ಮಡಿ​ಕೇ​ರಿ(ಏ.09): ಕೊಡಗು ಮೂಲದ ಕೇಳಪಂಡ ಗಣಪತಿ ಚೆಂಗಪ್ಪ ಸೇಯ್ಲಿಂಗ್‌(ಹಾಯಿ ದೋಣಿ)ನಲ್ಲಿ ಟೋಕಿಯೋ ಒಲಿಂಪಿ​ಕ್ಸ್‌ಗೆ ಅರ್ಹತೆ ಪಡೆ​ದಿ​ದ್ದಾ​ರೆ. 

ಒಮಾನ್‌ನಲ್ಲಿ ನಡೆದ ಏಷ್ಯನ್‌ ಅರ್ಹತಾ ಸುತ್ತಿನಲ್ಲಿ 49ಇಆರ್‌ ವಿಭಾಗದಲ್ಲಿ ವರುಣ್‌ ಥಾಕ್ಕರ್‌ ಜೊತೆ ಗಣಪತಿ ಒಲಿಂಪಿಕ್ಸ್‌ ಕೋಟಾ ಗಳಿಸಿದರು. ಲೇಸರ್‌ ಸ್ಟ್ಯಾಂಡರ್ಡ್‌ ಕ್ಲಾಸ್‌ ಸ್ಪರ್ಧೆಯಲ್ಲಿ ಚೆನ್ನೈನ ವಿಷ್ಣು ಸರವಣನ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. ಇದೇ ಮೊದಲ ಬಾರಿಗೆ ಸೇಯ್ಲಿಂಗ್‌ ಸ್ಪರ್ಧೆಯಲ್ಲಿ ಭಾರತದ ನಾಲ್ವರು ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಬುಧವಾರ ನೇತ್ರಾ ಕುಮನನ್‌ ಅರ್ಹತೆ ಗಳಿಸಿದ್ದರು. ಸೇಯ್ಲಿಂಗ್‌ ಸ್ಪರ್ಧೆಯಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎನ್ನುವ ಕೀರ್ತಿಗೆ ನೇತ್ರಾ ಕುಮನನ್‌ ಪಾತ್ರರಾಗಿದ್ದಾರೆ.

ಟೇಬಲ್‌ ಟೆನಿಸ್‌: ಮನಿಕಾ ಬಾತ್ರಾ, ಶರತ್ ಕಮಲ್ ಸೇರಿ ನಾಲ್ವರು ಒಲಿಂಪಿಕ್ಸ್‌ಗೆ ಅರ್ಹತೆ

ಗಣಪತಿ ಹಾಗೂ ವರುಣ್‌ 2018ರ ಏಷ್ಯನ್‌ ಗೇಮ್ಸ್‌ನಲ್ಲಿ ಕಂಚಿ​ನ ಪದಕ ಪಡೆದಿದ್ದರು. ಈ ಇಬ್ಬರು ಅನೇಕ ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ಒಟ್ಟಿಗೆ ಸ್ಪರ್ಧಿಸಿದ್ದಾರೆ. ಗಣಪತಿ ಹಾಗೂ ವರುಣ್‌ ಅವರ ಈ ಸಾಧನೆಗೆ ಕೇಂದ್ರ ಕ್ರೀಡಾಸಚಿವ ಕಿರಣ್ ರಿಜಿಜು ಅಭಿನಂದನೆಗಳನ್ನು ಸಲ್ಲಿಸಿದ್ದು, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರಲಿ ಎಂದು ಶುಭ ಹಾರೈಸಿದ್ದಾರೆ