Asianet Suvarna News Asianet Suvarna News

ಮಹೀಂದ್ರ ಮೋಟಾರು ಸಂಸ್ಥೆ ಮುಖ್ಯಸ್ಥನ ವಾರ್ಷಿಕ ಸ್ಯಾಲರಿ ಎಷ್ಟು ಗೊತ್ತಾ?

ಮಹೀಂದ್ರ ಮೋಟಾರು ಸಂಸ್ಥೆ ಭಾರತದಲ್ಲಿ ಹೆಚ್ಚು ಜನಪ್ರೀಯವಾಗಿದೆ. ಈ ಸಂಸ್ಥೆಯ ಮುಖ್ಯಸ್ಥನಿಗಿಂತ ವ್ಯವಸ್ಥಾಪಕ ನಿರ್ದೇಶಕನ ಸ್ಯಾಲರಿ ಹೆಚ್ಚು. ಹಾಗಾದರೆ ಇವರಿಬ್ಬರ ಸಂಭಾವನೆ ಎಷ್ಟು? ಇಲ್ಲಿದೆ ವಿವರ

Anand Mahindra salary Rs 8.03 cr in FY18
Author
Bengaluru, First Published Jul 26, 2018, 1:32 PM IST

ನವದೆಹಲಿ(ಜು.26): ಭಾರತದಲ್ಲಿ ಜೀಪ್, ಕಾರು ಹಾಗೂ ಘನ ವಾಹನಗಳಿಗೆ ಹೆಸರುವಾಸಿಯಾಗಿರೋ ಮಹೀಂದ್ರ ಸಂಸ್ಥೆ, ಇದೀಗ ಇತರ ಕಾರುಗಳಿಗೆ ಭಾರಿ ಪೈಪೋಟಿ ನೀಡುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ, ಆಕರ್ಷಕ ಬೆಲೆಯಲ್ಲಿ ಕಾರುಗಳನ್ನ ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ಯಶಸ್ಸಿನ ಹಾದಿಯಲ್ಲಿರುವ ಮಹೀಂದ್ರ ಸಂಸ್ಥೆ ಇದೀಗ ನೂತನ ಕಾರುಗಳನ್ನ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಈ ನಡುವೆ ಮಹೀಂದ್ರ ಸಂಸ್ಥೆ ಮುಖ್ಯಸ್ಥ ಆನಂದ್ ಮಹೀಂದ್ರ ಅವರ ವಾರ್ಷಿಕ ಸ್ಯಾಲರಿ ಬಹಿರಂಗವಾಗಿದೆ. 2017-18ರ ಸಾಲಿನಲ್ಲಿ ಆನಂದ್ ಮಹೀಂದ್ರ 8.03ಕೋಟಿ ಸಂಭಾವನೆ ಪಡೆದಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ, ಆನಂದ್ ಮಹೀಂದ್ರ ಸ್ಯಾಲರಿ 4.69% ಹೆಚ್ಚಳವಾಗಿದೆ. ವಿಶೇಷ ಅಂದರೆ ಮುಖ್ಯಸ್ಥ ಆನಂದ್ ಮಹೀಂದ್ರ ಸ್ಯಾಲರಿಗಿಂತ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪವನ್ ಗೊಯೆಂಕಾ ಸ್ಯಾಲರಿ ಅಧಿಕವಾಗಿದೆ.

2017-18ರ ಸಾಲಿನಲ್ಲಿ ಪವನ್ ಗೊಯೆಂಕಾ 8.70 ಕೋಟಿ ಸಂಭಾವನೆ ಪಡೆದಿದ್ದಾರೆ. ಕಳೆದ ವರ್ಷ 7.67 ಕೋಟಿ ರೂಪಾಯಿ ಸ್ಯಾಲರಿ ಪಡೆದಿದ್ದ ಗೊಯೆಂಕಾ, ಈ ಭಾರಿ 15.86% ಸಂಭಾವನೆ ಹೆಚ್ಚಳವಾಗಿದೆ. ಇದರ ಜೊತಗೆ ಇತರ ವೆಚ್ಚ ಸೇರಿದಂತೆ 3.51 ಕೋಟಿ ರೂಪಾಯಿ ಪಡೆದಿದ್ದಾರೆ. ಹೀಗಾಗಿ ಪವನ್ ಗೊಯೆಂಕಾ ಈ ವರ್ಷ ಒಟ್ಟು 12.21 ಕೋಟಿ ರೂಪಾಯಿ ಎಣಿಸಿದ್ದಾರೆ.

Follow Us:
Download App:
  • android
  • ios