ಪುಣೆಯಲ್ಲಿ ಸೇನಾ ದಿನ ಆಚರಣೆ: ಸೈನಿಕರ ಜತೆ ಹೆಜ್ಜೆ ಹಾಕಲಿವೆ ರೋಬೊ ಹೇಸರಗತ್ತೆ!

ಸೇನಾ ದಿನದಂದು ಸೈನಿಕರೊಡನೆ ರೋಬೊಟಿಕ್ ಹೇಸರಗತ್ತೆಗಳು ಪಥಸಂಚಲನದಲ್ಲಿ ಸಾಗಲಿವೆ. ಇದೊಂದು ಗಟ್ಟಿಯಾದ, ಎಲ್ಲ ಪ್ರದೇಶಗಳಿಗೂ ಹೊಂದಿಕೊಳ್ಳಬಲ್ಲ ಯಂತ್ರವಾಗಿದೆ. ಮೆಟ್ಟಿಲುಗಳನ್ನು ಹತ್ತಬಲ್ಲದು, ಕಡಿದಾದ ಬೆಟ್ಟಗಳನ್ನು ಏರಬಲ್ಲದು, ಮತ್ತು ಅಡಚಣೆಗಳು ತುಂಬಿರುವ ಪ್ರದೇಶಗಳಲ್ಲೂ ಸಂಚರಿಸಬಲ್ಲದು.
 

Unveiling of Modern Technology at Army Day Celebrations in Pune

ಗಿರೀಶ್ ಲಿಂಗಣ್ಣ 

ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ 

ಬೆಂಗಳೂರು(ಜ.15):  ಜನವರಿ 15ರಂದು ಇದೇ ಮೊದಲ ಬಾರಿಗೆ ಪುಣೆ ನಗರ 'ಭಾರತೀಯ ಸೇನಾ ದಿನಾಚರಣೆಯ ಪಥಸಂಚಲನದ ಆತಿಥ್ಯ ವಹಿಸಲಿದೆ. ಈ ಸಮಾರಂಭದಲ್ಲಿ ಒಂದು ವಿಶೇಷ ತಂಡ ನಡೆಸಲಿರುವ ಪಥ ಸಂಚಲನ ವೈಶಿಷ್ಟ್ಯಪೂರ್ಣವಾಗಿರಲಿದೆ. 

ಈ ತಂಡ ಕಾಡ್ರವೆಡಲ್ ಅನ್ ಮ್ಯಾನ್ಸ್ ಗೌಂಡ್ ವೆಹಿಕಲ್ (ಕು-ಯುಜಿವಿ) ಎಂದು ಕರೆಯಲಾಗುವ ಎಂಟು ಆಧುನಿಕ ರೋಬೊಟಿಕ ಹೇಸರಗತ್ತೆಗಳನ್ನು (ಮೂಲ್) ಒಳಗೊಂಡಿದೆ! ನೂತನವಾಗಿ ಸೇನೆಗೆ ಸೇರ್ಪಡೆಗೊಂಡಿರುವ ಈ ಯಂತ್ರಗಳು ಆಧುನಿಕ ತಂತ್ರ ಜ್ಞಾನವನ್ನು ಬಳಸಿಕೊಳ್ಳಬೇಕೆಂಬ ಭಾರತೀಯ ಸೇನೆಯ ಪ್ರಯತ್ನದ ಭಾಗವಾಗಿದ್ದು, ಭವಿಷ್ಯದಲ್ಲಿ ಭಾರತೀಯ ಸೇನಾ ಉಪಕರಣಗಳು ಹೇಗಿರಬಹುದು ಎಂಬ ಸುಳಿವು ನೀಡಿವೆ. 

ಯಶಸ್ವಿಯಾದ ಭಾರತದ ದೇಶೀಯ ನಿರ್ಮಾಣದ ನಾಗ್ ಎಂಕೆ 2: ಪಾಕಿಸ್ತಾನ, ಚೀನಾಗಳ ನಿದ್ದೆ ಕಸಿದ ಆ್ಯಂಟಿ ಟ್ಯಾಂಕ್ ಕ್ಷಿಪಣಿ

ಕಾಡ್ರಪೆಡಲ್ ಎಂದರೆ 'ನಾಲ್ಕು ಕಾಲುಗಳನ್ನು ಹೊಂದಿರುವುದು' ಅಥವಾ 'ನಾಲ್ಕು ಕಾಲುಗಳಲ್ಲಿ ಚಲಿಸಲು ವಿನ್ಯಾಸಗೊಂಡಿರುವುದು' ಎಂಬ ಅರ್ಥವಿದೆ. ಸಾಮಾನ್ಯವಾಗಿ ಈ ಪದವನ್ನು ನಾಯಿಯಂತಹ ಪ್ರಾಣಿಗಳನ್ನು ಅಥವಾ ನಾಲ್ಕು ಅಥವಾ ನಾಲ್ಕಕ್ಕಿಂತ ಹೆಚ್ಚು ಕಾಲುಗಳನ್ನು ಬಳಸಿ ಚಲಿಸುವ ರೋಬೋಟ್‌ಗಳನ್ನು ವಿವರಿಸಲು ಬಳಸಲಾಗುತ್ತದೆ. 

1949ರ ಜನವರಿ 15ರಂದು ಜನರಲ್ ಕೆ ಎಂ ಕಾರ್ಯಪನವರು ಭಾರತೀಯ ಸೇನಾಪಡೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿ, ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಭಾರತೀಯ ಯೋಧ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕಾರ್ಯಪ್ಪನವರು ಭಾರತೀಯ ಸೇನೆಯ ಕೊನೆಯ ಬ್ರಿಟಿಷ್ ಕಮಾಂಡರ್‌ಇನ್ ಚೀಫ್ ಆಗಿದ್ದ ಸರ್‌ಫ್ರಾನಿಸ್ ಆರ್‌ಬುಚರ್‌ ಅವರಿಂದ ಅಧಿಕಾರ ಸ್ವೀಕರಿಸಿ, ಅದು ಭಾರತದ ಇತಿಹಾಸದಲ್ಲಿ ಪ್ರಮುಖ ದಿನವನ್ನಾಗಿಸಿದರು. ಆ ದಿನದ ಸ್ತರಣೆಗಾಗಿ, ಪ್ರತಿವರ್ಷವೂ ಜನವರಿ 15ನ್ನು ಭಾರತೀಯ ಸೇನಾ ದಿನವನ್ನಾಗಿ ಆಚರಿಸಲಾಗುತ್ತದೆ.

ಪುಣೆಯಲ್ಲಿ ಮೊದಲ ಸೇನಾ ದಿನ 

ಹಲವಾರು ವರ್ಷಗಳ ಕಾಲ, ಸೇನಾ ದಿನಾಚರಣೆಯ ಪಥ ಸಂಚಲನವನ್ನು ಕೇವಲ ದೆಹಲಿಯಲ್ಲೇ ನಡೆಸಲಾಗುತ್ತಿತ್ತು. ಈ ಸಮಾರಂಭ ದೇಶದ ಮಿಲಿಟರಿ ಶಕ್ತಿ, ಶ್ರೀಮಂತ ಸಂಪ್ರದಾಯಗಳು ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಪ್ರದರ್ಶಿಸುತ್ತಿತ್ತು. ಈ ವರ್ಷ, ಸೇನಾ ದಿನಾಚರಣೆಯ ಪಥ ಸಂಚಲನವನ್ನು ಪುಣೆಯಲ್ಲಿರುವ ಬಾಂಬೆ ಇಂಜಿನಿಯರಿಂಗ್ ಗ್ರೂಪ್ (ಬಿಇಜಿ) ಆ್ಯಂಡ್‌ ಸೆಂಟರ್‌ನಲ್ಲಿ ಆಯೋಜಿಸಲಾಗುತ್ತದೆ. ಇದರಲ್ಲಿ ಪಥ ಸಂಚಲನ ತಂಡಗಳು, ಯಾಂತ್ರೀಕೃತ ವಾಹನಗಳು, ಮತ್ತು ಆಧುನಿಕ ತಂತ್ರಜ್ಞಾನ ಪ್ರದರ್ಶನಗಳು ಇರಲಿವೆ. 

ಈ ಬಾರಿಯ ಸಮಾರಂಭದಲ್ಲಿ ಡ್ರೋನ್‌ಗಳು ಮತ್ತು ರೋಬೋಟ್ ಗಳಂತಹ ಆಧುನಿಕರಕ್ಷಣಾ ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಗುತ್ತದೆ. ಆದರೊಡನೆ, ಯುದ್ಧ ಪ್ರದರ್ಶನ, ಮತ್ತು ಸಮರ ಕಲೆಗಳ ಪ್ರದರ್ಶನಗಳಂತಹ ರೋಮಾಂಚಕ ಕಾರ್ಯಕ್ರಮಗಳು ನಡೆಯಲಿದೆ. ಈ ವರ್ಷದ ಸೇನಾ ದಿನಾಚರಣೆ, ದೆಹಲಿಯಿಂದ ಹೊರಗಡೆ ನಡೆಯುತ್ತಿರುವ ಮೂರನೇ ಸೇನಾ ದಿನವಾಗಿದೆ. ಭಾರತ ಸರ್ಕಾರ ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮಗಳನ್ನು ದೇಶದ ವಿವಿಧ ನಗರಗಳಲ್ಲಿ ಆಯೋಜಿಸಿ, ಹೆಚ್ಚಿನ ಜನರು ಇವುಗಳಲ್ಲಿ ಪಾಲ್ಗೊಂಡು, ಅವರಲ್ಲಿ ಆರಿವು ಮೂಡಿಸಬೇಕೆಂಬ ನಿರ್ಧಾರ ಕೈಗೊಂಡಿದೆ. ಇದರ ಅನುಸಾರ, ಸೇನಾ ದಿನವನ್ನು ಆಯೋಜಿಸುವ ಅವಕಾಶವನ್ನು ವಿವಿಧ ನಗರಗಳಿಗೆ ನೀಡಲಾಗುತ್ತಿದೆ. 
2023 ಮತ್ತು 2024ರ ಸೇನಾ ದಿನವನ್ನು ಕ್ರಮವಾಗಿ ಬೆಂಗಳೂರು ಮತ್ತು ಲಖನೌಗಳಲ್ಲಿ ನಡೆಸಲಾಗಿತ್ತು. ಪಥ ಸಂಚಲನದ ಸಮವಸ್ತ್ರ ಅಭ್ಯಾಸ ಡಿಸೆಂಬರ್ 30, ಸೋಮವಾರದಂದು ಬಿಇಜಿ ಪರೇಡ್ ಮೈದಾನದಲ್ಲಿ ನಡೆಯಿತು.

ಆಧುನಿಕ ಮಿಲಿಟರಿ ವ್ಯವಸ್ಥೆಗಳ ಪ್ರದರ್ಶನ 

ಸೇನಾ ದಿನಾಚರಣೆಯಲ್ಲಿ ಆಧುನಿಕವಾದ, ಎಲ್ಲ ಭೂ ಪ್ರದೇಶಗಳಲ್ಲಿ ಚಲಿಸಬಲ್ಲ ವಾಹನಗಳು, ಪಿನಾಕಾ ಮಲ್ಲಿ ಲಾಂಚ್ ರಾಕೆಟ್ ವ್ಯವಸ್ಥೆ, ಮತ್ತು ಸರ್ವತ್ರ ಬ್ರಿಜಿಂಗ್ ವ್ಯವಸ್ಥೆ ಹಾಗೂ ಇತರ ಆಧುನಿಕ ಸೇನಾ ವ್ಯವಸ್ಥೆಗಳ ಪ್ರದರ್ಶನವಿದೆ. 

ಪಥಸಂಚಲನದಲ್ಲಿ 'ಎಆರ್‌ಸಿವಿ ಮ್ಯೂಲ್' 

ಪುಣೆಯ ಕಾರ್ಯಕ್ರಮದಲ್ಲಿ ಮೆರವಣಿಗೆಯ ತಂಡದ ಕೊನೆಯಲ್ಲಿ 'ಎಆರ್‌ಸಿವಿ ಮ್ಯೂಲ್' ಎಂಬ ಹೆಸರಿನ ನಾಲ್ಕು ಕಾಲುಗಳ ರೋಬೋಟ್‌ಗಳು ಆಗಮಿಸಿದ್ದವು. ಇವುಗಳನ್ನು ನವದೆಹಲಿಯ ವಿರೋ ಆರ್ಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಅಭಿವೃದ್ಧಿ ಪಡಿಸಿದೆ.ಈ ಸಂಸ್ಥೆಯ ಮಾಲಿಕತ್ವವನ್ನು ಆರ್ಕ್ ವೆಂಚರ್ಸ್ (ಎಆರ್‌ಸಿವಿ) ಹೊಂದಿದೆ. ಮೂಲ್ (MULE) ಎಂಬ ಹೆಸರು ಮಲ್ಲಿ ಯುಟರಿಟಿ ಲೆಸ್ಟ್ ರಈಕ್ಸಿಪ್‌ಮೆಂಟ್ ಎಂಬುದರ ಹೈಸ್ವರೂಪವಾಗಿದೆ. 

ಈ ಮಾನವ ರಹಿತ ನಾಲ್ಕು ಕಾಲುಗಳ ಭೂ ವಾಹನ (ಕ್ಯು-ಯುಜಿವಿ) ಅಥವಾ ರೋಬೊಟಿಕ್ ಮ್ಯೂಲ್‌ಗಳನ್ನು ದೂರದಿಂದಲೇ ನಿಯಂತ್ರಿಸಬಹುದು, ಅಥವಾ ಅವುಗಳು. ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬಲ್ಲವು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಇವುಗಳನ್ನು ವಿವಿಧ ಪ್ರದೇಶಗಳಲ್ಲಿ ಕಾವಲು ನಡೆಸಲು, ರಾಸಾಯನಿಕಗಳು, ಜೈವಿಕ ಅಪಾಯಗಳು, ವಿಕಿರಣ, ಪರಮಾಣು ವಸ್ತುಗಳು, ಅಥವಾ ಸೋಟಕಗಳನ್ನು ಒಳಗೊಂಡಂತಹ (ಸಿಬಿಆರ್ ಎನ್‌ಇ) ಅಪಾಯಕಾರಿ ಪರಿಸ್ಥಿತಿಗಳ ನಿರ್ವಹಣೆ ಸೇರಿದಂತೆ, ಹಲವು ಕಾರ್ಯಗಳಿಗೆ ಬಳಸಬಹುದಾಗಿದೆ. ಇವುಗಳನ್ನು ಬಾಂಬ್ ನಿಕ್ಷ್ರೀಯಗೊಳಿಸಲು (ಎಕ್ಸ್‌ಪ್ಲೋಸಿವ್‌ ಆರ್ಡಿನೆನ್ಸ್‌ ಡಿಸ್ಪೋಸಲ್‌ ಅಥವಾ ಇಒಡಿ) ಮತ್ತು ಗುಪ್ತಚರ, ಕಣ್ಣಾವಲು ಮತ್ತು ವಿಚಕ್ಷಣೆಯ ಮೂಲಕ ಮಾಹಿತಿ ಕಲೆಹಾಕಲು ನಿಯೋಜಿಸಬಹುದು.

ಜೊತೆಯಾಗಿ ಕಾರ್ಯಾಚರಿಸುವ ಐದು ಮುಖ್ಯ ಭಾಗಗಳನ್ನು ಬಳಸಿ ಎಆರ್‌ಸಿವಿ – ಮ್ಯೂಲ್ ಯಂತ್ರವನ್ನು ನಿರ್ಮಿಸಲಾಗಿದೆ. ಈ ಭಾಗಗಳಲ್ಲಿ, ಕಂಪ್ಯೂಟ್ ಬಾಕ್ (ರೋಬೋಟನ ಮೆದುಳಿನಂತೆ ಕಾರ್ಯಾಚರಿಸುವ ಭಾಗ), ಅದಕ್ಕೆ ಶಕ್ತಿ ನೀಡಲು ಒಂದು ಬ್ಯಾಟರಿ, ಸುತ್ತಮುತ್ತಲಿನ ಪ್ರದೇಶಗಳನ್ನು ಗುರುತಿಸಿ, ಅರ್ಥ ಮಾಡಿಕೊಳ್ಳಲು ಮುಂಭಾಗ ಮತ್ತು ಹಿಂಭಾಗಗಳಲ್ಲಿ ಸೆನ್ಸ‌ರ್ಗಳು ಮತ್ತು ಚಲಿಸಲು ಅವಶ್ಯಕವಾದ ಕಾಲುಗಳು ಸೇರಿವೆ. 

ಆಧುನಿಕವಾಗಿ ಅಭಿವೃದ್ಧಿ 

ಜೂನ್ 2024ರ ವರದಿಗಳ ಅನುಸಾರ, ಭಾರತೀಯ ಸೇನೆಯ ಆಧುನೀಕರಣ ಭಾಗವಾಗಿ, ವಿರೋ ಆರ್ಕ್ ಸಂಸ್ಥೆಯಿಂದ 100 ರೋಬೊಟಿಕ್ ಹೇಸರಗತ್ತೆಗಳನ್ನು ಪಡೆಯಲಾಗಿದೆ. ಎಲ್ಲಾ ರೀತಿಯ ಭೂ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಬಲ್ಲ ಈ ರೋಬೋಟ್ಗಳು ಯೋಧರಿಗೆ ವಿವಿಧ ವಾತಾವರಣಗಳಲ್ಲಿ ನೆರವಾಗುವಂತೆ ವಿನ್ಯಾಸಗೊಂಡಿದ್ದ ಯೋಧರ ಕಾರ್ಯಕ್ಷಮತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸಲಿವೆ. 

ಇದೊಂದು ಗಟ್ಟಿಯಾದ, ಎಲ್ಲ ಪ್ರದೇಶಗಳಿಗೂ ಹೊಂದಿಕೊಳ್ಳಬಲ್ಲ ಯಂತ್ರವಾಗಿದೆ. ಇದು ಮೆಟ್ಟಿಲುಗಳನ್ನು ಹತ್ತಬಲ್ಲದು, ಕಡಿದಾದ ಬೆಟ್ಟಗಳನ್ನು ಬರಬಲ್ಲದು, ಮತ್ತು ಅಡಚಣೆಗಳು ತುಂಬಿರುವ ಪ್ರದೇಶಗಳಲ್ಲೂ ಸಂಚರಿಸಬಲ್ಲದು. 
ರೋಬೋಟಿಕ್ ಮ್ಯೂಲ್ ಅನ್ನು -40 ಡಿಗ್ರಿಯಿಂದ +55 ಡಿಗ್ರಿ ಸೆಲಿಯಸ್ ತನಕ ಎಲ್ಲ ತಾಪಮಾನಗಳಲ್ಲೂ ಕಾರ್ಯಾಚರಿಸುವಂತೆ ನಿರ್ಮಿಸಲಾಗಿದ್ದು, ಇದು ಭಾರತದ ಎಲ್ಲ ಪ್ರದೇಶಗಳಲ್ಲೂ ಬಳಕೆಗೆ ಸೂಕ್ತವಾಗಿದೆ. ಇದು ಐಪಿ-67 ರೇಟಿಂಗ್ ಹೊಂದಿದೆ. ಅಂದರೆ, ಧೂಳನಿಂದ ಸಂಪೂರ್ಣ ರಕ್ಷಣೆ ಹೊಂದಿದ್ದು ಅಲ್ಪಕಾಲ ನೀರಿನಲ್ಲೂ ಮುಳುಗಿರಬಲ್ಲದು. 

ಈ ರೋಬೊಟಿಕ್ ಸಹಾಯಕರು ಕೇವಲ ಹೇಸರಗತ್ತೆಗಳಂತೆ ವಸ್ತುಗಳನ್ನು ಹೊತ್ತು ಸಾಗಿಸಲು ಮಾತ್ರದೇ ಸೀಮಿತವಾಗಿಲ್ಲ. ಇವುಗಳು ಸೇನೆಯ ಅವಶ್ಯಕತೆಗಳ ಅನುಸಾರವಾಗಿ ವಿವಿಧ ಉಪಕರಣಗಳನ್ನೂ ಹೊಂದಿವೆ. ಉದಾಹರಣೆಗೆ, ಇವುಗಳು ಸಣ್ಣ ಆಯುಧಗಳು, ಕಗ್ಗತ್ತಲಿನಲ್ಲೂ ಕಾರ್ಯಚರಿಸಬಲ್ಲ ಕ್ಯಾಮರಾಗಳು, ಸುತ್ತಮುತ್ತಲಿನ ಪ್ರದೇಶಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳಲು ಉಷ್ಣತೆಯನ್ನು ಗುರುತಿಸಬಲ್ಲ ಸೆನ್ಸರ್‌ಗಳು ಮತ್ತು ಕಾರ್ಯಾ ಚರಣೆಯ ನೆರವಿಗಾಗಿ ಮೇಲ್ಗಡೆ ಹಾರುತ್ತಿರುವ ಡೋನ್‌ಗಳನ್ನು ಹೊಂದಿರುತ್ತವೆ. ಇವುಗಳು ವಸ್ತುಗಳನ್ನು ಎತ್ತಿಕೊಳ್ಳಲು ನೆರವಾಗುವ ರೋಬೊಟಕ್ ಕೈ. ಆಪಾಯಕಾರಿ ರಾಸಾಯನಿಕ ಅಥವಾ ವಿಕಿರಣವನ್ನು ಗುರುತಿಸಲು ಸೆನ್ಸರ್‌ಗಳನ್ನು ಹೊಂದಿವೆ. ಈ ಮೂಲಕ, ಹಲವು ಪರಿಸ್ಥಿತಿಗಳಲ್ಲಿ ಇವುಗಳು ಉಪಯುಕ್ತವಾಗಿವೆ. 

ಈ ರೋಬಾಟಿಕ್ ಮ್ಯೂಲ್‌ಗಳು ಯೋಧರ ದೈಹಿಕ ಪ್ರಯತ್ನಗಳು ಮತ್ತು ಮಾನಸಿಕ ಒತ್ತಡಗಳನ್ನು ಕಡಿಮೆಗೊಳಿಸಲುವಿನ್ಯಾಸಗೊಂಡಿವೆ. ಆದರೊಡನೆ, ಯೋಧರು ತಮ್ಮ ಕಾರ್ಯಾಚರಣೆಗಳನ್ನು ಪರಿಣಾಮ ಕಾರಿಯಾಗಿ ಕೈಗೊಳ್ಳಲೂ ಇವು ನೆರವಾಗುತ್ತವೆ.

ಏರೋ ಆರ್ಕ್ ರೋಬಾಟಿಕ್ ಮ್ಯೂಲ್‌ಗಳ ವೈಶಿಷ್ಟ್ಯಗಳು 

• ತೂಕ: 51 ಕೆಜಿ ರಕ್ಷಣಾ ರೇಟಿಂಗ್: ಐಪಿ 67 (ಧೂಳು ಮತ್ತು ಜಲ ನಿರೋಧಕ) 
• ಕಾರ್ಯಾಚರಣಾ ತಾಪಮಾನ: -45 ಡಿಗ್ರಿ ಸೆಲ್ಸಿಯಸ್‌ನಿಂದ 55 ಡಿಗ್ರಿ ಸೆಲಿಯಸ್ 
• ಗರಿಷ್ಠ ವೇಗ: ಪ್ರತಿ ಸೆಕೆಂಡಿಗೆ ಗರಿಷ್ಠ 3 ಮೀಟರ್ • ಬ್ಯಾಟರಿ ಬಾಳಿಕೆ (ಸ್ಥಗಿತ ಸ್ಥಿತಿಯಲ್ಲಿ): 20 ಗಂಟೆಗಳು 
• ಪ್ರೊಸೆಸರ್: ಎನ್‌ವೀಡಿಯಾ ಕ್ಷೇವಿಯರ್ 
• ಜೋಡಣಾ ಅವಧಿ: ಕೇವಲ 15 ನಿಮಿಷಗಳ ಒಳಗಾಗಿ ಜೋಡಿಸಬಹುದು 

ಪೊಲೀಸ್ ನಾಗರಿಕರ ಮಧ್ಯೆ ಸಂಬಂಧದಲ್ಲಿ ಸುಧಾರಣೆ ತರಬಲ್ಲದೇ ಜನರಲ್ ಕಾರ್ಯಪ್ಪನವರ ಪ್ರೇರಣೆ?

ಭಾರತೀಯ ಸೇನೆಯ ಆಧುನೀಕರಣದ ದೃಷ್ಟಿಯಿಂದ ನೋಡಿದರೆ, ಈ ಖರೀದಿ ಬಹುದೊಡ್ಡ ಹೆಜ್ಜೆಯಾಗಿದೆ. ರೋಬಾಟಿಕ್ ತಂತ್ರಜ್ಞಾನವನ್ನು ಬಳಸುವುದರಿಂದ, ಭಾರತೀಯ ಸೇನೆಯ ಕಾರ್ಯಾಚರಣೆಗಳಲ್ಲಿ ಯೋಧರು ಹೆಚ್ಚು ಸುರಕ್ಷಿತವಾಗಿದ್ದು, ಹೆಚ್ಚು ಸಮರ್ಥವಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಆದರೊಡನೆ. ಇಂದಿನ ಸವಾಲಿನ ಭದ್ರತಾ ವಾತಾವರಣದಲ್ಲಿ, ಆಧುನಿಕ ತಂತ್ರಜ್ಞಾನದ ಬಳಕೆಯ ಮೂಲಕ ನಮ್ಮ ಯೋಧರು ಶತ್ರುಗಳಿಂದ ಮುಂದಿರಲಿದ್ದಾರೆ. ಅಪಾಯಕಾರಿ ಯೋಜನೆಗಳ ಸಂದರ್ಭದಲ್ಲಿ, ರೋಬೊಟಿಕ್ ಮ್ಯೂಲ್‌ಗಳು ಯೋಧರಿಗೆ ಹೆಚ್ಚುವರಿ ಬೆಂಬಲ ನೀಡಿ, ಅವರನ್ನು ಸುರಕ್ಷಿತವಾಗಿಡುತ್ತವೆ.

ಸೇನಾ ದಿನದಂದು ಸೈನಿಕರೊಡನೆ ರೋಬೊಟಿಕ್ ಹೇಸರಗತ್ತೆಗಳು ಪಥಸಂಚಲನದಲ್ಲಿ ಸಾಗಲಿವೆ. ಇದೊಂದು ಗಟ್ಟಿಯಾದ, ಎಲ್ಲ ಪ್ರದೇಶಗಳಿಗೂ ಹೊಂದಿಕೊಳ್ಳಬಲ್ಲ ಯಂತ್ರವಾಗಿದೆ. ಮೆಟ್ಟಿಲುಗಳನ್ನು ಹತ್ತಬಲ್ಲದು, ಕಡಿದಾದ ಬೆಟ್ಟಗಳನ್ನು ಏರಬಲ್ಲದು, ಮತ್ತು ಅಡಚಣೆಗಳು ತುಂಬಿರುವ ಪ್ರದೇಶಗಳಲ್ಲೂ ಸಂಚರಿಸಬಲ್ಲದು.

Latest Videos
Follow Us:
Download App:
  • android
  • ios