ನವದೆಹಲಿ: ಜಿಯೋ ಪ್ರವೇಶದಿಂದಾಗಿ ತಲ್ಲಣ ಗೊಂಡಿರುವ ಮೊಬೈಲ್ ಕಂಪನಿಗಳು, ಇದುವರೆಗೆ ನೀಡಲಾಗುತ್ತಿದ್ದ ಆಜೀವ ಉಚಿತ ಇನ್ ಕಮಿಂಗ್ (ಒಳಬರುವ ಕರೆಗಳ) ಕರೆಗಳ ಸೇವೆ ಸ್ಥಗಿತಕ್ಕೆ ನಿರ್ಧರಿಸಿವೆ. 

ಹೀಗಾಗಿ ಇನ್ನು ಮೊಬೈಲ್ ಬಳಕೆದಾರರು ಕರೆ ಮಾಡಲು ಬಳಸದೇ ಇರುವ ಸಿಮ್‌ಕಾರ್ಡನ್ನು ಜೀವಂತವಾಗಿ ಇರಿಸಿಕೊಳ್ಳಲು ಶುಲ್ಕ ನೀಡುವುದು ಅನಿವಾರ್ಯ.

ಅಂದರೆ ಒಳಬರುವ ಕರೆಗಳಿಗೆ ಮಾತ್ರ ಇಟ್ಟುಕೊಂಡಿದ್ದ, ಕರೆ ಮಾಡಲು ಬಳಸದೇ ಇದ್ದ ಸಿಮ್‌ಕಾರ್ಡ್‌ಗಳಿಗೂ ಇನ್ನು ಮುಂದೆ ರೀಚಾರ್ಜ್ ಮಾಡಿಸುವುದು ಕಡ್ಡಾಯ. ಈಗಾಗಲೇ ಏರ್‌ಟೆಲ್, ವೊಡಾಫೋನ್ ಕಂಪನಿಗಳು 30, 35, 65, 95 ರು.ಗಳ ಪ್ಲ್ಯಾನ್ ಪ್ರಕಟಿಸಿದೆ.