ಅಫ್ಘಾನಿಸ್ತಾನದಲ್ಲಿ ಟಿಕ್‌ಟಾಕ್, ಪಬ್‌ಜಿ ಬ್ಯಾನ್:‌‌ ಯುವಕರನ್ನ ಆ್ಯಪ್ಸ್ ದಾರಿತಪ್ಪಿಸುತ್ತಿವೆ ಎಂದ ತಾಲಿಬಾನ್

*ತಾಲಿಬಾನ್‌ ಆಡಳಿತದಲ್ಲಿ ಪಬ್‌ಜಿ ಟಿಕ್‌ಟಾಕ್‌ ಬ್ಯಾನ್‌
*ಯುವಕರನ್ನ ದಾರಿತಪ್ಪಿಸುತ್ತಿವೆ ಎಂದ ಸರ್ಕಾರ
*ತಾಲಿಬಾನ್  ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ

Taliban Bans TikTok Pubg App for Misleading Youth in Afghanistan mnj

ಕಾಬೂಲ್‌ (ಏ. 24): ಜನಪ್ರಿಯ ಶಾರ್ಟ್‌ ವಿಡಿಯೋ ಆ್ಯಪ್ ಟಿಕ್‌ ಟಾಕನ್ನು ಅಫ್ಘಾನಿಸ್ತಾನದಲ್ಲಿ ಬ್ಯಾನ್‌ ಮಾಡಲಾಗಿದೆ. ಆಡಳಿತಾರೂಢ ತಾಲಿಬಾನ್‌ನ (Taliban) ನೈತಿಕ ಪೊಲೀಸ್ ಚಳವಳಿ ಭಾಗವಾಗಿ ಅಫ್ಘಾನಿಸ್ತಾನದಲ್ಲಿ ಟಿಕ್‌ಟಾಕ್ ವೀಡಿಯೊ ಅಪ್ಲಿಕೇಶನನ್ನು ನಿಷೇಧಿಸಲಾಗುವುದು ಎಂದು ತಾಲಿಬಾಮ್ ವಕ್ತಾರರು ತಿಳಿಸಿದ್ದಾರೆ.  ವ್ಯಾಪಕವಾಗಿ ಬಳಸಲಾಗುವ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ "ಯುವ ಪೀಳಿಗೆಯನ್ನು ದಾರಿತಪ್ಪಿಸುತ್ತಿದೆ" ಎಂದು ಇನಾಮುಲ್ಲಾ ಸಮಾಂಗನಿ ಟ್ವಿಟ್ಟರ್‌ನಲ್ಲಿ (Twitter) ಹೇಳಿದ್ದಾರೆ. ಟಿಕ್‌ಟಾಕ್‌ನ "ಕೊಳಕು ವಿಷಯವು ಇಸ್ಲಾಮಿಕ್ ಕಾನೂನುಗಳೊಂದಿಗೆ ಹೊಂದಿಕೆಯಾಗುವುದಿಲ್ಲ" ಎಂದು ಅವರು ಹೇಳಿದ್ದಾರೆ ಎಂದು ಎಂದು ಬ್ಲೂಮ್‌ಬರ್ಗ್‌ ವರದಿ ಮಾಡಿದೆ.  

ಬುಧವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಕಳೆದ ವರ್ಷ ಅಧಿಕಾರಕ್ಕೆ ಬಂದ ನಂತರ ತಾಲಿಬಾನ್ ಮೊದಲ ಬಾರಿಗೆ ಅಪ್ಲಿಕೇಶನನ್ನು ನಿಷೇಧಿಸಿದೆ. ದಕ್ಷಿಣ ಕೊರಿಯಾದ‌ ಜನಪ್ರಿಯ ಗೇಮ್ ಪಬ್‌ಜಿ ಬ್ಯಾಟಲ್‌ ಗ್ರೌಂಡ್ಸ್‌ (PUBG Battlegrounds) ಆಟವನ್ನು ನಿರ್ಬಂಧಿಸಲು ಮತ್ತು ಅಫಘಾನ್ ದೂರದರ್ಶನ ಚಾನೆಲ್‌ಗಳನ್ನು "ಅನೈತಿಕ" ವಿಷಯವನ್ನು ಪ್ರಸಾರ ಮಾಡುವುದನ್ನು ನಿರ್ಬಂಧಿಸಲು ಕ್ಯಾಬಿನೆಟ್ ನಿರ್ಧರಿಸಿದೆ ಎಂದು ಸಮಂಗಾನಿ ತಿಳಿಸಿದ್ದಾರೆ. 

ಧಾರ್ಮಿಕ ಪೋಲೀಸಿಂಗ್: ಚೀನಾ-ಮಾಲೀಕತ್ವದ ಸಾಮಾಜಿಕ ಮಾಧ್ಯಮ ಟಿಕ್‌ಟಾಕ್ ಅಪ್ಲಿಕೇಶನ್‌ನ ಮೇಲಿನ‌ ಬ್ಯಾನ್‌,  ತಾಲಿಬಾನ್‌ನ ಕಟ್ಟುನಿಟ್ಟಾದ ಧಾರ್ಮಿಕ ಪೋಲೀಸಿಂಗ್ (Religious Policing) ಅಭಿಯಾನದ ಒಂದು ಭಾಗವಾಗಿದೆ. ಇದರಲ್ಲಿ ಹುಡುಗಿಯರ ಪ್ರೌಢಶಾಲಾ ಶಿಕ್ಷಣವನ್ನು ಸ್ಥಗಿತಗೊಳಿಸುವುದು, ಸರ್ಕಾರಿ ನೌಕರರು ಗಡ್ಡವನ್ನು ಬೆಳೆಸಲು ಒತ್ತಾಯಿಸುವುದು ಮತ್ತು ಕುಟುಂಬದ ಪುರುಷ  ಸದಸ್ಯರಿಲ್ಲದೆ 70 ಕಿಮೀ (43 ಮೈಲುಗಳು) ಗಿಂತ ಹೆಚ್ಚು ಪ್ರಯಾಣ ಮಾಡಲು ಮಹಿಳೆಯರಿಗೆ ಅವಕಾಶ ನೀಡದಂತೆ ಟ್ಯಾಕ್ಸಿ ಡ್ರೈವರ್‌ಗಳಿಗೆ ಆದೇಶಿಸುವುದು ಸೇರಿದಂತೆ ಹಲವು ನಿಯಮಗಳಿವೆ. 

ಇದನ್ನೂ ಓದಿ: ಕಾಬೂಲ್‌ನ 2 ಶಾಲೆಗಳಲ್ಲಿ ಆತ್ಮಾಹುತಿ ಬಾಂಬ್ ದಾಳಿ, ಮುಗ್ಧ ಮಕ್ಕಳು ಬಲಿ!

ಧಾರ್ಮಿಕ ಪೋಲೀಸಿಂಗ ಅಥವಾ ರಿಲಿಜಿಯಸ್‌ ಪೊಲೀಸಿಂಗ್ ಧಾರ್ಮಿಕ ನಿಯಮಗಳು ಮತ್ತು ಸಂಬಂಧಿತ ಧಾರ್ಮಿಕ ಕಾನೂನುಗಳ ಜಾರಿಗಾಗಿ ಜವಾಬ್ದಾರರಾಗಿರುವ ಪೊಲೀಸ್ ಪಡೆ ಅಥವಾ ಜನರ ತಂಡವಾಗಿದೆ. 

"ಟಿಕ್‌ಟಾಕ್ ಅಪ್ಲಿಕೇಶನ್ ಮತ್ತು ಪಬ್‌ಜಿ ಆಟವು ಜನರ ಸಮಯವನ್ನು ಹೇಗೆ ವ್ಯರ್ಥ ಮಾಡುತ್ತಿದೆ ಎಂಬುದರ ಕುರಿತು ನಾವು ಸಾಕಷ್ಟು ದೂರುಗಳನ್ನು ಸ್ವೀಕರಿಸಿದ್ದೇವೆ" ಎಂದು ಸಮಾಂಗನಿ ಹೇಳಿದ್ದಾರೆ. "ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಇಂಟರ್ನೆಟ್ ಸರ್ವರ್‌ಗಳಿಂದ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲು ಮತ್ತು ಅಫ್ಘಾನಿಸ್ತಾನದಲ್ಲಿ ಎಲ್ಲರಿಗೂ ಇದಕ್ಕೆ ಪ್ರವೇಶ ಸಿಗದಂತೆ ಮಾಡಲು ಆದೇಶಿಸಲಾಗಿದೆ." ಎಂದು ಅವರು ತಿಳಿಸಿದ್ದಾರೆ. (Twitter)

ಡೇಟಾ ರಿಪೋರ್ಟಲ್‌ನ ಡಿಜಿಟಲ್ 2022: ಅಫ್ಘಾನಿಸ್ತಾನ ವರದಿಯ ಪ್ರಕಾರ, ದೇಶದ 40 ಮಿಲಿಯನ್ ಜನಸಂಖ್ಯೆಯ ಸುಮಾರು 23% ಜನರು ಜನವರಿಯಲ್ಲಿ ಇಂಟರ್ನೆಟ್‌ಗೆ ಪ್ರವೇಶವನ್ನು ಹೊಂದಿದ್ದರು ಮತ್ತು 2021 ಮತ್ತು 2022 ರ ನಡುವೆ ಇಂಟರ್ನೆಟ್ ಬಳಕೆದಾರರು 7% ರಷ್ಟು ಹೆಚ್ಚಾಗಿದೆ.ದೇಶದ ಇತರ ಜನಪ್ರಿಯ ಸಾಮಾಜಿಕ ಮಾಧ್ಯಮ ನೆಟ್‌ವರ್ಕ್‌ಗಳಲ್ಲಿ ಫೇಸ್‌ಬುಕ್ ಮತ್ತು ವಾಟ್ಸಾಪ್ ಸೇರಿವೆ.

ಗಡ್ಡ ಬಿಡುವುದು ಕಡ್ಡಾಯ:  ಅಫ್ಘಾನಿಸ್ತಾನ ತಾಲಿಬಾನ್‌ ಸರ್ಕಾರ, ತನ್ನ ನೌಕರರಿಗೆ ಹೊಸ ವಸ್ತ್ರ ಸಂಹಿತೆ ಜಾರಿಗೊಳಿಸಿದ್ದು , ಆ ಪ್ರಕಾರ ಪುರುಷ ನೌಕರರು ಗಡ್ಡವಿಲ್ಲದೆ ನೌಕರಿಗೆ ಬರುವಂತಿಲ್ಲ ಎಂದು ಆದೇಶ ಹೊರಡಿಸಿತ್ತು.

ಜೊತೆಗೆ ಅವರಿಗೆ ಪಾಶ್ಚಾತ್ಯ ಉಡುಗೆಗಳಿಗೂ ಕಡಿವಾಣಹಾಕಲಾಗಿದ್ದು, ತಲೆಗೆ ಟೋಪಿ, ಉದ್ದನೆಯ ಪೈಜಾಮ ಮತ್ತು ಪ್ಯಾಂಟ್‌ ಬಳಸುವಂತೆ ಸೂಚನೆ ನೀಡಿದೆ. ಇಸ್ಲಾಮಿಕ್‌ ಧರ್ಮದ ಪ್ರಕಾರ ಪ್ರತಿದಿನ 6 ಬಾರಿ ಪ್ರಾರ್ಥನೆ ಮಾಡುವಂತೆ ಆದೇಶಿಸಲಾಗಿದೆ. ಕಾನೂನನ್ನು ಪಾಲಿಸದಿದ್ದರೆ ಅಂತಹ ನೌಕರರಿಗೆ ಕಚೇರಿ ಒಳಗೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಎಂದು  ಹೇಖಿದೆ.

Latest Videos
Follow Us:
Download App:
  • android
  • ios