Asianet Suvarna News

ಟೋಕಿಯೋ ಒಲಿಂಪಿಕ್ಸ್‌ಗೆ ಭಾರತ ಮಹಿಳಾ ಹಾಕಿ ತಂಡ ಪ್ರಕಟ

* ಟೋಕಿಯೋ ಒಲಿಂಪಿಕ್ಸ್‌ಗೆ ಭಾರತ ಮಹಿಳಾ ಹಾಕಿ ತಂಡ ಪ್ರಕಟ

* 16 ಆಟಗಾರ್ತಿಯರನ್ನೊಳಗೊಂಡ ಭಾರತ ತಂಡಕ್ಕೆ ರಾಣಿ ರಾಂಪಾಲ್ ನಾಯಕಿ

* ಟೋಕಿಯೋ ಒಲಿಂಪಿಕ್ಸ್ ಟೂರ್ನಿಯು ಜುಲೈ 23ರಿಂದ ಆರಂಭ

Hockey India Announces 16 member womens Hockey squad for Tokyo Olympics kvn
Author
Bengaluru, First Published Jun 18, 2021, 8:51 AM IST
  • Facebook
  • Twitter
  • Whatsapp

ಬೆಂಗಳೂರು(ಜೂ.18): ಜುಲೈ 23ರಿಂದ ಆರಂಭಗೊಳ್ಳಲಿರುವ ಟೋಕಿಯೋ ಒಲಿಂಪಿಕ್ಸ್‌ಗೆ ಗುರುವಾರ ಭಾರತ ಮಹಿಳಾ ಹಾಕಿ ತಂಡ ಪ್ರಕಟಗೊಂಡಿತು. 16 ಸದಸ್ಯೆಯರ ತಂಡಕ್ಕೆ ರಾಣಿ ರಾಂಪಾಲ್‌ರನ್ನು ನಾಯಕಿಯನ್ನಾಗಿ ನೇಮಿಸಲಾಗಿದೆ. 

2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಆಡಿದ್ದ 8 ಅನುಭವಿ ಆಟಗಾರ್ತಿಯರು ಹಾಗೂ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ ಆಡಲು ಸಜ್ಜಾಗಿರುವ 8  ಹೊಸ ಆಟಗಾರ್ತಿಯರನ್ನೊಳಗೊಂಡ ಬಲಿಷ್ಠ ಮಹಿಳಾ ಹಾಕಿ ತಂಡವನ್ನು ಪ್ರಕಟಿಸಲಾಗಿದೆ. ಬರೋಬ್ಬರಿ 36 ವರ್ಷಗಳ ಬಳಿಕ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಭಾರತ ಮಹಿಳಾ ಹಾಕಿ ತಂಡವು ಅರ್ಹತೆಯನ್ನು ಗಿಟ್ಟಿಸಿಕೊಂಡಿತ್ತು. ಇದು ಭಾರತ ಮಹಿಳಾ ಹಾಕಿ ತಂಡವು ಪಾಲ್ಗೊಳ್ಳುತ್ತಿರುವ ಮೂರನೇ ಒಲಿಂಪಿಕ್ಸ್‌ ಎನಿಸಿದೆ. ಈ ಮೊದಲು 1980ರ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಭಾರತ ಮಹಿಳಾ ಹಾಕಿ ತಂಡವು ಕಣಕ್ಕಿಳಿದಿತ್ತು. ಇದಾದ ಬಳಿಕ 2016ರಲ್ಲಿ ಎರಡನೇ ಬಾರಿಗೆ ಮಹಿಳಾ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿದಿತ್ತು.

ರಾಣಿ ರಾಂಪಾಲ್, ಸವಿತಾ, ದೀಪ್ ಗ್ರೇಸ್ ಎಕ್ಕಾ, ಸುಶೀಲಾ ಚಾನು, ಪುಖಾರಂಭಂ, ಮೋನಿಕಾ, ನಿಕ್ಕಿ ಪ್ರಧಾನ್, ನವಜೋತ್ ಕೌರ್ ಹಾಗೂ ವಂದನಾ ಕಠಾರಿಯಾ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಸದ್ಯ ಭಾರತ ಮಹಿಳಾ ಹಾಕಿ ತಂಡವು ಬೆಂಗಳೂರಿನ ಸಾಯ್‌ನಲ್ಲಿ ಅಭ್ಯಾಸ ನಡೆಸುತ್ತಿದೆ. ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 23ರಿಂದ ಆರಂಭವಾಗಲಿದೆ.

ತಂಡ:

ಗೋಲ್‌ಕೀಪರ್‌ - ಸವಿತಾ.

ಡಿಫೆಂಡರ್ಸ್‌ - ದೀಪ್‌ ಗ್ರೇಸ್‌, ನಿಕ್ಕಿ ಪ್ರಧಾನ್‌, ಗುರ್ಜಿತ್‌ ಕೌರ್‌, ಉದಿತಾ.

ಮಿಡ್‌ಫೀಲ್ಡ​ರ್ಸ್ - ನಿಶಾ, ನೇಹಾ, ಸುಶೀಲಾ ಚಾನು, ಮೋನಿಕಾ, ನವ್‌ಜೋತ್‌, ಸಲೀಮಾ.

ಫಾರ್ವರ್ಡ್ಸ್‌ - ರಾಣಿ ರಾಂಪಾಲ್‌, ನವ್‌ನೀತ್‌ ಕೌರ್‌, ಲಾಲ್ರೆಮ್ಸಿಯಾಮಿ, ವಂದನಾ ಕಟಾರಿಯಾ, ಶರ್ಮಿಳಾ ದೇವಿ.

Follow Us:
Download App:
  • android
  • ios