ಮಲೇಷ್ಯಾ ಓಪನ್ ಮುಂದಕ್ಕೆ: ಒಲಿಂಪಿಕ್ಸ್ ಕನವರಿಕೆಯಲ್ಲಿದ್ದ ಸೈನಾ, ಶ್ರೀಕಾಂತ್‌ಗೆ ಶಾಕ್
ಕೋವಿಡ್ ಭೀತಿಯ ಕಾರಣದಿಂದಾಗಿ ಮೇ 25ರಿಂದ ಆರಂಭವಾಗಬೇಕಿದ್ದ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಮುಂದೂಡಿಕೆಯಾಗಿದೆ. ಇದರೊಂದಿಗೆ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಎದುರು ನೋಡುತ್ತಿದ್ದ ಸೈನಾ ನೆಹ್ವಾಲ್ ಹಾಗೂ ಕಿದಂಬಿ ಶ್ರೀಕಾಂತ್‌ಗೆ ಬಿಗ್ ಶಾಕ್ ಎದುರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಮೇ.08): ಕೋವಿಡ್ ಭೀತಿಯ ಕಾರಣದಿಂದಾಗಿ ಮೇ 25ರಿಂದ 30ರ ವರೆಗೂ ಕೌಲಾಲಂಪುರದಲ್ಲಿ ನಡೆಯಬೇಕಿದ್ದ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಮುಂದೂಡಿಕೆಯಾಗಿದೆ
ಭಾರತದ ತಾರಾ ಶಟ್ಲರ್‌ಗಳಾದ ಸೈನಾ ನೆಹ್ವಾಲ್ ಹಾಗೂ ಕಿದಂಬಿ ಶ್ರೀಕಾಂತ್, ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ಅನುಮಾನವೆನಿಸಿದೆ. ಈ ಇಬ್ಬರಿಗೆ ಒಲಿಂಪಿಕ್ಸ್ ಅರ್ಹತೆ ಪಡೆಯಲು ಇದು ಕೊನೆಯ ಅವಕಾಶವಾಗಿತ್ತು.
ಭಾರತ ರಿಲೇ ತಂಡದ ಟೋಕಿಯೋ ಒಲಿಂಪಿಕ್ ಕನಸು ಭಗ್ನ..!
ಕೆಲ ದಿನಗಳ ಹಿಂದಷ್ಟೇ ಇಂಡಿಯಾ ಓಪನ್ ಟೂರ್ನಿಯನ್ನು ಮುಂದೂಡಲಾಗಿತ್ತು. ಇದಾದ ಬಳಿಕ ಮಲೇಷ್ಯಾ ಓಪನ್ ಸಹ ಮುಂದೂಡಿಕೆಯಾಗಿದ್ದು, ಪ್ರಯಾಣ ನಿರ್ಬಂಧವಿರುವ ಕಾರಣ ಸಿಂಗಾಪುರ ಓಪನ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗುವ ಸಾಧ್ಯತೆ ಕಡಿಮೆ ಇದೆ. ಸಿಂಗಲ್ಸ್ ವಿಭಾಗದಲ್ಲಿ ಪಿ.ವಿ.ಸಿಂಧು, ಬಿ.ಸಾಯಿ ಪ್ರಣೀತ್, ಪುರುಷರ ಡಬಲ್ಸ್‌ನಲ್ಲಿ ಚಿರಾಗ್ ಹಾಗೂ ಸಾತ್ವಿಕ್ ಈಗಾಗಲೇ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.