ಪಟಿಯಾಲಾ(ಮಾ.17): ಭಾರತದ ಲಾಂಗ್‌ಜಂಪ್‌ ಪಟು ಮುರಳಿ ಶ್ರೀಶಂಕರ್‌ ಮಂಗಳವಾರ ರಾಷ್ಟ್ರೀಯ ದಾಖಲೆ ನಿರ್ಮಿಸುವುದರೊಂದಿಗೆ 2021ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. 

ಇಲ್ಲಿ ನಡೆಯುತ್ತಿರುವ ಫೆಡರೇಷನ್‌ ಕಪ್‌ ರಾಷ್ಟ್ರೀಯ ಹಿರಿಯರ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕೇರಳದ ಶ್ರೀಶಂಕರ್‌ 8.26 ಮೀ. ದೂರಕ್ಕೆ ನೆಗೆದು ತಮ್ಮ ಹೆಸರಲ್ಲೇ ಇದ್ದ ರಾಷ್ಟ್ರೀಯ ದಾಖಲೆ (8.20 ಮೀ.)ಯನ್ನು ಉತ್ತಮಗೊಳಿಸಿಕೊಂಡಿದ್ದಲ್ಲದೇ ಒಲಿಂಪಿಕ್‌ ಗೇಮ್ಸ್‌ನ ಅರ್ಹತಾ ಗುರಿಯಾದ 8.22 ಮೀಟರ್‌ಗಳನ್ನು ದಾಟಿದರು. ಇದೇ ಸ್ಪರ್ಧೆಯಲ್ಲಿ ಕರ್ನಾಟಕದ ಎಸ್‌.ಲೋಕೇಶ್‌ (7.60 ಮೀ.) ಕಂಚಿನ ಪದಕ ಗೆದ್ದರು.

21 ವರ್ಷದ ಮುರಳಿ ಶ್ರೀಶಂಕರ್‌ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿವೆ. 

ಟೋಕಿಯೋ 2021 ನನ್ನ ಕೊನೆ ಒಲಿಂಪಿಕ್ಸ್‌: ಮೇರಿ ಕೋಮ್‌

ಇನ್ನು ಮಹಿಳಾ ಜಾವಲಿನ್‌ ಥ್ರೋ ಅನ್ನು ರಾಣಿ ಕೂಡಾ ರಾಷ್ಟ್ರೀಯ ದಾಖಲೆ 63.24 ಮೀಟರ್ ದೂರ ಎಸೆಯುವ ಮೂಲಕ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಆದರೆ ಟೋಕಿಯೋ ಒಲಿಂಪಿಕ್ಸ್‌ಗೆ ನಿಗದಿಪಡಿಸಲಾಗಿದ್ದ 64.00 ಮೀಟರ್‌ ದೂರ ಎಸೆಯಲು ವಿಫಲವಾಗುವ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಲು ವಿಫಲರಾಗಿದ್ದಾರೆ.