Asianet Suvarna News Asianet Suvarna News

ಮೊದಲ ಗಗನಯಾನದಲ್ಲಿ ಮಹಿಳೆಯರಿಲ್ಲ!

ಮೊದಲ ಗಗನಯಾನದಲ್ಲಿ ಮಹಿಳೆಯರಿಲ್ಲ!| ಅರ್ಹ ಮಹಿಳಾ ಅಭ್ಯರ್ಥಿಗಳ ಅಲಭ್ಯತೆ ಹಿನ್ನೆಲೆ

Women astronauts unlikely to be on inaugural Gaganyaan Mission
Author
Bangalore, First Published Aug 29, 2019, 9:02 AM IST

ನವದೆಹಲಿ[ಆ.29]: 2022 ರಲ್ಲಿ ಭಾರತ ಕೈಗೊಳ್ಳಲಿರುವ ಬಹು ನಿರೀಕ್ಷಿತ ಮಾನವ ಸಹಿತ ಗಗನಯಾನದಲ್ಲಿ ಮಹಿಳಾ ಯಾನಿ ಇರುವುದು ಅನುಮಾನ ಎನ್ನಲಾಗಿದೆ. ಸೇನಾ ಪಡೆಗಳಲ್ಲಿ ತರಬೇತಿಯಲ್ಲಿರುವ ಪೈಲಟ್‌ಗಳನ್ನು ಇಸ್ರೋ ಗಗನಯಾನಕ್ಕೆ ಕಳುಹಿಸಲು ಉದ್ದೇಶಿಸಿದ್ದು, ಸದ್ಯ ಅಂಥ ಯಾವುದೇ ಮಹಿಳಾ ಅಭ್ಯರ್ಥಿಗಳು ಲಭ್ಯ ಇರದಿರುವುದರಿಂದ ಮೊದಲ ಗಗನ ಯಾನದಲ್ಲಿ ಮಹಿಳಾ ಯಾನಿಗಳು ಇರುವುದು ಅನುಮಾನ ಎನ್ನಲಾಗಿದೆ.

ದೇಶದ ಮೊದಲ ಮಾನವ ಸಹಿತ ಗಗನಯಾನಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಪ್ರಕ್ರೀಯೆ ನಡೆಯುತ್ತಿದ್ದು ಸೆಪ್ಟೆಂಬರ್‌ ಅಂತ್ಯಕ್ಕೆ ಅಂತಿಮ ಪಟ್ಟಿತಯಾರಾಗಲಿದೆ. ಅಂತಿಮವಾದ ಅಭ್ಯರ್ಥಿಗಳನ್ನು ನವೆಂಬರ್‌ ಬಳಿಕ ತರಬೇತಿಗಾಗಿ ರಷ್ಯಾಗೆ ಕಳುಹಿಸಿಕೊಡಲಾಗುವುದು. ಅದರಲ್ಲಿ ಮೂವರನ್ನು ಗಗನಯಾನಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಸ್ರೋ ಮಾನವಸಹಿತ ಅಂತರಿಕ್ಷ ಯಾನ ಹೇಗಿರುತ್ತದೆ?

ಬೇರೆ ಬೇರೆ ದೇಶಗಳ ಮೊದಲ ಗಗನಯಾನದಲ್ಲಿ ತರಬೇತಿ ಪೈಲಟ್‌ಗಳನ್ನು ಬಳಸಲಾಗಿತ್ತು ಹಾಗಾಗಿ ನಾವು ಅಂಥ ಅಭ್ಯರ್ಥಿಗಳನ್ನು ಹುಡುಕುತ್ತಿದ್ದೇವೆ. ಅದರೆ ದೇಶದಲ್ಲಿ ಅಂಥ ಅಭ್ಯರ್ಥಿ ಇರದಿರುವುದರಿಂದ ಈ ಬಾರಿಯ ಗಗನಯಾನದಲ್ಲಿ ಮಹಿಳೆ ಇರುವುದು ಅನುಮಾನ. ಆದರೆ ಮುಂದಿನ ಯಾನಗಳ ವೇಳೆ ಸೇನೆ ಸೇರಿದಂತೆ ಇತರೆ ಮಹಿಳೆಯರಿಗೂ ಇಂಥ ಅವಕಾಶ ಸಿಗಬಹುದು ಎಂದು ಮೂಲಗಳು ಹೇಳಿವೆ.

Follow Us:
Download App:
  • android
  • ios