ಬ್ಲ್ಯಾಕ್‌ಬೆರಿ ಒಎಸ್, ಬ್ಲ್ಯಾಕ್‌'ಬೆರಿ 10 ಮತ್ತು ವಿಂಡೋಸ್ 8.0 ಮತ್ತು ಅದಕ್ಕಿಂತ ಹಳೆಯದಾದ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಒಂದು ಕಹಿ ಸುದ್ದಿಯಿದೆ. ಈ ಎಲ್ಲಾ ಫೋನ್ ಬಳಕೆದಾರರಿಗೆ 2017, ಡಿ.31ರ ನಂತರ ವಾಟ್ಸಾಪ್ ತನ್ನ ಸೇವೆ ಕೊನೆಗೊಳಿಸಲಿದೆ.

ನವದೆಹಲಿ (ಡಿ.26): ಬ್ಲ್ಯಾಕ್‌ಬೆರಿ ಒಎಸ್, ಬ್ಲ್ಯಾಕ್‌'ಬೆರಿ 10 ಮತ್ತು ವಿಂಡೋಸ್ 8.0 ಮತ್ತು ಅದಕ್ಕಿಂತ ಹಳೆಯದಾದ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಒಂದು ಕಹಿ ಸುದ್ದಿಯಿದೆ. ಈ ಎಲ್ಲಾ ಫೋನ್ ಬಳಕೆದಾರರಿಗೆ 2017, ಡಿ.31ರ ನಂತರ ವಾಟ್ಸಾಪ್ ತನ್ನ ಸೇವೆ ಕೊನೆಗೊಳಿಸಲಿದೆ.

ಈ ಸಂಬಂಧ ವಾಟ್ಸಾಪ್ ಬ್ಲಾಗ್‌ನಲ್ಲಿ ಸ್ಪಷ್ಟ ಮಾಹಿತಿ ನೀಡಲಾಗಿದೆ. ನೋಕಿಯಾ ಎಸ್‌40ಯಿಂದಲೂ ತಮ್ಮ ಸೇವೆ 2018, ಡಿ.31ರಿಂದ ಕೊನೆಯಾಗಲಿದೆ ಎಂದು ತಿಳಿಸಿತ್ತು.

ಅಲ್ಲದೆ, ಆ್ಯಂಡ್ರಾಯ್ಡ್ 3.3.7 ಮತ್ತು ಅದಕ್ಕಿಂತ ಹಳೆಯ (ಜಿಂಜರ್‌ಬ್ರೆಡ್) ಫೋನ್‌ಗಳಲ್ಲಿ 2020, ಫೆ.1ರಿಂದ ಕಾರ್ಯ ಸ್ಥಗಿತಗೊಳಿಸುವುದಾಗಿ ಆ್ಯಪ್ ತಿಳಿಸಿತ್ತು.