ರಾಯಲ್ ಎನ್‌ಫೀಲ್ಡ್ ಪೆಗಾಸಸ್ 500 ಬೈಕ್ ಭಾರತದಲ್ಲಿ ಮಾರಾಟಕ್ಕೆ ಕೇವಲ 250 ಬೈಕ್ ಮಾತ್ರ ಲಭ್ಯವಿತ್ತು. ಎರಡನೇ ಮಹಾಯುದ್ಧದಲ್ಲಿ ಹೋರಾಡಿದ ಬ್ರಿಟೀಷ್ ಯೋಧರಿಗೆ ಸಮರ್ಪಿಸಿದ ಈ ಬೈಕ್ ಭಾರತದಲ್ಲಿ ಸೋಲ್ಡ್ ಔಟ್ ಆಗಿದೆ. ಈ 250 ಬೈಕ್ ಮಾರಾಟವಾಗಲು ತೆಗೆದುಕೊಂಡ  ಸಮಯ ಅಚ್ಚರಿ ಮೂಡಿಸುತ್ತಿದೆ. ಇಲ್ಲಿದೆ ಸಂಪೂರ್ಣ ವಿವರ.

ಬೆಂಗಳೂರು(ಜು.26): ಭಾರತದ ಅತ್ಯಂತ ಜನಪ್ರೀಯ ಬೈಕ್‌ಗಳಲ್ಲಿ ರಾಯಲ್ ಎನ್‌ಫೀಲ್ಡ್‌ಗೆ ಅಗ್ರಸ್ಥಾನ. ಇತ್ತೀಚೆಗೆ ರಾಯಲ್ ಎನ್‌ಫೀಲ್ಡ್ ಪೆಗಾಸಸ್ 500 ಬಿಡುಗಡೆ ಮಾಡಿತ್ತು. ಹೊಸ ಲುಕ್ ಬೈಕ್ ಪ್ರೀಯರನ್ನ ಮೋಡಿ ಮಾಡಿತ್ತು. ಆದರೆ ಭಾರತದಲ್ಲಿ ಕೇವಲ 250 ಬೈಕ್‌ಗಳು ಮಾತ್ರ ಲಭ್ಯವಿತ್ತು.

ಭಾರತದಲ್ಲಿ 250 ಹಾಗೂ ಇತರ ದೇಶಗಳಲ್ಲಿ ಒಟ್ಟು 1000 ಬೈಕ್ ಮಾರಾಟಕ್ಕೆ ಲಭ್ಯವಿತ್ತು. ಇದರಲ್ಲಿ ಬುಕ್ಕಿಂಗ್ ಅನೌನ್ಸ್ ಆಗಿದ್ದೇ ತಡ ಭಾರತದ 250 ಬೈಕ್‌ಗಳು ಕೇವಲ 178 ಸೆಕೆಂಡುಗಳಲ್ಲಿ ಮಾರಾಟವಾಗಿದೆ ಎಂದು ಭಾರತದ ರಾಯಲ್ ಎನ್‌ಫೀಲ್ಡ್ ಸಂಸ್ಥೆ ಹೇಳಿದೆ. ಆನ್ ಲೈನ್ ಬುಕ್ಕಿಂಗ್ ಆರಂಭವಾದ ಮೂರೇ ನಿಮಿಷಕ್ಕೆ 250 ಬೈಕ್ ಮಾರಾಟವಾಗಿದೆ.

Scroll to load tweet…

ಎರಡನೇ ಮಹಾಯುದ್ದದಲ್ಲಿ ಹೋರಾಡಿದ ಬ್ರಿಟೀಷ್ ಯೋಧರಿಗೆ ಅರ್ಪಿಸಿರುವ ಈ ಪೆಗಾಸಸ್ ಎಡಿಶನ್ ಹಲವು ವಿಶೇಷತೆಗಳನ್ನ ಒಳಗೊಂಡಿದೆ. ಎರಡನೇ ಮಹಾಯುದ್ಧದಲ್ಲಿ ಸಂದರ್ಭದಲ್ಲಿ ಬ್ರಿಟೀಷ್ ಸೈನಿಕರಿಗಾಗಿ ಬಳಸಲಾದ ರಾಯನ್ ಎನ್‌ಫೀಲ್ಡ್ WD/125 ಬೈಕ್‌ನಿಂದ ಸ್ಪೂರ್ತಿ ಪಡೆದು ನೂತನ ಪೆಗಾಸಸ್ ಬೈಕ್ ನಿರ್ಮಿಸಲಾಗಿದೆ.

ಪೆಗಾಸಸ್ ಬೈಕ್ ಟ್ಯಾಂಕ್ ಮೇಲೆ ಎರಡನೇ ಮಹಾಯುದ್ದದ ವೇಳೆ ಪ್ಯಾರಾಚೂಟ್ ರೆಜಿಮೆಂಟ್ ಸೈನಿಕರ ನಂಬರ್ ನಮೂದಿಸಲಾಗಿದೆ. ಮಿಲಿಟರಿ ಶೈಲಿಯಲ್ಲಿ ನಿರ್ಮಿಸಿರುವ ಪೆಗಾಸಸ್ ಬೈಕ್ ಎರಡು ಬಣ್ಣಗಳಾದ ಕಂದು ಹಾಗು ಕಡು ಹಸಿರು ಬಣ್ಣಗಳಲ್ಲಿ ಲಭ್ಯವಿದೆ. 

ಹೆಡ್‌ಲ್ಯಾಂಪ್, ಹ್ಯಾಂಡಲ್ ಬಾರ್, ರಿಮ್, ಹಾಗು ಸೈಲೆನ್ಸರ್‌ಗಳಿಗೆ ಕಪ್ಪು ಬಣ್ಣ ನೀಡೋ ಮೂಲಕ ರೆಟ್ರೋ ಸ್ಟೈಲ್‌ನಲ್ಲಿ ತಯಾರಿಸಲಾಗಿದೆ. 499 ಸಿಸಿ ಇಂಜಿನ್, ಸಿಂಗಲ್ ಸಿಲಿಂಡರ್, 27.2 ಬಿಹೆಚ್‌ಪಿ ಪವರ್ ಹಾಗೂ 5 ಗೇರ್‌ಗಳನ್ನ ಹೊಂದಿದೆ. ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಪೆಗಾಸಸ್ ಬೆಲೆ 2 ಲಕ್ಷ ರೂಪಾಯಿ (ಎಕ್ಸ್ ಶೋ ರೂಮ್).

ಇದನ್ನು ಓದಿ: ಮಹೀಂದ್ರ ಮೋಟಾರು ಸಂಸ್ಥೆ ಮುಖ್ಯಸ್ಥನ ವಾರ್ಷಿಕ ಸ್ಯಾಲರಿ ಎಷ್ಟು?