ಟೋಕಿಯೋ 2021 ನನ್ನ ಕೊನೆ ಒಲಿಂಪಿಕ್ಸ್: ಮೇರಿ ಕೋಮ್
ಮುಂಬರುವ ಟೋಕಿಯೋ ಒಲಿಂಪಿಕ್ಸ್ ನನ್ನ ಪಾಲಿನ ಕೊನೆಯ ಒಲಿಂಪಿಕ್ಸ್ ಆಗಿರಲಿದೆ ಎಂದು ವಿಶ್ವ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಮಾ.11): 6 ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್, 2012ರ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಭಾರತದ ತಾರಾ ಬಾಕ್ಸರ್ ಮೇರಿ ಕೋಮ್ ಈ ವರ್ಷ ಜುಲೈನಲ್ಲಿ ಜಪಾನ್‌ನ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್, ತಾವು ಪಾಲ್ಗೊಳ್ಳಲಿರುವ ಕೊನೆಯ ಒಲಿಂಪಿಕ್ಸ್ ಎಂದು ಘೋಷಿಸಿದ್ದಾರೆ.
20 ವರ್ಷಗಳಿಂದ ಬಾಕ್ಸಿಂಗ್ ವೃತ್ತಿಬದುಕಿನಲ್ಲಿ ತೊಡಗಿಸಿಕೊಂಡಿರುವ ಮೇರಿ, ‘ಟೋಕಿಯೋ ಒಲಿಂಪಿಕ್ಸ್ ನನ್ನ ಕೊನೆಯ ಒಲಿಂಪಿಕ್ಸ್ ಆಗಲಿದೆ. ನನಗೀಗ 38 ವರ್ಷ. 2024ರ ಪ್ಯಾರಿಸ್ ಒಲಿಂಪಿಕ್ಸ್ ವೇಳೆಗೆ 42 ವರ್ಷ ಆಗಿರಲಿದೆ. ವಯಸ್ಸು ಮುಖ್ಯವಾಗಲಿದೆ. ನಾನು ಆಡಲು ಸಿದ್ಧನಿದ್ದೇನೆ ಎಂದರೂ ನನಗೆ ಸ್ಪರ್ಧಿಸಲು ಅವಕಾಶ ಸಿಗುವುದಿಲ್ಲ’ ಎಂದಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಬಾಕ್ಸರ್‌ಗಳಿಗೆ ಗರಿಷ್ಠ 40 ವರ್ಷ ವಯಸ್ಸು ಮಿತಿಗೊಳಿಸಲಾಗಿದೆ. ಕೋವಿಡ್-19 ಕಾರಣದಿಂದಾಗಿ ಟೂರ್ನಿ ಒಂದು ವರ್ಷ ಮುಂದೂಡಲ್ಪಟ್ಟಿದ್ದರಿಂದ ವಯೋಮಿತಿಯನ್ನು ಒಂದು ವರ್ಷ ಸಡಿಲಗೊಳಿಸಿ 41 ವರ್ಷಕ್ಕೆ ಮಿತಿಗೊಳಿಸಲಾಗಿದೆ.
ಟೋಕಿಯೋ ಒಲಿಂಪಿಕ್ಸ್ ಕುರಿತು ಮಹತ್ವದ ನಿರ್ಧಾರ ಪ್ರಕಟಿಸಿದ ಜಪಾನ್; ಕ್ರೀಡಾಸಕ್ತರಿಗೆ ನಿರಾಸೆ!
ನಾನು ಒಲಿಂಪಿಯನ್ ಎನಿಸಿಕೊಳ್ಳುವುದೇ ನನಗೆ ಹೆಮ್ಮೆಯ ವಿಚಾರ. ನಾನು ಕಳೆದ 20 ವರ್ಷಗಳಿಂದ ದೇಶವನ್ನು ಪ್ರತಿನಿಧಿಸಿದ್ದಾನೆ. ಈ ಅವಧಿಯಲ್ಲಿ ಹಲವಾರು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ಧೇನೆ. ನಾನು ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿದ್ದೇನೆ ಎಂದು ಮೇರಿ ಕೋಮ್ ಹೇಳಿದ್ದಾರೆ.