Asianet Suvarna News Asianet Suvarna News

ಖ್ಯಾತ ಕುಸ್ತಿಪಟು ಸುಶೀಲ್‌ ಕುಮಾರ್ ಟೋಕಿಯೋ ಒಲಿಂಪಿಕ್ಸ್‌ ಕನಸು ಭಗ್ನ!

ಎರಡು ಬಾರಿ ಒಲಿಂಪಿಕ್ಸ್‌ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್‌ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಕನಸು ಭಗ್ನವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

End of Road Tokyo Olympics for Wrestler Sushil Kumar kvn
Author
New Delhi, First Published Apr 24, 2021, 3:34 PM IST

ನವದೆಹಲಿ(ಏ.24): 2 ಬಾರಿ ಒಲಿಂಪಿಕ್‌ ಪದಕ ವಿಜೇತ ಕುಸ್ತಿಪಟು 37 ವರ್ಷದ ಸುಶೀಲ್ ಕುಮಾರ್‌ರ ಟೋಕಿಯೋ ಒಲಿಂಪಿಕ್ಸ್‌ ಕನಸು ಭಗ್ನಗೊಂಡಿದೆ.

74 ಕೆ.ಜಿ ವಿಭಾಗದಲ್ಲಿ ಸುಶೀಲ್‌ ಬದಲು ಅಮಿತ್‌ ಧನ್‌ಕರ್‌ರನ್ನು ಭಾರತೀಯ ಕುಸ್ತಿ ಫೆಡರೇಷನ್‌ ಆಯ್ಕೆ ಮಾಡಿದ್ದು, ಮೇ 6ರಿಂದ 9ರ ವರೆಗೂ ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯಲಿರುವ ಅರ್ಹತಾ ಟೂರ್ನಿಗೆ ಕಳುಹಿಸಲು ನಿರ್ಧರಿಸಿದೆ. ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಇದು ಕೊನೆಯ ಅರ್ಹತಾ ಟೂರ್ನಿಯಾಗಿದೆ. 

ಅಮಿತ್ ನಮ್ಮ ಗುರುವಿನ ಬಳಿಯೇ ಕುಸ್ತಿ ಕಲಿತಿದ್ದು, ಅವರೊಬ್ಬ ಒಳ್ಳೆಯ ಕುಸ್ತಿಪಟು. ಟೋಕಿಯೋ ಒಲಿಂಪಿಕ್ಸ್‌ ಕ್ವಾಲಿಫೈಯರ್‌ ಸ್ಪರ್ಧೆಯಲ್ಲಿ ಅಮಿತ್‌ ಧನ್‌ಕರ್‌ ಪಾಲ್ಗೊಳ್ಳುತ್ತಿರುವುದು ಖುಷಿಯಾಗುತ್ತಿದೆ. ಅಮಿತ್‌ ಧನ್‌ಕರ್‌ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸುವುದನ್ನು ಎದುರು ನೋಡುತ್ತಿದ್ದೇನೆ. ಆತನಿಗೆ ಒಳ್ಲೆಯದಾಗಲಿ. ಎಲ್ಲಾ ಅಥ್ಲೀಟ್‌ಗಳು ಕೋವಿಡ್ 19 ಸೋಂಕಿನ ಕುರಿತಂತೆ ಜಾಗೃತರಾಗಿರಿ ಎಂದು ಸುಶೀಲ್ ಕುಮಾರ್ ಕಿವಿಮಾತು ಹೇಳಿದ್ದಾರೆ. 

2028ರ ಒಲಿಂಪಿಕ್ಸ್‌ಗೆ ಭಾರತ ಕ್ರಿಕೆಟ್‌ ತಂಡ: ಬಿಸಿಸಿಐ ಗ್ರೀನ್ ಸಿಗ್ನಲ್‌

2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಸುಶೀಲ್ ಕುಮಾರ್, 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು. 
 

Follow Us:
Download App:
  • android
  • ios