2017-18ರ ಹಣಕಾಸು ವರ್ಷದಲ್ಲಿ ಜಿಯೋವನ್ನು ಹೊರತುಪಡಿಸಿ ಉಳಿದ ಎಲ್ಲ ಟೆಲಿಕಾಂ ಸಂಸ್ಥೆಗಳ ಒಟ್ಟಾರೆ ಸಮಗ್ರ ಲಾಭದಲ್ಲಿ ಇಳಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ನವದೆಹಲಿ(ಏ.23): ಜಿಯೋ ದರ ಸಮರಕ್ಕೆ ಸಿಕ್ಕು ಟೆಲಿಕಾಂ ಕಂಪನಿಗಳು ಭಾರೀ ನಷ್ಟಅನುಭವಿಸಿದ್ದರೂ, ಇನ್ನೂ ಕೆಲ ಕಾಲ ಈ ದರ ಸಮರ ಮುಂದುವರೆಯಲಿದೆ ಎಂದು ಕ್ರಿಸಿಸ್‌ ಸಂಶೋಧನಾ ಸಂಸ್ಥೆ ಹೇಳಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2017-18ರ ಹಣಕಾಸು ವರ್ಷದಲ್ಲಿ ಜಿಯೋವನ್ನು ಹೊರತುಪಡಿಸಿ ಉಳಿದ ಎಲ್ಲ ಟೆಲಿಕಾಂ ಸಂಸ್ಥೆಗಳ ಒಟ್ಟಾರೆ ಸಮಗ್ರ ಲಾಭದಲ್ಲಿ ಇಳಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ದರ ಕಡಿತ ಮಾಡದೇ ಇದ್ದರೆ ಮಾರುಕಟ್ಟೆಯಲ್ಲಿ ಸ್ಥಾನ ಕಳೆದುಕೊಳ್ಳುವ ಕಾರಣಕ್ಕಾಗಿ ಏರ್‌ಟೆಲ್‌, ವೊಡಾ ಫೋನ್‌ ಸೇರಿದಂತೆ ಟೆಲಿಕಾಂ ಕಂಪನಿಗಳು ದರ ಸಮರ ಮುಂದುವರೆಸಲಿವೆ ಎಂದು ವರದಿ ಹೇಳಿದೆ.