Asianet Suvarna News Asianet Suvarna News

ಟೋಕಿಯೋ ಒಲಿಂಪಿಕ್ಸ್‌ಗೆ ತಾರಾ ಶಟ್ಲರ್‌ ಕ್ಯಾರೋಲಿನಾ ಮರಿನ್‌ ಗೈರು

* ಟೋಕಿಯೋ ಒಲಿಂಪಿಕ್ಸ್‌ ಕೂಟದಿಂದ ಹಿಂದೆ ಸರಿದ ಬ್ಯಾಡ್ಮಿಂಟನ್ ತಾರೆ ಕ್ಯಾರೋಲಿನಾ ಮರಿನ್‌

* ಕ್ಯಾರೋಲಿನಾ ಮರಿನ್‌ 2016ರ ರಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ

* ಗಾಯದ ಸಮಸ್ಯೆಯಿಂದಾಗಿ ಟೋಕಿಯೋ ಒಲಿಂಪಿಕ್ಸ್‌ನಿಂದ ಹಿಂದೆ ಸರಿದ ಮರಿನ್

Badminton champion Carolina Marin withdraws from Tokyo Olympics due to knee injury kvn
Author
New Delhi, First Published Jun 2, 2021, 12:28 PM IST

ನವದೆಹಲಿ(ಜೂ.02): ಮಂಡಿ ಗಾಯದ ಸಮಸ್ಯೆ ಎದುರಿಸುತ್ತಿರುವ ಸ್ಪೇನ್‌ನ ತಾರಾ ಶಟ್ಲರ್‌ ಕ್ಯಾರೋಲಿನಾ ಮರಿನ್‌ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ. ಈ ವಾರ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. 

27 ವರ್ಷದ ಕ್ಯಾರೋಲಿನಾ ಮರಿನ್‌, ಕಳೆದ ವಾರವಷ್ಟೇ ತಾವು ಅಭ್ಯಾಸ ನಡೆಸುವ ವೇಳೆ ಮಂಡಿನೋವಿಗೆ ಒಳಗಾಗಿರುವುದಾಗಿ ತಿಳಿಸಿದ್ದರು. ಇದೀಗ ತಾವು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವುದಾಗಿ ತಿಳಿಸಿದ್ದಾರೆ. 

ವಿಶ್ವದ 4ನೇ ಶ್ರೇಯಾಂಕಿತೆ ಕ್ಯಾರೋಲಿನಾ ಮರಿನ್ ಈ ಸೀಸನ್‌ನಲ್ಲಿ ಥಾಯ್ಲೆಂಡ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಇನ್ನು ಬಿಡಬ್ಲ್ಯೂಎಫ್‌ ವರ್ಲ್ಡ್ ಟೂರ್ ಫೈನಲ್‌ನಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದರು. ಇತ್ತೀಚೆಗಷ್ಟೇ ಮುಕ್ತಾಯವಾದ ಸ್ವಿಸ್ ಓಪನ್ ಹಾಗೂ ಯೂರೋಪಿಯನ್ ಓಪನ್‌ನಲ್ಲಿಯೂ ಮರಿನ್‌ ಚಾಂಪಿಯನ್‌ ಆಗಿ ಬೀಗಿದ್ದರು.

ಟೋಕಿಯೋ ಒಲಿಂಪಿಕ್ಸ್‌ನಿಂದ ಅಧಿಕೃತವಾಗಿ ಹೊರಬಿದ್ದ ಸೈನಾ, ಶ್ರೀಕಾಂತ್‌

3 ಬಾರಿ ವಿಶ್ವ ಚಾಂಪಿಯನ್‌ ಕ್ಯಾರೋಲಿನಾ ಮರಿನ್‌, ಹಾಲಿ ಒಲಿಂಪಿಕ್‌ ಚಾಂಪಿಯನ್‌ ಆಗಿದ್ದಾರೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಮರಿನ್‌, ಭಾರತದ ಪಿ.ವಿ.ಸಿಂಧು ವಿರುದ್ಧ ಗೆದ್ದು ಚಿನ್ನ ಜಯಿಸಿದ್ದರು.

ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟವು ಜುಲೈ 23ರಿಂದ ಆರಂಭವಾಗಲಿದೆ. ಬ್ಯಾಡ್ಮಿಂಟನ್ ವಿಭಾಗದಲ್ಲಿ ಈಗಾಗಲೇ ಭಾರತದಿಂದ ರಿಯೋ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು, ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಬಿ. ಸಾಯಿ ಪ್ರಣೀತ್ ಹಾಗೂ ಪುರುಷರ ಡಬಲ್ಸ್ ವಿಭಾಗದಿಂದ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಟೋಕಿಯೋ ಒಲಿಂಪಿಕ್ಸ್‌ಗೆ ಪಾಲ್ಗೊಳ್ಳಲು ಅರ್ಹತೆ ಪಡೆದಿದ್ದಾರೆ.

 

Follow Us:
Download App:
  • android
  • ios