Asianet Suvarna News Asianet Suvarna News

ಭಾರತವನ್ನು ಪ್ರತಿನಿಧಿಸಿದ ಎಲ್ಲರೂ ಚಾಂಪಿಯನ್‌: ಪ್ರಧಾನಿ ನರೇಂದ್ರ ಮೋದಿ

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಎಲ್ಲರಿಗೂ ಮೋದಿ ಶುಭ ಹಾರೈಕೆ

* ಭಾರತವನ್ನು ಒಲಿಂಪಿಕ್ಸ್‌ನಲ್ಲಿ ಎಲ್ಲರೂ ಚಾಂಪಿಯನ್

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ 7 ಪದಕ ಜಯಿಸಿದ ಭಾರತ

India represented Every athlete at Tokyo Olympics is a champion PM Narendra Modi kvn
Author
New Delhi, First Published Aug 9, 2021, 12:42 PM IST

ಹೊಸದಿಲ್ಲಿ(ಆ.09): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳು ದೇಶವನ್ನು ಹೆಮ್ಮೆ ಹಾಗೂ ಸಂಭ್ರಮ ಪಡುವಂತೆ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿದ ಅವರು, ಯುವ ಪ್ರತಿಭೆಗಳಿಗೆ ಮುಂದೆ ದೇಶವನ್ನು ಪ್ರತಿನಿಧಿಸಲು ಅವಕಾಶ ಸಿಗಬೇಕಿದೆ. ಇದು ಕ್ರೀಡೆಯನ್ನು ಮತ್ತಷ್ಟು ಉತ್ತಮಪಡಿಸಲು ಕಠಿಣ ಪರಿಶ್ರಮ ಪಡಬೇಕಾದ ಸಮಯ ಎಂದಿದ್ದಾರೆ. ‘ಒಲಿಂಪಿಕ್ಸ್‌ ಕ್ರೀಡಾಕೂಟ ಮುಗಿದಿದೆ. ಉತ್ತಮ ಪ್ರದರ್ಶನ ನೀಡಿದ ಎಲ್ಲಾ ಭಾರತೀಯ ಕ್ರೀಡಾಳುಗಳಿಗೆ ಅಭಿನಂದನೆಗಳು. ಅವರು ಒಗ್ಗಟ್ಟು, ಸಮರ್ಪಣೆ, ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಭಾರತವನ್ನು ಪ್ರತಿನಿಧಿಸಿದ ಎಲ್ಲರೂ ಚಾಂಪಿಯನ್‌ ಎಂದ ಅವರು, ಉತ್ತಮವಾಗಿ ಒಲಿಂಪಿಕ್ಸ್‌ ಆಯೋಜಿಸಿದ ಟೋಕಿಯೋಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

ಸಯೊನಾರ ಟೋಕಿಯೋ; ಒಲಿಂಪಿಕ್ಸ್‌ಗೆ ಅಧಿಕೃತ ತೆರೆ

ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತವು ಒಂದು ಚಿನ್ನ, ಎರಡು ಬೆಳ್ಳಿ ಸೇರಿ ಒಟ್ಟು 7 ಪದಕಗಳನ್ನು ಜಯಿಸುವುದರೊಂದಿಗೆ ಸಾರ್ವಕಾಲಿಕ ಶ್ರೇಷ್ಠ ಸಾಧನೆ ಮಾಡಿದೆ. ಮೀರಬಾಯಿ ಚಾನು ಮಹಿಳೆಯರ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಶುಭಾರಂಭ ಮಾಡಿದರೆ, ಪಿ.ವಿ ಸಿಂಧು, ಲೊವ್ಲೀನಾ ಬೊರ್ಗೊಹೈನ್, ಭಾರತೀಯ ಹಾಕಿ ತಂಡ ಹಾಗೂ ಭಜರಂಗ್ ಪೂನಿಯಾ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಇನ್ನು ಮಿಂಚಿನ ಪ್ರದರ್ಶನ ತೋರಿದ ಕುಸ್ತಿಪಟು ರವಿಕುಮಾರ್ ದಹಿಯಾ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರೆ, ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಅಥ್ಲೆಟಿಕ್ಸ್‌ನಲ್ಲಿ ಶತಮಾನದ ಬಳಿಕ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದು ಇತಿಹಾಸ ನಿರ್ಮಿಸಿತ್ತು.

Follow Us:
Download App:
  • android
  • ios