ವಿಮಾನ ಪ್ರಯಾಣಿಕರಿಗೆ ಶುಭ ಸುದ್ದಿ : ಶೀಘ್ರ ಈ ಸೇವೆಯೂ ಲಭ್ಯ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 24, Aug 2018, 11:12 AM IST
Soon Travellers Can Make Phone Call In Flight
Highlights

ಶೀಘ್ರದಲ್ಲೇ ವಿಮಾನ ಪ್ರಯಾಣಿಕರಿಗೆ ಸಿಗಲಿದೆ ಶುಭ ಸುದ್ದಿ ನೀವಿವನ್ನು ವಿಮಾನದಲ್ಲಿ ಕುಳಿತುಕೊಂಡು ಇಂಟರ್ನೆಟ್ ನೋಡಬಹುದು ಹಾಗೂ ಫೋನ್ ಕರೆಯನ್ನು ಮಾಡಬಹುದಾಗಿದೆ. 

ನವದೆಹಲಿ: ಸಂಚಾರದ ವೇಳೆ ಮೊಬೈಲ್‌ ಕರೆ ಮಾಡುವ ಮತ್ತು ಅಂತರ್ಜಾಲ ಬಳಸಲು ಅವಕಾಶ ನೀಡುವ ಮುಂದಿನ ಅಕ್ಟೋಬರ್‌ ತಿಂಗಳಿನಿಂದ ವಿಮಾನ ಪ್ರಯಾಣಿಕರಿಗೆ ಲಭ್ಯವಾಗಲಿದೆ.

ಟೆಲಿಕಾಂ ಕಂಪೆನಿಗಳು ಮತ್ತು ಸೇವಾ ಸಂಸ್ಥೆಗಳಿಗೆ ವಿಮಾನದಲ್ಲೂ ಸಂಪರ್ಕ ಸೇವೆ ಕಲ್ಪಿಸುವುದಕ್ಕೆ ಸಂಬಂಧಿಸಿ ಪರವಾನಿಗೆ ಮತ್ತು ನಿಯಮಗಳ ರಚನೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಮುಂದಿನ 2 ಹಂತದಲ್ಲಿ ಪೂರ್ಣಗೊಳ್ಳಲಿದೆ.

ಬಳಿಕ ವಿಮಾನ ಪ್ರಯಾಣಿಕರಿಗೆ ಯಾವುದೇ ಅಡೆತಡೆಯಿಲ್ಲದೆ ವಿಮಾನ ಸಂಚಾರದ ವೇಳೆ ಮೊಬೈಲ್‌ ಕರೆ ಮತ್ತು ಅಂತರ್ಜಾಲ ಬಳಕೆ ಸಾಧ್ಯವಾಗಲಿದೆ ಎಂದು ಟೆಲಿಕಾಂ ಸಚಿವಾಲಯ ಮೂಲಗಳು ತಿಳಿಸಿವೆ.

loader