ಜಿಯೋ ಫೋನ್ ಬಳಕೆದಾರರಿಗೆ ರಿಲಯನ್ಸ್ ಜಿಯೋ ಹೊಸದಾಗಿ ಮಾನ್ಸೂನ್ ಹಂಗಾಮ ಹೆಸರಿನಲ್ಲಿ ಎರಡು ದೀರ್ಘಾವಧಿಯ ಪ್ಲಾನ್‌ಗಳನ್ನು ಪ್ರಕಟಿಸಿದೆ.  ರೂ. 594 ಮತ್ತು ರೂ. 297ಕ್ಕೆ  ದೊರೆಯುವ ಈ ಪ್ಲಾನ್‌ಗಳು ಬಳಕೆದಾರರಿಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸಿದೆ.

ರೂ. 594 ಪ್ಲಾನ್‌ನಲ್ಲಿ ಜಿಯೋ ಫೋನ್ ಬಳಕೆದಾರರಿಗೆ ಅನ್‌ಲಿಮಿಟೆಡ್ ಲೋಕಲ್ ಮತ್ತು ಎಸ್‌ಟಿಡಿ ಕರೆಗಳನ್ನು ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ, ಅಲ್ಲದೇ ನಿತ್ಯ 0.5 GB ಡೇಟಾವನ್ನುಪಡೆದುಕೊಳ್ಳಬಹುದಾಗಿದೆ. ಇದು ಖಾಲಿಯಾದ ನಂತರದಲ್ಲಿ 64Kbps ವೇಗದಲ್ಲಿ ಡೇಟಾವನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ: ರಾಜಕಾರಣಿಗಳೇ...ಇನ್ಮುಂದೆ ಯಾಮಾರಿಸುವುದು ಸುಲಭವಲ್ಲ! ಗೂಗಲ್ ಲೆಕ್ಕ ಮಾಡ್ತಿದ್ದಾನೆ ಎಲ್ಲಾ!!

ಈ ಪ್ಲಾನ್ 168 ದಿನಗಳ ವ್ಯಾಲಿಡಿಟಿ ಹೊಂದಿದೆ, ಅಂದರೆ ಗ್ರಾಹಕರಿಗೆ ಆರು ತಿಂಗಳ ವ್ಯಾಲಿಡಿಟಿ ದೊರೆಯಲಿದೆ. ಇದಲ್ಲದೇ ಬಳಕೆದಾರರಿಗೆ ಜಿಯೋ ಸೂಟ್ ಮತ್ತು 300 SMSಗಳನ್ನು ಕಳುಹಿಸುವ ಅವಕಾಶವನ್ನು ನೀಡಲಾಗಿದೆ.

ರೂ. 297ಕ್ಕೆ  ಪ್ಲಾನ್‌ನಲ್ಲಿ ಜಿಯೋ ಫೋನ್ ಬಳಕೆದಾರರಿಗೆ ಅನ್‌ಲಿಮಿಟೆಡ್ ಲೋಕಲ್ ಮತ್ತು ಎಸ್‌ಟಿಡಿ ಕರೆಗಳನ್ನು ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ, ಅಲ್ಲದೇ ನಿತ್ಯ 0.5 GB ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ, ಇದು ಖಾಲಿಯಾದ ನಂತರದಲ್ಲಿ 64Kbps ವೇಗದಲ್ಲಿ ಡೇಟಾವನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ: ಕತ್ತಲಾದ್ರೆ ಏನಾಯಿತು? ವಾಟ್ಸಪ್ ಕೊಡ್ತಾ ಇದೆ ಹೊಸ ಫೀಚರ್!

ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ 84 ದಿನಗಳ ವ್ಯಾಲಿಡಿಟಿ (ಮೂರು ತಿಂಗಳು) ದೊರೆಯಲಿದೆ. ಇದಲ್ಲದೇ ಬಳಕೆದಾರರಿಗೆ ಜಿಯೋ ಸೂಟ್ ಮತ್ತು 300 SMSಗಳನ್ನು ಕಳುಹಿಸುವ ಅವಕಾಶವನ್ನು ನೀಡಲಾಗಿದೆ.