ಬೆಂಗಳೂರು (ಜೂ. 22): ಅಮೆರಿಕಾ ಸರ್ಕಾರ ಮತ್ತು ಚೀನಾ ಕಂಪನಿ Huawei ನಡುವಿನ  'ನಿಷೇಧ' ಸಮರ ಈಗ ಹೊಸ ತಿರುವನ್ನು ಪಡೆದುಕೊಂಡಿದೆ.

PC Magazine ಎಂಬ ಸಂಸ್ಥೆಯು ತನ್ನ ಇಂಗ್ಲಂಡ್ ಕಛೇರಿಯಿಂದ  ಅಮೆರಿಕಾದ ಕಛೇರಿಗೆ Huawei ಫೋನನ್ನು ಫೆಡೆಕ್ಸ್ ಕೊರಿಯರ್ ಕಂಪನಿ ಮೂಲಕ ಪಾರ್ಸೆಲ್ ಮಾಡಿತ್ತು. ಆದರೆ, ಆ ಪಾರ್ಸೆಲ್ ಈಗ ಡೆಲಿವರಿಯಾಗದೇ ವಾಪಾಸಾಗಿದೆ.

ಅಮೆರಿಕಾ ಮತ್ತು ಹುವೈ ಕಂಪನಿ- ಚೀನಾ ಸರ್ಕಾರ ಜೊತೆ ಸಮಸ್ಯೆ ಇರುವ ಕಾರಣ ಈ ಪಾರ್ಸೆಲ್ ಹಿಂತಿರುಗಿಸಲಾಗಿದೆ ಎಂದು ಕೊರಿಯರ್ ಕಂಪನಿ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ | ಅಮೆರಿಕಾಗೆ ಸೆಡ್ಡು ಹೊಡೆಯಲು ಮುಂದಾದ Huawei; Androidಗೆ ಪರ್ಯಾಯವಾಗಿ ಹೊಸ OS

ಕಳೆದ ತಿಂಗಳು ಅಮೆರಿಕಾದ ಡೊನಾಲ್ಡ್ ಟ್ರಂಪ್ ಸರ್ಕಾರ, ಆಂತರಿಕ ಭದ್ರತೆಯ ಕಾರಣವನ್ನು ಮುಂದಿಟ್ಟುಕೊಂಡು Huawei ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿತ್ತು. ಹಾಗೂ, ಅಮೆರಿಕಾದ ಟೆಕ್ ಕಂಪನಿಗಳ ಜೊತೆ ವ್ಯವಹರಿಸದಂತೆ ನಿರ್ಬಂಧ ಹೇರಿತ್ತು.

ಈ ನಿರ್ಬಂಧ ಟೆಕ್ ಕಂಪನಿಗಳಿಗೆ ಅನ್ವಯಿಸುತ್ತದೆ. ಆದರೆ ಕೊರಿಯರ್ ಕಂಪನಿಯು ಸ್ವಯಂ ಪ್ರೇರಿತವಾಗಿ ನಿಷೇಧ ಹೇರಿರುವುದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಆದ್ದರಿಂದ, ಗೂಗಲ್ ಮತ್ತಿತರ ದಿಗ್ಗಜ ಟೆಕ್ ಕಂಪನಿಗಳು Huawei ಜೊತೆ ವ್ಯವಹಾರವನ್ನು ನಿಲ್ಲಿಸಿವೆ. ಗೂಗಲ್ ತನ್ನ ಆ್ಯಂಡ್ರಾಯಿಡ್ ಸೇವೆಯನ್ನು Huawei ಫೋನ್‌ಗಳಿಗೆ ಸ್ಥಗಿತಗೊಳಿದೆ.

ಟ್ರಂಪ್ ಸರ್ಕಾರ ಭದ್ರತೆಯ ಕಾರಣ ನೀಡಿ ಈ ಕ್ರಮ ಕೈಗೊಂಡರೂ, ಇದನ್ನು ಚೀನಾ ಜೊತೆಗಿನ ವ್ಯಾಪಾರ-ಸಮರದ ಇನ್ನೊಂದು ರೂಪ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.