ಮಾನವರ ಬದಲು ರೊಬೋಟ್‌ ಬಳಕೆಗೆ ಮುಂದಾದ ಚೀನಾ ಕ್ರೀಡಾಪಟುಗಳ ಸೇವೆಗೆ ರೊಬೋಟ್‌ಗಳ ಬಳಕೆ ಬೀಜಿಂಗ್‌ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್‌

ಬೀಜಿಂಗ್‌(ಜ.1): ಚಳಿಗಾಲದ ಒಲಿಂಪಿಕ್‌ಗೆ ಇನ್ನೇನು ದಿನಗಣನೆ ಶುರುವಾಗಿದೆ. ಆಧುನಿಕ ತಂತ್ರಜ್ಞಾನದ ಆವಿಷ್ಕಾರ ಹಾಗೂ ಬಳಕೆಗೆ ಹೆಸರುವಾಸಿಯಾಗಿರುವ ಚೀನಾ ಈಗ ಚಳಿಗಾಲದ ಒಲಿಂಪಿಕ್‌ಗೆ ಅಥ್ಲೆಟ್‌ಗಳ ನೆರವಿಗೆ ಮನುಷ್ಯರನ್ನು ಬಳಸುವ ಬದಲು ರೊಬೋಟ್‌ಗಳನ್ನು ಬಳಸಲು ನಿರ್ಧರಿಸಿದೆ. ಈಗಾಗಲೇ ಇಡೀ ಪ್ರಪಂಚ ಕೋವಿಡ್ ಸೋಂಕಿನ ಕರಾಳ ಛಾಯೆಯಿಂದ ಬಳಲುತ್ತಿದೆ. ಹೀಗಾಗಿ ಮನುಷ್ಯರ ಮೂಲಕ ಮತ್ತೊಬ್ಬರಿಗೆ ಸೋಂಕು ಹರಡದಂತೆ ತಡೆಯುವ ಸಲುವಾಗಿ ಚೀನಾ ಈ ನಿರ್ಧಾರಕ್ಕೆ ಬಂದಿದೆ. ಈ ರೋಬೋಟ್‌ ಕಾರ್ಯ ನಿರ್ವಹಿಸುವ ರೀತಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಚಳಿಗಾಲದ ಒಲಿಂಪಿಕ್‌ ಬೀಜಿಂಗ್‌ನಲ್ಲಿ (Beijing) ಫೆಬ್ರವರಿ ನಾಲ್ಕರಿಂದ ಶುರುವಾಗಲಿದ್ದು ಫೆಬ್ರವರಿ ಇಪ್ಪತ್ತರವರೆಗೆ ಇರಲಿದೆ. ಕೋವಿಡ್ -19 ಸೋಂಕು ಹರಡುವ ಭೀತಿ ಹೆಚ್ಚಾಗಿರುವುದರಿಂದ ಚೀನಾ ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತವಾಗಿದೆ ಮತ್ತು ಮಾನವ ಸಂವಹನವನ್ನು ಕಡಿಮೆ ಮಾಡುವ ಮೂಲಕ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಕಾಪಾಡಿಕೊಳ್ಳಲು ರೋಬೋಟ್‌ಗಳನ್ನು ನಿಯೋಜಿಸಿದೆ. ಇನ್ನು ಈ ಬೀಜಿಂಗ್‌ ಒಲಿಂಪಿಕ್‌ನಲ್ಲಿ ಭಾಗವಹಿಸಲು ವಿಶ್ವದೆಲ್ಲೆಡೆಯ 2,000 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಆಗಮಿಸುತ್ತಿದ್ದಾರೆ. ಹೀಗಾಗಿ ಸೋಂಕು ಹರಡುವ ಅಪಾಯವನ್ನು ಕಡಿಮೆ ಮಾಡಲು, ಈಗ ಕ್ರೀಡಾಪಟುಗಳು ತಂಗಿರುವ ಬೀಜಿಂಗ್ ಹೋಟೆಲ್‌ನಲ್ಲಿ ಕೊಠಡಿ ಸೇವೆಗೆ ಸಿಬ್ಬಂದಿಯ ಬದಲಾಗಿ ರೋಬೋಟ್‌ಗಳನ್ನು ನಿಯೋಜಿಸಲಾಗಿದೆ.

Scroll to load tweet…

ಸುದ್ದಿಸಂಸ್ತೆ ರಾಯಿಟರ್ಸ್ ಪೋಸ್ಟ್‌ ಮಾಡಿರುವ ವೀಡಿಯೊವೊಂದು ರೋಬೋಟ್ ಅತಿಥಿಗಳಿಗೆ ಆಹಾರವನ್ನು ಹೇಗೆ ತಲುಪಿಸುತ್ತದೆ ಎಂಬುದನ್ನು ತೋರಿಸುತ್ತದೆ. ರೋಬೋಟ್ ಕ್ರೀಡಾಪಟುಗಳು ತಂಗಿರುವ ಕೋಣೆಯ ಬಾಗಿಲಿನ ಮುಂದೆ ಬರುತ್ತದೆ ಮತ್ತು ಅತಿಥಿಯ ಪಿನ್‌ಕೋಡ್ ಅನ್ನು ಟೈಪ್ ಮಾಡುತ್ತದೆ ಮತ್ತು ನಂತರ ರೋಬೋಟ್ ಪಳಗೆ ಪ್ಯಾಕ್ ಮಾಡಿದ ಆಹಾರವಿರುವ ಬಾಕ್ಸ್‌ ತೆರೆದುಕೊಳ್ಳುತ್ತದೆ. ಈ ವೇಳೆ ಅತಿಥಿಗಳು ಅದನ್ನು ಸ್ವೀಕರಿಸಬಹುದು.

Fact Check: ಅಬ್ಬಬ್ಬಾ...! ರೋಬೋಟ್‌ ಬಾಡಿಗಾರ್ಡ್‌ಗೆ 55 ಕೋಟಿ!

ಈ ವೀಡಿಯೊವನ್ನು ಪೋಸ್ಟ್‌ ಮಾಡಿದ ರಾಯಿಟರ್ಸ್ (Reuters), 'ಚಳಿಗಾಲದ ಒಲಿಂಪಿಕ್ಸ್ ಸಮೀಪಿಸುತ್ತಿರುವಾಗ , ಬೀಜಿಂಗ್ (Beijing) ಹೋಟೆಲ್‌ಗಳಲ್ಲಿ ರೂಮ್ ಸರ್ವಿಸ್‌ಗೆ ರೋಬೋಟ್‌ಗಳನ್ನು ಚೀನಾ ಬಳಸುತ್ತಿದೆ. ರೋಬೋಟ್‌ಗಳು ಅತಿಥಿ ಇರುವ ಕೋಣೆಯ ಬಾಗಿಲಿಗೆ ಬರುತ್ತವೆ. ಈ ವೇಳೆ ಅತಿಥಿಯು ರೋಬೋಟ್‌ನಲ್ಲಿ ಪಿನ್ ಕೋಡ್ ಅನ್ನು ಟೈಪ್ ಮಾಡುತ್ತಾರೆ. ಈ ವೇಳೆ ಆಹಾರದ ಪೊಟ್ಟಣ ಇರುವ ಬಾಕ್ಸ್ ತೆರೆದುಕೊಳ್ಳುತ್ತದೆ. ಅತಿಥಿಯು ಆಹಾರವನ್ನು ತೆಗೆದುಕೊಂಡ ನಂತರ ರೋಬೋಟ್ ಮುಚ್ಚುತ್ತದೆ ಮತ್ತು ಮುಂದಿನ ಕೋಣೆಯತ್ತ ಚಲಿಸುತ್ತದೆ' ಎಂದು ಟ್ವಿಟ್‌ ಮಾಡಿದೆ. 

ಏರೋ ಇಂಡಿಯಾ: ಮಾತು, ಭಾವನೆ ವ್ಯಕ್ತಪಡಿಸುವ ರೋಬೊ, ಇದು ವಿದ್ಯಾರ್ಥಿಗಳ ಸಾಧನೆ!

ರಾಯಿಟರ್ಸ್ ಹಂಚಿಕೊಂಡ ಮತ್ತೊಂದು ವೀಡಿಯೊದಲ್ಲಿ ಸ್ವಯಂಚಾಲಿತ ಯಂತ್ರವೊಂದು ಊಟ ನೀಡುವುದನ್ನು ತೋರಿಸುತ್ತದೆ. ಎಬಿಸಿ ನ್ಯೂಸ್ ಪ್ರಕಾರ, ಟೋಕಿಯೊ ಗೇಮ್ಸ್‌ಗೆ ಹೋಲಿಸಿದರೆ ಚಳಿಗಾಲದ ಒಲಿಂಪಿಕ್ಸ್‌ಗೆ ಭೇಟಿ ನೀಡುವ ಮಾಧ್ಯಮಗಳು, ಕ್ರೀಡಾಪಟುಗಳು ಮತ್ತು ಅಧಿಕಾರಿಗಳಿಗೆ ಕೋವಿಡ್ ಪ್ರೋಟೋಕಾಲ್ ಅನ್ನು ಮತ್ತುಷ್ಟು ಕಟ್ಟುನಿಟ್ಟಾಗಿ ಅಳವಡಿಸಲಾಗುತ್ತಿದೆ. 2014 ರಲ್ಲಿ, ಚೀನಾದ ಅಧ್ಯಕ್ಷ (Chinese President) ಕ್ಸಿ ಜಿನ್‌ಪಿಂಗ್ (Xi Jinping) "ರೋಬೋಟ್ ಕ್ರಾಂತಿ" ಗಾಗಿ ಕರೆ ನೀಡಿದ್ದರು ಮತ್ತು ಅಂದಿನಿಂದ ದೇಶವು ಯಾಂತ್ರೀಕರಣವಾಗುತ್ತಾ ಹೋಗಿದ್ದು, ಮಾನವರ ಬದಲು ಚೀನಾ ರೊಬೋಟ್‌ಗಳನ್ನು ಬಳಸಲು ಶುರು ಮಾಡಿದೆ.