪದಕ ಸಾಧನೆ ಮಾಡಿದೆ.

ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಕನ್ನಡಿಗ ಸುಹಾಸ್‌ಗೆ ಬೆಳ್ಳಿ: ಹುಟ್ಟೂರಲ್ಲಿ ಸಂಭ್ರಮವೋ ಸಂಭ್ರಮ

Latest Videos
Follow Us:
Download App:
  • android
  • ios