ನವದೆಹಲಿ: ಜನಪ್ರಿಯ ಮೊಬೈಲ್ ಸಾಮಾಜಿಕ ಮಾಧ್ಯಮವಾದ ವಾಟ್ಸಾಪ್‌ನಲ್ಲಿ ಇದೇ ಮೊದಲ ಬಾರಿಗೆ ಗ್ರೂಪ್ ಕಾಲಿಂಗ್ (ಸಮೂಹ ಸಂಭಾಷಣೆ) ವ್ಯವಸ್ಥೆ ಕಲ್ಪಿಸಲಾಗಿದೆ. ಐಫೋನ್ ಹಾಗೂ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಈ ಸೌಲಭ್ಯ ಲಭಿಸಲಿದೆ. 

ಒಂದೇ ಸಲಕ್ಕೆ 4 ಜನರು ವಿಡಿಯೋ ಹಾಗೂ ಆಡಿಯೋ ಕಾಲಿಂಗ್ ನಲ್ಲಿ ಸಂಭಾಷಣೆ ನಡೆಸುವ ವ್ಯವಸ್ಥೆಯನ್ನು ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್ ಸಂಸ್ಥೆ ತನ್ನ ಗ್ರಾಹಕರಿಗೆ ಕಲ್ಪಿಸಿದೆ. ಗ್ರೂಪ್ ಕಾಲ್ ಮಾಡಲು ಚಂದಾದಾರರು ಮಾಡಬೇಕಾಗಿದ್ದಿಷ್ಟೇ. ವಿಡಿಯೋ ಕಾಲ್ ಆಪ್ಷನ್‌ಗೆ ಹೋಗಿ ಬಲಭಾಗದ ಮೂಲೆಯಲ್ಲಿರುವ ‘ಆ್ಯಡ್ ಪಾರ್ಟಿಸಿಪಂಟ್’ಅನ್ನು ಆಯ್ಕೆ ಮಾಡಿಕೊಳ್ಳಬೇಕು. 

ಆಗ ಗರಿಷ್ಠ 4 ಜನರು ಗ್ರೂಪ್ ಕಾಲಿಂಗ್ ನಡೆಸಬಹುದಾಗಿದೆ. ‘ಈ ಸಂಭಾಷಣೆಗಳು ಗೌಪ್ಯವಾಗಿ ಇರಲಿದ್ದು, ಯಾವುದೇ ಸೋರಿಕೆಯ ಪ್ರಶ್ನೆ ಇರದು. ಐಫೋನ್ ಹಾಗೂ ಹಾಗೂ ಆ್ಯಂಡ್ರಾಯ್ಡ್ ವರ್ಷನ್‌ಗಳಲ್ಲಿ ಇದು ಲಭ್ಯವಿರಲಿದೆ’ ಎಂದು ವಾಟ್ಸಾಪ್ ಹೇಳಿದೆ.