ಟೋಕಿಯೋ ಒಲಿಂಪಿಕ್ಸ್‌: ದ್ಯುತಿ, ಹಿಮಾಗೆ ಕಡೇ ಚಾನ್ಸ್‌

* ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಹಿಮಾದಾದ್, ದ್ಯುತಿ ಚಾಂದ್‌ಗೆ ಕಡೆಯ ಚಾನ್ಸ್

* ರಾಷ್ಟ್ರೀಯ ಅಂತಾರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಶುಕ್ರವಾರದಿಂದ ಆರಂಭ

* ಒಲಿಂಪಿಕ್ಸ್‌ ರೇಸ್‌ ಮೇಲೆ ಕಣ್ಣಿಟ್ಟಿರುವ ಭಾರತೀಯ ಅಥ್ಲೀಟ್‌ಗಳು

Dutee Chand Hima Das Among Top Athletes To Make One Last Chance At Tokyo Olympic Berths kvn

ಪಟಿಯಾಲಾ(ಜೂ.25): 5 ದಿನಗಳ ರಾಷ್ಟ್ರೀಯ ಅಂತಾರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಶುಕ್ರವಾರದಿಂದ ಆರಂಭವಾಗುತ್ತಿದೆ. ದ್ಯುತಿ ಚಾಂದ್‌, ಹಿಮಾ ದಾಸ್‌ ಸೇರಿದಂತೆ ದೇಶದ ತಾರಾ ಅಥ್ಲೀಟ್‌ಗಳು ಇದರಲ್ಲಿ ಪಾಲ್ಗೊಳ್ಳುತ್ತಿದ್ದು, ಒಲಿಂಪಿಕ್ಸ್‌ ಅರ್ಹತೆ ಗಿಟ್ಟಿಸಿಕೊಳ್ಳಲು ಕಡೆಯ ಪ್ರಯತ್ನ ಮಾಡಲಿದ್ದಾರೆ. ಬೆಂಗಳೂರಿನಲ್ಲಿ ನಡೆಯಬೇಕಿದ್ದ ಈ ಕ್ರೀಡಾಕೂಟ ಕೊರೋನಾ ಹಿನ್ನೆಲೆಯಲ್ಲಿ ಪಟಿಯಾಲಾಕ್ಕೆ ವರ್ಗಾವಣೆ ಆಗಿದೆ.

ಇತ್ತೀಚೆಗಷ್ಟೇ ಮುಕ್ತಾಯವಾದ ಇಂಡಿಯನ್‌ ಗ್ರಾಂಡ್‌ ಫ್ರಿಕ್ಸ್‌ 4ನಲ್ಲಿ 100 ಮೀಟರ್ ಓಟದ ಸ್ಫರ್ಧೆಯಲ್ಲಿ ದ್ಯುತಿ ಚಾಂದ್ ಕೇವಲ 0.02 ಸೆಕೆಂಡ್ ಅಂತರದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆಗಳಿಸುವ ಅವಕಾಶದಿಂದ ವಂಚಿತರಾಗಿದ್ದರು. 

ಇನ್ನು ಈಗಾಗಲೇ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡಿರುವ ಯುವ ಜಾವಲಿನ್ ಪಟು ನೀರಜ್ ಚೋಪ್ರಾ ಸದ್ಯ ಯೂರೋಪ್‌ನಲ್ಲಿ ತರಬೇತಿ ಹಾಗೂ ಸ್ಫರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. 3000 ಮೀಟರ್ ಸ್ಟೀಪಲ್‌ಚೇಸರ್ ಅವಿನಾಶ್ ಸಾಬ್ಲೆ ಈ ಇಬ್ಬರು ಅಥ್ಲೀಟ್‌ಗಳು ರಾಷ್ಟ್ರೀಯ ಅಂತಾರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ. 

ಹರ್ಯಾಣ ಅಥ್ಲೀಟ್‌ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ರೆ 6 ಕೋಟಿ ರುಪಾಯಿ ಬಹುಮಾನ!

4*400 ಮೀಟರ್ ಮಿಶ್ರ ರಿಲೇ ಅಲ್ಲದೇ 11 ಅಥ್ಲೀಟ್‌ಗಳು ಈಗಾಗಲೇ ವೈಯುಕ್ತಿಕ ವಿಭಾಗದಲ್ಲಿ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದಾರೆ.

ಮಹಿಳಾ ಏಷ್ಯಾ ಕಪ್‌: ಅರ್ಹತಾ ಸುತ್ತು ಪ್ರಕಟ

ಕೌಲಾಲಂಪುರ: ಮುಂದಿನ ವರ್ಷ ಜ.20ರಿಂದ ಫೆ.6ರವರೆಗೆ ಭಾರತದಲ್ಲಿ ನಡೆಯಲಿರುವ ಎಎಫ್‌ಸಿ ಮಹಿಳಾ ಏಷ್ಯಾ ಕಪ್‌ ಫುಟ್ಬಾಲ್‌ ಪಂದ್ಯಾವಳಿಯ ಅರ್ಹತಾ ಸುತ್ತಿಗೆ ವೇಳಾಪಟ್ಟಿ ಅಂತಿಮಗೊಂಡಿದೆ. 28 ತಂಡಗಳನ್ನು 8 ಗುಂಪುಗಳಾಗಿ ವಿಭಜಿಸಲಾಗಿದ್ದು, ಪ್ರತಿ ಗುಂಪಿನಲ್ಲಿ ವಿಜೇತ ತಂಡ ಮುಖ್ಯ ಸುತ್ತಿಗೆ ಅರ್ಹತೆ ಪಡೆಯಲಿದೆ. ಬರುವ ಸೆ.13ರಿಂದ 25ರವರೆಗೆ ಪಂದ್ಯಗಳು ನಡೆಯಲಿವೆ. ಆತಿಥೇಯ ಭಾರತ, ಜಪಾನ್‌, ಆಸ್ಪ್ರೇಲಿಯಾ, ಚೀನಾ ಈಗಾಗಲೇ ಮುಖ್ಯ ಸುತ್ತಿಗೆ ಅರ್ಹತೆ ಪಡೆದಿವೆ.
 

Latest Videos
Follow Us:
Download App:
  • android
  • ios