ಮುಂಬೈ(ಅ.07): ಮೊಬೈಲ್ ಬಳಕೆದಾರರಿಗೆ ಉಚಿತ ಡೇಟಾ ನೀಡಿದ ರಿಲಯನ್ಸ್ ಮಾಲೀಕತ್ವದ ಜಿಯೋದಿಂದ ಬ್ರಾಡ್ ಬ್ಯಾಂಡ್ ಸೇವೆ ಆರಂಭವಾಗಲಿದ್ದು, ಇದು ಇತರೇ ಬ್ರಾಡ್ ಬ್ಯಾಂಡ್ ಸೇವೆ ನೀಡುತ್ತಿರುವ ಕಂಪನಿಗಳಿಗೆ ಅತೀ ದೊಡ್ಡ ಹೊಡೆತವನ್ನು ನೀಡುವುದಂತೂ ಖಂಡಿತ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಿಯೋ ಗಿಗಾ ಫೈಬರ್ ಹೆಸರಿನಲ್ಲಿ ಬ್ರಾಡ್ ಬ್ಯಾಂಡ್ ಸೇವೆ ಶುರುವಾಗಲಿದ್ದು, ಇದು ಪ್ರತಿ ತಿಂಗಳಿಗೆ ಕೇವಲ 500 ರೂಪಾಯಿಗಳಿಗೆ 15 ಎಂಬಿಪಿಎಸ್ ವೇಗದಲ್ಲಿ 600 ಜಿಬಿ ಡೇಟಾವನ್ನು ಓದಗಿಸಲಿದೆ. 

ಇದೇ ಒಂದು ತಿಂಗಳ ಹಿಂದೆ ಮೊಬೈಲ್'ಗಳಿಗೆ ಉಚಿತ 4 ಸೇವೆಯನ್ನು ಘೊಷಿಸಿದ ಸಂದರ್ಭದಲ್ಲೇ ನಡೆದ ಕ್ರಾಂತಿಕಾರಕ ಬದಲಾವಣೆ ಇಲ್ಲಿಯೂ ಕಾಣಸಿಗಲಿದೆ. 

ಫೈಬರ್ ಬ್ರಾಡ್ ಬ್ಯಾಂಡ್ ಸೇವೆ ಆರಂಭಿಸಲು ಈಗಾಗಲೇ ಜಿಯೋ ಭರ್ಜರಿ ಸಿದ್ಧತೆ ನಡೆಸಿದ್ದು, ಇದರಿಂದ ಬಳಕೆದಾರರಿಗೆ ಯಾವುದೇ ಅಡೆ-ತಡೆಗಳು ಇಲ್ಲದೇ ಇಂಟರ್ ನೆಟ್ ಬಳಸಬಹುದಾಗಿದ್ದು, ಅದುವೇ ಅತೀ ವೇಗದಲ್ಲಿ ಕಾರ್ಯ ನಿರ್ವಹಿಸಲಿದೆ.