'ಕೊರೋನಾದಿಂದ ಮತ್ತೊಮ್ಮೆ ಟೋಕಿಯೋ ಒಲಿಂಪಿಕ್ಸ್ ಮುಂದೂಡಿಕೆ ಕಷ್ಟ'
ಪರಿಸ್ಥಿತಿ ನಿಯಂತ್ರಣಕ್ಕೆ ಬರದೆ ಮುಂದಿನ ವರ್ಷ ಮತ್ತೆ ಕ್ರೀಡಾಕೂಟವನ್ನು ಮುಂದೂಡಬೇಕಾದರೆ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಆಯೋಜನಾ ಸಮಿತಿಯ ವಕ್ತಾರ ಮಸಾ ಟಕಾಯ ‘ನಮ್ಮ ಬಳಿ ಪ್ಲ್ಯಾನ್ ‘ಬಿ’ ಇಲ್ಲ. ಒಲಿಂಪಿಕ್ಸ್‌ಗೆ ನೂತನ ದಿನಾಂಕಗಳನ್ನು ಪ್ರಕಟಿಸಲಾಗಿದೆ. ನಿಗದಿತ ವೇಳಾಪಟ್ಟಿಯಂತೆಯೇ ಕ್ರೀಡಾಕೂಟ ನಡೆಸಲು ನಾವು ಬದ್ಧರಿದ್ದೇವೆ. ಮತ್ತೊಮ್ಮೆ ಒಲಿಂಪಿಕ್ಸ್ ಮುಂದೂಡುವುದು ಕಷ್ಟ’ ಎಂದಿದ್ದಾರೆ.
2021ರ ಟೋಕಿಯೋ ಒಲಿಂಪಿಕ್ಸ್‌ಗೆ ಡೇಟ್ ಫಿಕ್ಸ್..!
ನಾವೀಗ ಹೊಸ ಗುರಿಯೊಂದಿಗೆ ಹೆಜ್ಜೆ ಹಾಕುತ್ತಿದ್ದೇವೆ ಎಂದಿರುವ ಒಲಿಂಪಿಕ್ ಆಯೋಜನಾ ಸಮಿತಿಯ ವಕ್ತಾರ ಮಸಾ ಟಕಾಯ, ಮುಂದಿನ ವರ್ಷ ಮತ್ತಷ್ಟು ಅದ್ಭುತವಾಗಿ ಕೂಟವನ್ನು ಸಂಘಟಿಸುವುದಾಗಿ ತಿಳಿಸಿದ್ದಾರೆ. ಕೋವಿಡ್ 19 ಜಾಗತಿಕ ಪಿಡುಗಾಗಿ ಪರಿಣಮಿಸಿದೆ. ನೂತನ ಟೋಕಿಯೋ ಒಲಿಂಪಿಕ್ಸ್ ಆಯೋಜನೆಗೆ ಇನ್ನೂ 15 ತಿಂಗಳುಗಳು ಬಾಕಿ ಉಳಿದಿವೆ. ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುವಂತೆ ಕಾಣುತ್ತಿಲ್ಲ.
ಟೋಕಿಯೋ ಒಲಿಂಪಿಕ್ಸ್ ಮುಂದೂಡಿಕೆ: ಜಪಾನಿಗೆ 20 ಸಾವಿರ ಕೋಟಿ ರುಪಾಯಿ ಹೊರೆ..!
ಇದೀಗ 2021ರ ನೂತನ ವೇಳಾಪಟ್ಟಿ ಪ್ರಕಟವಾಗಿದ್ದು, ಜುಲೈ 23ರಿಂದ ಆಗಸ್ಟ್ 08ರ ವರೆಗೆ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿದೆ. ಈಗಾಗಲೇ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಮುಂದೂಡಿದ್ದರಿಂದ ಜಪಾನಿಗೆ ಸುಮಾರು 20 ಸಾವಿರ ಕೋಟಿ ಹೊರೆಯಾಗಬಹುದು ಎಂದು ಅಂದಾಜಿಸಲಾಗಿದೆ.
"