ಡಾರ್ಕ್ಮೋಡ್ ಫೀಚರ್ ಪರಿಚಯಿಸಿದ ವಾಟ್ಸಾಪ್| ಅಪ್‌ಡೇಟ್ ಸಿಗದಿದ್ದರೆ, ಸೆಟ್ಟಿಂಗ್ ಬದಲಾಯಿಸಿಕೊಳ್ಳಿ
ನವದೆಹಲಿ: ಜನಪ್ರಿಯ ಸಂದೇಶ ವಿನಿಮಯ ಆ್ಯಪ್ ವಾಟ್ಸಾಪ್ ಬಹುನಿರೀಕ್ಷಿತ ಡಾರ್ಕ್ಮೋಡ್ ಅನ್ನು ಸಾರ್ವಜನಿಕರಿಗೆ ಪರಿಚಯಿಸಿದೆ. ಆ್ಯಂಡ್ರಾಯ್ಡ್ ಅಥವಾ ಐಫೋನ್‌ನಲ್ಲಿ ವಾಟ್ಸಾಪ್ ಅನ್ನು ಅಪ್‌ಡೇಟ್ ಮಾಡಿದರೆ ಹೊಸ ಫೀಚರ್ ಲಭ್ಯವಾಗಲಿದೆ. ಒಂದು ವೇಳೆ ಈ ಅಪ್‌ಡೇಟ್ ಲಭ್ಯವಾಗದೇ ಇದ್ದಲ್ಲಿ ಫೋನ್‌ನ ಸೆಟ್ಟಿಂಗ್ಸ್‌ನಲ್ಲಿ ಡಾರ್ಕ್ಮೋಡ್ ಅನ್ನು ಆನ್ ಮಾಡಿಕೊಳ್ಳುವ ಮೂಲಕವೂ ವಾಟ್ಸಾಪ್ ಹೊಸ ಅಪ್‌ಡೇಟ್ ಪಡೆದುಕೊಳ್ಳಬಹುದಾಗಿದೆ. ಆದರೆ ಭಾರತೀಯ ಬಳಕೆದಾರರಿಗೆ ಇನ್ನೂ ಈ ಸೌಲಭ್ಯ ಲಭ್ಯವಾಗಿಲ್ಲ
ಡಾರ್ಕ್ಮೋಡ್‌ನಲ್ಲಿ ಹಿಂಬದಿ ಪರದೆ ಪೂರ್ಣವಾಗಿ ಕಪ್ಪುಬಣ್ಣದಲ್ಲಿ ಇರದೆ, ಗಾಢ ಬೂದುಬಣ್ಣದಲ್ಲಿದ್ದು, ಅಕ್ಷಯ ಬಿಳಿಯ ಬಣ್ಣದಲ್ಲಿ ಕಾಣಸಿಗಲಿದೆ.
ಡಾರ್ಕ್ ಮೋಡ್ ಏಕೆ?
ಡಾರ್ಕ್ಮೋಡ್‌ನಲ್ಲಿ ಕಡಿಮೆ ಪ್ರಮಾಣದ ಬೆಳಕು ಮೊಬೈಲ್‌ನಿಂದ ಬಿಡುಗಡೆ ಆಗುವ ಕಾರಣ, ಸಂದೇಶಗಳನ್ನು ಓದುವಾಗ ಕಣ್ಣುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲಿದೆ. ಜೊತೆಗೆ ರಾತ್ರಿಯ ವೇಳೆ ಸಂದೇಶಗಳು ಬಂದಾಗ ನಿಮ್ಮ ಫೋನ್‌ನಿಂದ ಬೆಳಕು ಬಂದು ಇತರಿರಿಗೆ ತೊಂದರೆ ಆಗುವ ಪ್ರಮೇಯವನ್ನು ತಪ್ಪಿಸಬಹುದಾಗಿದೆ. ಅಲ್ಲದೇ ಸಂದೇಶವನ್ನು ಸುಲಭವಾಗಿ ಓದುವುದಕ್ಕೂ ಸಹಾಯವಾಗಲಿದೆ.
