Asianet Suvarna News Asianet Suvarna News

Parag Agrawal: ಹೊಸ ಸಿಇಓ ಹೊಸ ಟೀಮ್: ಟ್ವೀಟರ್‌ ಕಾರ್ಯವೈಖರಿಯಲ್ಲಿ ಮಹತ್ವದ ಬದಲಾವಣೆ!

*ಟ್ವೀಟರ್‌  ನಾಯಕತ್ವ ತಂಡಕ್ಕೆ ಸರ್ಜರಿ!
*ಮಹತ್ವದ ಬದಲಾವಣೆ ಮಾಡಿದ ಪರಾಗ್‌
*ಇಬ್ಬರು ಉನ್ನತ ಅಧಿಕಾರಿಗಳು ಔಟ್!‌

Twitter chief Parag Agrawal restructures top leadership team Two key figures stepping down mnj
Author
Bengaluru, First Published Dec 4, 2021, 3:09 PM IST

ಯುಎಸ್‌ಎ(ಡಿ. 04): ಇತ್ತಿಚೆಗೆ ಭಾರತ ಮೂಲದ ಪರಾಗ್‌ ಅಗರವಾಲ್‌ ಟ್ವೀಟರ್‌ನ (Twitter CEO Parag Agrawal) ನೂತನ ಸಿಇಓ ಆಗಿ ನೇಮಗೊಂಡಿದ್ದಾರೆ.  ಹೊಸದಾಗಿ ನೇಮಕಗೊಂಡ  ಪರಾಗ್ ಅಗರವಾಲ್ ಟ್ವೀಟರ್‌ ಸಂಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಕಂಪನಿಯಲ್ಲಿ ಕೆಲಸ ಮಾಡುವ ಉನ್ನತ ಮಟ್ಟದ  ಅಧಿಕಾರಿಗಳಲ್ಲಿ ಗಮನಾರ್ಹ ಮರುಸಂಘಟನೆಯನ್ನು ಮಾಡಿದ್ದಾರೆ. ಸಂಸ್ಥೆಯಲ್ಲಿ ಮಹತ್ತರ ಜವಾಬ್ದಾರಿ ಹೊತ್ತಿದ್ದ  ಇಬ್ಬರು ಪ್ರಮುಖ ನಾಯಕರು ತಮ್ಮ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಮೈಕೆಲ್ ಮೊಂಟಾನೊ (Michael Montano) ಮತ್ತು ವಿನ್ಯಾಸ ಮತ್ತು ಸಂಶೋಧನಾ  ವಿಭಾಗದ ಮುಖ್ಯಸ್ಥ ಡಾಂಟ್ಲೆ ಡೇವಿಸ್ (Dantley Davis) ಡಿಸೆಂಬರ್ 31 ರಂದು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಲಿದ್ದಾರೆ. ಆದಾಗ್ಯೂ, ಅವರು 2022 ರ ಮೊದಲ ತ್ರೈಮಾಸಿಕದ ಅಂತ್ಯದವರೆಗೆ ಸಲಹೆಗಾರರಾಗಿ (advisors) ಉಳಿಯಲಿದ್ದಾರೆ ಎಂದು ವರದಿಯಾಗಿದೆ. ಮೊಂಟಾನೊ 2011 ರಲ್ಲಿ ಕಂಪನಿಗೆ ಸೇರಿದ್ದರೆ, ಡೇವಿಸ್ 2019 ರಿಂದ ಕಂಪನಿಯ ಪ್ರಮುಖ ಹುದ್ದೆಯಲ್ಲಿದ್ದಾರೆ.

ಪ್ರತಿ ವಿಭಾಗಕ್ಕೂ ಜನರಲ್‌ ಮ್ಯಾನೇಜರ್!

ಅಗರವಾಲ್ ತಮ್ಮ ತಂಡವನ್ನು ವಿವಿಧ ಭಾಗಗಳಗಾಗಿ ವಿಂಗಡಿಸಿದ್ದು ಗ್ರಾಹಕ (Customer), ಆದಾಯ (Revenue) ಮತ್ತು ಕೋರ್ ಟೆಕ್‌ಗಾಗಿ (Core Tech) ಪ್ರತ್ಯೇಕ ಜನರಲ್  ಮ್ಯಾನೇಜರ್  ನೇಮಿಸಲಿದ್ದಾರೆ ಎಂದು ಟ್ವಿಟರ್ ತಿಳಿಸಿದೆ. ಗ್ರಾಹಕರ ವಿಭಾಗವನ್ನು  ಕೇವೊನ್ ಬೇಕ್‌ಪೌರ್ ( Kayvon Beykpour), ಆದಾಯ ವಿಭಾಗವನ್ನು ಬ್ರೂಸ್ ಫಾಲ್ಕ್ (Bruce Falck) ಮತ್ತು ಕೋರ್ ಟೆಕ್‌ ವಿಭಾಗವನ್ನು ನಿಕ್ ಕಾಲ್ಡ್‌ವೆಲ್ (Nick Caldwell) ಮುನ್ನಡೆಸಲಿದ್ದಾರೆ. ಹೆಚ್ಚುವರಿಯಾಗಿ, ಹೊಸ ಚೀಫ್ ಆಫ್ ಸ್ಟಾಫ್ (Cheif of Staff) ಮತ್ತು ಆಪರೇಷನ್‌ಗಳ (Operations) ಉಪಾಧ್ಯಕ್ಷನಾಗಿ ಲಿಂಡ್ಸೆ ಇಯಾನುಸಿ (Lindsey Iannucci) ಶೀಘ್ರದಲ್ಲೇ ಟ್ವೀಟರ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

Twitter CEO ಪರಾಗ್ ಅಗರ್ವಾಲ್ ಸ್ಯಾಲರಿ ಎಷ್ಟು?, ಸಖತ್ ಟ್ರೆಂಡಿಂಗ್‌ನಲ್ಲಿ ಟ್ವಿಟರ್ CEO

ಸಂಸ್ಥೆಯಲ್ಲಿನ ಬದಲಾವಣೆಗಳ ಕುರಿತು ಮಾತನಾಡಿದ ಟ್ವೀಟರ್ ವಕ್ತಾರ (Spokesperson) "ಪರಾಗ್ ಕೆಲಸವು ಶ್ರೇಷ್ಠತೆಯ ಮೇಲೆ ಕೇಂದ್ರೀಕರಿಸಿದೆ ಮತ್ತು  ಟ್ವೀಟರ್‌ ತನ್ನ ಗುರಿಗಳನ್ನು  ಸಾಧಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆಗಳನ್ನು ಮಾಡಲಾಗಿದೆ. ಉತ್ಪನ್ನ ಮತ್ತು ತಂತ್ರಜ್ಞಾನ ಸಂಸ್ಥೆಗಳಲ್ಲಿ (Product and Tecnology) ಕೆಲಸ ಮಾಡುವ ನಮ್ಮ ತಂಡಗಳಿಗಾಗಿ ನಾವು ಜನರಲ್ ಮ್ಯಾನೇಜರ್ ಮಾದರಿ (General Manager model) ಅನುಸರಿಸಲಿದ್ದೇವೆ.  ನಮ್ಮ  ಕಂಪನಿಯ  ಪ್ರತಿ ಪ್ರಮುಖ ವಿಭಾಗಕ್ಕೆ ಪ್ರತ್ಯೇಕ ಜನರಲ್‌ ಮ್ಯಾನೇಜರ್  ನೇಮಿಸಲ್ಪಟ್ಟಿದ್ದಾರೆ. ಇದು ನಮಗೆ ಹೆಚ್ಚು ಕ್ರಿಯಾತ್ಮಕವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಜತೆಗೆ ವೇಗವಾಗಿ ಮತ್ತು ಹೆಚ್ಚು ಸರಿಯಾದ ನಿರ್ಧಾರಗಳನ್ನು (Proper DecesionS) ತೆಗೆದುಕೊಳ್ಳಲು ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ.

Twitter CEO on trend: ಭಾರತೀಯ ಮೂಲದ ಟ್ವಿಟ್ಟರ್‌ನ ಹೊಸ ಸಿಇಒ ಬಗ್ಗೆ ನಿಮಗೆಷ್ಟು ಗೊತ್ತು?

ಜಾಕ್ ಡೋರ್ಸೆ ಕಳೆದ ವಾರ ಸಿಇಓ ಸ್ಥಾನದಿಂದ ಕೆಳಗಿಳಿದ ನಂತರ ಪರಾಗ್ ಅಗರವಾಲ್ ಟ್ವಿಟರ್‌ನ ಹೊಸ ಸಿಇಒ ಆಗಿ ನೇಮಕಗೊಂಡಿದ್ದಾರೆ. ಭಾರತೀಯ ಮೂಲದ ಅಮೆರಿಕನ್ ಎಂಜಿನಿಯರ್ ಪರಾಗ್ ಈ ಹಿಂದೆ ಟ್ವಿಟರ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿದ್ದರು‌ (Cheif Technical Officer) ಮತ್ತು 2011 ರಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಯಾರು ಈ ಪರಾಗ್‌?

ಭಾರತದಲ್ಲಿ ಜನಿಸಿದ ಪರಾಗ್‌ ಅಗರವಾಲ್‌ ತಮ್ಮ ಆರಂಭಿಕ ಶಿಕ್ಷಣವನ್ನು ಭಾರತದಲ್ಲಿಯೇ ಮುಗಿಸಿದ್ದಾರೆ. ಬಾಂಬೆಯ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಪದವಿ ಪಡೆದಿರುವ ಇವರು ಅಮೆರಿಕದ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಮಾಡಿದ್ದಾರೆ. ಪಿಎಚ್‌ಡಿ ಮಾಡುತ್ತಿದ್ದ ಸಮಯದಲ್ಲಿ ಮೈಕ್ರೋಸಾಫ್ಟ್‌, ಎಟಿಟಿ, ಯಾಹೂ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಪಡೆದಿದ್ದಾರೆ. 2011ರಲ್ಲಿ ಆ್ಯಡ್‌ ಇಂಜಿನಿಯರ್‌ ಆಗಿ ಟ್ವೀಟರ್‌ ಸೇರಿದ ಇವರು ನಂತರದ ವರ್ಷಗಳಲ್ಲಿ ಪ್ರೋಗ್ರಾಮ್‌ ಇಂಜಿನಿಯರ್‌ ಆಗಿ ಪದೋನ್ನತಿ ಪಡೆದಿದ್ದರು. 2018ರಲ್ಲಿ ಮುಖ್ಯ ತಂತ್ರಜ್ಞಾನ ಅಧಿಕಾರಿಯನ್ನಾಗಿ ನೇಮಿಸಲಾಗಿತ್ತು. 2019ರಲ್ಲಿ ಟ್ವೀಟರ್‌ ಆರಂಭಿಸಿದ ಪ್ರಾಜೆಕ್ಟ್ ಬ್ಲೂ ಸ್ಕೈನ ಮುಖ್ಯಸ್ಥರಾಗಿಯೂ ಪರಾಗ್‌ ಸೇವೆ ಸಲ್ಲಿಸಿದ್ದಾರೆ.

Follow Us:
Download App:
  • android
  • ios