ವಾಟ್ಸಪ್‌ನ 'Delete For Everyone' ಫೀಚರ್‌ನಲ್ಲಿ ಬದಲಾವಣೆ!

  • ಕಳೆದ ಕೆಲ ತಿಂಗಳ ಹಿಂದಷ್ಟೇ ಪರಿಚಯಿಸಲಾಗಿದ್ದ ‘ಡಿಲೀಟ್ ಫಾರ್ ಎವ್ರಿಒನ್’ ಸೌಲಭ್ಯ
  • ಒಂದು ಶರತ್ತಿನೊಂದಿಗೆ ‘ಡಿಲೀಟ್ ಫಾರ್ ಎವ್ರಿಒನ್’ ಕಾಲಮಿತಿಯಲ್ಲಿ ಸಣ್ಣ, ಮಹತ್ವದ ಬದಲಾವಣೆ
WhatsApp delete for everyone time limit increased

ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಜನಪ್ರಿಯ ಮೆಸೇಜಿಂಗ್ ಅಪ್ಲಿಕೆಶನ್ ವಾಟ್ಸಪ್, ತನ್ನ ಸೇವೆಯಲ್ಲಿ ಬದಲಾವಣೆ ಮಾಡಿಕೊಂಡು ಬಂದಿದೆ.  ಕಳೆದ ಕೆಲ ತಿಂಗಳುಗಳ ಹಿಂದೆ ಮೆಸೇಜ್ ಕಳುಹಿಸಿದ ಬಳಿಕ ಅದನ್ನು ಡಿಲೀಟ್ ಮಾಡುವ ಸೌಲಭ್ಯವನ್ನು ವಾಟ್ಸಪ್ ಕಲ್ಪಿಸಿತ್ತು. ಆದರೆ ಇದೀಗ ಆ ಸೌಲಭ್ಯದಲ್ಲೂ ವಾಟ್ಸಪ್ ಸಣ್ಣದಾದ, ಆದರೆ ಮಹತ್ವದ ಬದಲಾವಣೆಯನ್ನು ತಂದಿದೆ.

‘ಡಿಲೀಟ್ ಫಾರ್ ಎವ್ರಿಒನ್’ ಸೌಲಭ್ಯವನ್ನು ಮೊದಲ ಬಾರಿಗೆ ಪರಿಚಯಿಸಿದಾಗ, ಬಳಕೆದಾರರಿಗೆ  ಡಿಲೀಟ್ ಮಾಡಲು 1 ನಿಮಿಷಕ್ಕಿಂತಲೂ ಕಡಿಮೆ ಕಾಲಾವಕಾಶವಿತ್ತು. ಬಳಿಕ ಕಾಲಮಿತಿಯನ್ನು 1 ಘಂಟೆ 8 ನಿಮಿಷ 16 ಸೆಕೆಂಡ್‌ಗಳಿಗೆ ಏರಿಸಲಾಗಿತ್ತು.

ಇದೀಗ  ಹೊಸ ಆವೃತ್ತಿಯಲ್ಲಿ ಈ ಕಾಲಮಿತಿಯನ್ನು 13 ಘಂಟೆ 8 ನಿಮಿಷ 16 ಸೆಕೆಂಡ್‌ಗಳಿಗೆ ಏರಿಕೆಯಾಗಲಿದೆ ಎಂದು  WABetaInfo ಟ್ವೀಟ್ ಮಾಡಿದೆ.

 

ಆದರೆ ಈ ಹೊಸ ಡಿಲೀಟ್ ಫೀಚರ್‌ಗೆ ಒಂದು ಶರತ್ತು ಕೂಡಾ ಇದೆ.  ಮೆಸೇಜ್ ಕಳುಹಿಸಿದವರಿಗೆ  ಆ ಆಯ್ಕೆ ಲಭ್ಯವಾದಲ್ಲಿ ಮಾತ್ರ  ಡಿಲೀಟ್ ಮಾಡಲು ಸಾಧ್ಯ. ಯಾವುದೇ ಕಾರಣದಿಂದ ಆ ಆಯ್ಕೆ ನಿಮಗೆ ಬರದೇ ಇದ್ದರೆ, ನೀವು ‘ಡಿಲೀಟ್ ಫಾರ್ ಎವ್ರಿ ಒನ್’ಮಾಡುವ ಹಾಗಿಲ್ಲ!

ಉದಾಹರಣೆಗೆ, ನೀವು ಯಾರಿಗಾದರೂ ರಾತ್ರಿ 11 ಘಂಟೆಗೆ ಸಂದೇಶವನ್ನು ಕಳುಹಿಸುತ್ತೀರಿ ಎಂದಿಟ್ಟುಕೊಳ್ಳಿ. ಆತ/ಆಕೆ ಆ ಮೆಸೇಜನ್ನು ರಿಸೀವ್ ಮಾಡುತ್ತಾರೆ.  ಆದರೆ ಆ ಮೆಸೇಜನ್ನು ನೋಡುವ ಮೊದಲು ಅವರು ತಮ್ಮ ಫೋನ್ ಸ್ವಿಚ್ ಆಫ್ ಮಾಡ್ತಾರೆ ಎಂದು ಭಾವಿಸಿ.  ಮೆಸೇಜ್ ಕಳುಹಿಸಿದ 2 ಘಂಟೆ ಬಳಿಕ ನೀವು ‘ಡಿಲೀಟ್ ಫಾರ್ ಎವ್ರಿಒನ್’ಆಯ್ಕೆ ಮಾಡಿಕೊಂಡಲ್ಲಿ, ಮೆಸೇಜ್ ರಿಸೀವ್ ಮಾಡಿದವರ ಫೋನ್ ಸ್ವಿಚ್ ಆನ್ ಆಗಿದ್ದರೆ, ನೀವು ಉದ್ದೇಶಿಸಿರುವ ಮೆಸೇಜ್ ಡಿಲೀಟ್ ಆಗುತ್ತೆ. ಒಂದು ವೇಳೆ ಮೆಸೇಜ್ ರಿಸೀವ್ ಮಾಡಿದವರ ಫೋನ್ ಮರುದಿನ 1 ಘಂಟೆಯವರೆಗೂ [13 ಘಂಟೆಗಳ ಕಾಲ] ಸ್ವಿಚ್ ಆನ್ ಆಗದಿದ್ದಲ್ಲಿ ಆ ಮೆಸೇಜ್  ಡಿಲೀಟ್ ಮಾಡುವ ಆಯ್ಕೆ ನಿಮಗೆ ಲಭಿಸುವುದಿಲ್ಲ. 

Latest Videos
Follow Us:
Download App:
  • android
  • ios