ಸಸ್ಯಾಹಾರಿಗಳಿಗೆ ಶಾಕ್ ಕೊಟ್ಟ ವಾಟರ್ ಪ್ಯೂರಿಫೈರ್ ಕಂಪನಿ; ಕುಡಿಯುವ ನೀರು ಮಾಂಸಾಹಾರಿ ನೀರು ಎಂಬ ತರ್ಕ ಮುಂದಿಟ್ಟ ಕಂಪನಿ; ನೆಟ್ಟಿಗರಿಂದ ಫುಲ್ ಟ್ರೋಲ್!

ಬೆಂಗಳೂರು (ಜೂ.22): ಈ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಪ್ರತಿಸ್ಪರ್ಧಿಗಳಿಗೆ ಪೈಪೋಟಿಯೊಡ್ಡಲು ಕಂಪನಿಗಳು ಮಾಡುವ ಕಸರತ್ತು ಅಷ್ಟಿಷ್ಟಲ್ಲ. ತಮ್ಮ ಪ್ರಾಡಕ್ಟ್‌ಗಳನ್ನು ಜನರ ಬಳಿಗೆ ಕೊಂಡೊಯ್ಯಲು ಏನೆಲ್ಲಾ ಗಿಮಿಕ್ ಮಾಡುತ್ತವೆ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ.

ಈಗ ಅಂತಹದ್ದೇ ಒಂದು ಬೆಳವಣಿಗೆಯಲ್ಲಿ ವಾಟರ್ ಪ್ಯೂರಿಫೈರ್ ಕಂಪನಿಯೊಂದು, ವಿಚಿತ್ರ ತರ್ಕವನ್ನು ಮುಂದಿಟ್ಟು ನೆಟ್ಟಿಗರಿಂದ ಮಂಗಳಾರತಿ ಮಾಡಿಸಿಕೊಂಡಿದೆ.

‘ನೀವು ಸಸ್ಯಾಹಾರಿಗಳಾ? ನೀವು ಕುಡಿಯುವ ನೀರು ಮಾಂಸಾಹಾರಿಯಾಗಿರುವ ವಿಚಾರ ತಿಳಿದು ಶಾಕ್ ಆಗೋದು ಪಕ್ಕಾ!’ ಎಂಬ ಒಕ್ಕಣೆಯೊಂದಿಗೆ ಕಂಪನಿಯೊಂದು ತನ್ನ ವಾಟರ್ ಪ್ಯೂರಿಫೈರ್ ಜಾಹೀರಾತನ್ನು ಪತ್ರಿಕೆಯಲ್ಲಿ ಪ್ರಕಟಿಸಿದೆ.

ಜಾಹೀರಾತಿನ ಪ್ರಕಾರ, ಕುದಿಸಿದ ನೀರು ಮತ್ತು ಇನ್ನಿತರ ವಾಟರ್ ಪ್ಯೂರಿಫೈರ್‌ಗಳು ನೀರಿನಲ್ಲಿರುವ ಕೀಟಾಣುಗಳನ್ನು ಕೊಲ್ಲುತ್ತವೆ. ಆದರೆ, ಅವುಗಳ ಮೃತದೇಹ ಅದೇ ನೀರಿನಲ್ಲಿ ಸೇರಿಕೊಂಡಿರುತ್ತದೆ. ನೀರು ಕುಡಿಯಲು ಯೋಗ್ಯವಾಗಿದ್ರೂ, ಅದು ಎಷ್ಟೆಂದರೂ ಮಾಂಸಾಹಾರಿ ನೀರು! ಎಂಬ ತರ್ಕವನ್ನು ಮುಂದಿಟ್ಟಿತ್ತು. 

ಇದನ್ನೂ ಓದಿ | ಮೊಬೈಲ್ ಪಾರ್ಸೆಲ್ ಡೆಲಿವರಿ ಮಾಡಲು ಕೊರಿಯರ್ ಕಂಪನಿ ಹಿಂದೇಟು!

ಈ ಕಂಪನಿಯ ವಾಟರ್ ಪ್ಯೂರಿಫೈರ್, ಕೀಟಾಣುಗಳು ಜೀವಂತ ವಾಗಿರಲಿ ಅಥವಾ ಮೃತಪಟ್ಟಿರಲಿ, ಆ ಎಲ್ಲಾವನ್ನು ಹೊರಹಾಕುತ್ತದೆ ಎಂದು ಹೇಳಿಕೊಂಡಿತ್ತು. 

ಟ್ವಿಟರಿಗರಿಗೆ ಇನ್ನೇನು ಬೇಕು? ಈ ಜಾಹೀರಾತು ತುಣುಕು ಸಿಕ್ಕಿದ್ದೇ ತಡ, ಶುರುವಾಗಿ ಹಚ್ಕೊಂಡು ಬಿಟ್ರು! ಅದರ ಒಂದು ಝಲಕ್ ಇಲ್ಲಿದೆ....

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…