Asianet Suvarna News Asianet Suvarna News

ಬಹಿರಂಗವಾಯ್ತು ಜಿಯೋದ ಮತ್ತೊಂದು ಸೂಪರ್ ಡೂಪರ್ ಆಫರ್

ಈ ವರ್ಷದ ಆರಂಭದಲ್ಲಿ ರಿಲಯನ್ಸ್ ಸಂಸ್ಥೆಯು ಬ್ರಾಡ್'ಬ್ಯಾಂಡ್ ಸೇವಾದಾರರಿಗಾಗಿಯೇ ಜಿಯೋ ಫೈಬರ್ ಎಂಬ ಆಫರ್'ಅನ್ನು ಮುಂಬೈ, ದೆಹಲಿ-ಎನ್'ಸಿಆರ್, ಅಹಮದಾಬಾದ್, ಜಾಮ್ನಾ ನಗರ ಸೇರಿದಂತೆ ಕೆಲವು ನಗರಗಳಿಗೆ ಪ್ರಾಯೋಗಿಕವಾಗಿ ಜಾರಿಗೊಳಿಸಿತ್ತು.

Reliance JioFiber data plan leaked on official website

ಮುಂಬೈ(ಜು.12):  ಧನ್ ಧನಾ ಧನ್ ಆಫರ್ ಮುಕ್ತಾಯಗೊಳ್ಳುತ್ತಿದ್ದು, ಈಗಾಗಲೇ ಹೊಸ ಆಫರ್'ಅನ್ನು ಜಾರಿಗೊಳಿಸಿದೆ. ಈ ನಡುವೆ ಬ್ರಾಡ್'ಬ್ಯಾಂಡ್ ಬಳಕೆದಾರರಿಗೆ ಜಿಯೋ ಹೊಸ ಆಫರ್ ಘೋಷಿಸಲು ತಯಾರಾಗಿದೆ.

ಈ ವರ್ಷದ ಆರಂಭದಲ್ಲಿ ರಿಲಯನ್ಸ್ ಸಂಸ್ಥೆಯು ಬ್ರಾಡ್'ಬ್ಯಾಂಡ್ ಸೇವಾದಾರರಿಗಾಗಿಯೇ ಜಿಯೋ ಫೈಬರ್ ಎಂಬ ಆಫರ್'ಅನ್ನು ಮುಂಬೈ, ದೆಹಲಿ-ಎನ್'ಸಿಆರ್, ಅಹಮದಾಬಾದ್, ಜಾಮ್ನಾ ನಗರ ಸೇರಿದಂತೆ ಕೆಲವು ನಗರಗಳಿಗೆ ಪ್ರಾಯೋಗಿಕವಾಗಿ ಜಾರಿಗೊಳಿಸಿತ್ತು.

ಆದರೆ ಈಗ ಅಧಿಕೃತವಾಗಿ ಜಾರಿಗೊಳಿಸುತ್ತಿದ್ದು, ವೆಬ್'ಸೈಟ್ ಒಂದು ಬಿಡುಗಡೆ ಮಾಡಿರುವ ವರದಿ, ಪೋಸ್ಟರ್ ಪ್ರಕಾರ ಮೂರು ತಿಂಗಳ ಕಾಲ ತಿಂಗಳಿಗೆ 100ಜಿಬಿಯಂತೆ 100 ಎಂಬಿಪಿಎಸ್ ವೇಗದಲ್ಲಿ ಉಚಿತ ಆಫರ್'ಅನ್ನು ಪ್ರಕಟಿಸಲಿದೆಯಂತೆ.ಈ ಆಫರ್'ಗೆ ತಿಂಗಳ ಶುಲ್ಕವಿರುವುದಿಲ್ಲ ಆದರೆ ಅಳವಡಿಕೆಗಾಗಿ 4500 ರೂ. ಪಾವತಿಸಬೇಕು. ಕೆಲವು ದಿನಗಳು ಕಳೆದ ನಂತರ ಈ ಮೊತ್ತವನ್ನು ಸಂಸ್ಥೆಯು ಮರು ಪಾವತಿಸುತ್ತದೆ. ಅಂದರೆ ಗ್ರಾಹಕರಿಗೆ 3 ತಿಂಗಳು ಉಚಿತವಾಗಿ ದೊರಯಲಿದೆ.

ಬ್ರಾಡ್'ಬ್ಯಾಂಡ್ ಆಫರ್'ನಲ್ಲಿ ಜಿಯೋ ಮೀಡಿಯಾ ಶೇರ್ ಡಿವೈಸ್, ಸ್ಮಾರ್ಟ್ ಸೆಟ್ ಅಪ್ ಬಾಕ್ಸ್, ರೂಟರ್ ಹಾಗೂ ಪವರ್ ಲೈನ್ ಕಮ್ಯುನಿಕೇಷನ್ ಡಿವೈಸ್ ಒಳಗೊಂಡಿರುತ್ತದೆ. ಆಫರ್ ಅವಧಿ ಮುಗಿದ ನಂತರ 100 ಎಂಬಿಪಿಎಸ್ ವೇಗದಲ್ಲಿ 600 ಜಿಬಿಗೆ 500ರೂ. ಹಾಗೂ 2000 ರೂ.ಗಳಿಗೆ 1000 ಜಿಬಿ ಸೇವೆಗಳನ್ನು ಪರಿಚಯಿಸುವ ಸಾಧ್ಯತೆಯಿದೆ. ಜಿಯೋ'ದ ಈ ಆಫರ್'ನಿಂದ ಪ್ರಸ್ತುತ ಬ್ರಾಡ್'ಬ್ಯಾಂಡ್ ಸೇವೆ ನೀಡುತ್ತಿರುವ  ಏರ್'ಟೆಲ್, ಬಿಎಸ್'ಎನ್'ಎಲ್ ಹಾಗೂ ಎಂಟಿಎನ್'ಎಲ್ ಸಂಸ್ಥೆಗಳಿಗೆ ನಡುಕ ಶುರುವಾಗುವುದು ಖಚಿತ.

 

Latest Videos
Follow Us:
Download App:
  • android
  • ios