ಕೆಲವರು ಇರುವ ಡೇಟಾವನ್ನು ಬಳಸಲಾಗದೇ ಇದ್ದರೆ, ಇನ್ನು ಕೆಲವರಿಗೆ ಎಷ್ಟು ಡೇಟಾವಿದ್ದರೂ ಸಾಲದು. ಅಂತಹದ್ದರಲ್ಲಿ ಹೆಚ್ಚುವರಿ ಡೇಟಾ ಸಿಕ್ಕರೆ ಖುಷಿಗೆ ಪಾರವೇ ಇರಲ್ಲ. ಅಂತಹ ಆಫರ್‌ವೊಂದನ್ನು Reliance Jio ಪರಿಚಯಿಸಿದೆ..

Reliance Jio ಈಗ ಸೆಲೆಬ್ರೇಷನ್ಸ್ ಪ್ಯಾಕ್‌ಬಿಡುಗಡೆ ಮಾಡಿದೆ. ಈ ಪ್ಯಾಕ್‌ನಲ್ಲಿ 10GB ಡೇಟಾ ಉಚಿತವಾಗಿ ಸಿಗಲಿದೆ. ಪ್ರತಿ ದಿನ 2GBಯಂತೆ, ಸತತ 5 ದಿನಗಳವರೆಗೆ ಈ ಪ್ಯಾಕನ್ನು ಬಳಸಬಹುದು. ಈ ಪ್ಯಾಕ್ ಜಿಯೋ ಪ್ರೈಮ್ ಬಳಕೆದಾರರಿಗೆ ಮಾತ್ರ ಲಭ್ಯ.

ಇದನ್ನೂ ಓದಿ: ಈ ಫೋನ್‌ಗೆ ದಾಳಿ ಮಾಡಿದೆ ಅಜ್ಞಾತ ಬಗ್! ನಿಮಗೂ ಈ ಸಮಸ್ಯೆ ಕಾಡುತ್ತಿದೆಯಾ?

ಅಂದ ಹಾಗೇ, ಇನ್ನಿತರ ಪ್ಲಾನ್‌ಗಳಂತೆ ಈ ಸೆಲೆಬ್ರೇಷನ್ ಪ್ಯಾಕ್ ಜಿಯೋ ವೆಬ್‌ಸೈಟ್‌ನಲ್ಲಿ ಸಿಗಲ್ಲ. ಇದು ಸಾರ್ವತ್ರಿಕವಾಗಿ ಸಿಗೋದು ಇಲ್ಲ, ಬಳಕೆದಾರರು ಮೈಜಿಯೋ ಆ್ಯಪ್‌ನಲ್ಲಿ ಚೆಕ್ ಮಾಡುತ್ತಿರಬೇಕು.  ಆಗ ಅದು ತಮಗೆ ಲಭ್ಯವಿದೆಯೇ ಇಲ್ಲವೋ ಎಂದು ತಿಳಿಯುತ್ತದೆ.

ಸೆಲೆಬ್ರೇಷನ್ ಪ್ಯಾಕ್ ಬಗ್ಗೆ ಚೆಕ್ ಮಾಡಲು ಬಳಕೆದಾರರು, ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪ್ ಸ್ಟೋರ್‌ನಿಂದ ಮೈಜಿಯೋ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು.  ನಿಮ್ಮ ಜಿಯೋ ನಂ. ಬಳಸಿ ಲಾಗಿನ್ ಆಗಬೇಕು. ನಿಮಗೆ ಬಂದ OTPಯನ್ನು ದಾಖಲಿಸಿ, ಆ್ಯಪ್‌ನ ’ಮೈ ಪ್ಲಾನ್ಸ್’ ವಿಭಾಗಕ್ಕೆ ಹೋಗಿ, ಅಲ್ಲಿ ಜಿಯೋ ಸೆಲೆಬ್ರೇಷನ್ ಪ್ಲ್ಯಾನ್ ಇದೆಯೋ ಇಲ್ಲವೋ ಎಂದು ನೊಡಬಹುದು.

ಇದನ್ನೂ ಓದಿ: ಎಚ್ಚರ! ನಿಮ್ಮ ವಾಟ್ಸಪ್ ಚಟುವಟಿಕೆ ನೋಡ್ತಿದ್ದಾನೆ ಒಬ್ಬ!

ಕಳೆದ ವರ್ಷ ಸಪ್ಟೆಂಬರ್‌ನಲ್ಲೂ, ಜಿಯೋ ತನ್ನ 2ನೇ ವಾರ್ಷಿಕೋತ್ಸವದ ಪ್ರಯುಕ್ತ ಸೆಲೆಬ್ರೇಷನ್ ಪ್ಯಾಕನ್ನು ಬಿಡುಗಡೆ ಮಾಡಿತ್ತು.