ಭಾರತ ರಿಲೇ ತಂಡದ ಟೋಕಿಯೋ ಒಲಿಂಪಿಕ್ ಕನಸು ಭಗ್ನ..!
ಕೊರೋನಾ ಅಟ್ಟಹಾಸಕ್ಕೆ ಭಾರತ ಪುರುಷರ ಹಾಗೂ ಮಹಿಳಾ ರಿಲೇ ತಂಡದ ಟೋಕಿಯೋ ಒಲಿಂಪಿಕ್ಸ್ ಕನಸು ಕನಸು ಭಗ್ನವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ:(ಏ.29): ಮಹಾಮಾರಿ ಕೊರೋನಾ ಸೋಂಕಿನ ಪರಿಣಾಮಗಳು ಕ್ರೀಡಾ ಚಟುವಟಿಕೆಗಳ ಮೇಲೂ ಬೀರುತ್ತಿದ್ದು, ಇದೀಗ ಭಾರತದ ತಾರಾ ಅಥ್ಲೀಟ್‌ಗಳಾದ ಹಿಮಾ ದಾಸ್, ದ್ಯುತಿ ಚಾಂದ್ ಸೇರಿದಂತೆ ಭಾರತ ರಿಲೇ ತಂಡಕ್ಕೆ ಮೇ 1ರಿಂದ ಪೋಲೆಂಡ್‌ನಲ್ಲಿ ಆರಂಭಗೊಳ್ಳಲಿರುವ ಒಲಿಂಪಿಕ್ ಅರ್ಹತಾ ವಿಶ್ವ ಅಥ್ಲೆಟಿಕ್ಸ್ ರೀಲೆಯಲ್ಲಿ ಭಾಗವಹಿಸುವ ಅವಕಾಶ ಕೈತಪ್ಪಿದೆ
ಕೊರೋನಾ ಕಾರಣ ಭಾರತದಿಂದ ಆ್ಯಮ್‌ಸ್ಟರ್‌ಡ್ಯಾಮ್‌ಗೆ ಸಂಪರ್ಕ ಕಲ್ಪಿಸುವ ವಿಮಾನಗಳ ಸಂಚಾರ ರದ್ದುಗೊಳಿಸಲಾಗಿದ್ದು, ಭಾರತದ 4*400 ಮಹಿಳಾ ಮತ್ತು ಪುರುಷ ತಂಡಕ್ಕೆ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕ್ರೀಡಾಕೂಟ ನಡೆಯಲಿರುವ ಸಿಲೆಸಿಯಾಗೆ ತೆರಳಲಿರುವ ವಿಮಾನಗಳ ಹುಡುಕಾಟದಲ್ಲಿ ಭಾರತದ ಅಥ್ಲೆಟಿಕ್ಸ್ ಫೆಡರೇಷನ್ ಪ್ರಯತ್ನ ನಡೆಸಿತಾದರೂ ಫಲ ಸಿಕ್ಕಿಲ್ಲ.
ಈ ಸಂದರ್ಭದಲ್ಲಿ ತುಂಬಾ ಬೇಸರವಾಗುತ್ತಿದೆ. ಭಾರತ ಹಾಗೂ ವಾರ್ಸ್ವಾ(ಪೋಲೆಂಡ್) ನಡುವೆ ಯಾವುದೇ ನೇರ ವಿಮಾನವಿಲ್ಲ. ಸಾಕಷ್ಟು ಪ್ರಯತ್ನದ ಹೊರತಾಗಿಯೂ ನಮಗೆ ಮತ್ತೊಂದು ವಿಮಾನ ದಾರಿ ಸಿಕ್ಕಿಲ್ಲ. ಕಳೆದ 24 ಗಂಟೆಯಲ್ಲಿ ನಾವು ಪರ್ಯಾಯ ವಿಮಾನ ಹಾರಟದ ಬಗ್ಗೆ ನಿರಂತರ ಹುಡುಕಾಟ ನಡೆಸಿದ್ದೇವೆ. ವಿಶ್ವ ಅಥ್ಲೇಟಿಕ್ಸ್ ಸಂಸ್ಥೆ, ಕ್ರೀಡಾಕೂಟದ ಆಯೋಜಕರಲ್ಲಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಬಳಿ ನಿರಂತರ ಮಾತುಕತೆ ನಡೆಸಿದರೂ ಸದ್ಯದ ಪರಿಸ್ಥಿತಿಯಲ್ಲಿ ಯಾರೂ ನಮ್ಮ ಮನವಿಯನ್ನು ಒಪ್ಪುತ್ತಿಲ್ಲ ಎಂದು ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ ಅಧ್ಯಕ್ಷ ಅದಿಲ್ಲೇ ಜೆ ಸುಮರಿವಾಲಾ ತಿಳಿಸಿದ್ದಾರೆ.
ಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ ಟೋಕಿಯೋ ಒಲಿಂಪಿಕ್ಸ್ ಕನಸು ಭಗ್ನ!
ವಿಶ್ವ ಅಥ್ಲೆಟಿಕ್ಸ್ ರೀಲೆಯಲ್ಲಿ ಪಾಲ್ಗೊಂಡ ಅಗ್ರ 8 ತಂಡಗಳು ನೇರವಾಗಿ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಳ್ಳಲಿವೆ. 2019ರಲ್ಲಿ ದೋಹಾದಲ್ಲಿ ನಡೆದ ವಿಶ್ವ ಅಥ್ಲೇಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಭಾರತ ಮಿಶ್ರ ರಿಲೇ ತಂಡವು ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.