Asianet Suvarna News Asianet Suvarna News

ಸ್ಮಾರ್ಟ್ ಟಿವಿ ಕೊಳ್ಳುವಿರಾ..? ನಿಮಗಿದು ತಿಳಿದಿರಲಿ

ನೀವು ಮನೆಗೆ ಕೊಂಡೊಯ್ಯುವ ಟಿವಿ ಹೇಗಿದ್ದರೆ ಚೆನ್ನ? ಅದರಲ್ಲಿ ಯಾವ್ಯಾವ ವೈಶಿಷ್ಟ್ಯಗಳಿರಬೇಕು? ಈಗ ಮಾರುಕಟ್ಟೆಗೆ ಬಂದಿರುವ ಹೊಸ ಟಿವಿಗಳು ಹೇಗಿವೆ?

read these tips before buying smart tv

ಇಂದು ಜಗತ್ತೇ ಸ್ಮಾರ್ಟ್‌ಗೊಳ್ಳುತ್ತಿದೆ. ಹಾಗಾಗಿ ನಾವು ಬಳಸುವ ಗೃಹ ಬಳಕೆ ವಸ್ತುಗಳೂ ಸಹ ಸ್ಮಾರ್ಟ್ ಆಗಿರಬೇಕೆಂದು ಬಯಸುವುದು ಸಾಮಾನ್ಯ. ಅದರಂತೆ ನಾವು ನಮ್ಮ ಮನೆಗೆ ಕೊಂಡೊಯ್ಯುವ ಟಿವಿ ತಂತ್ರಜ್ಞಾನದಲ್ಲೂ ಕಳೆದೆರಡು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ತಯಾರಿಕೆಯಿಂದ ಹಿಡಿದು ಟಿವಿಗಳಲ್ಲಿರುವ ತಂತ್ರಜ್ಞಾನವೂ ಬದಲಾಗಿದೆ. ಉತ್ತಮ ತಂತ್ರಜ್ಞಾನ ಮತ್ತು ಆಯ್ಕೆಗಳಿರುವ ಎಚ್‌ಡಿ, ಯುಎಚ್‌ಡಿ, ಎಲ್‌ಇಡಿ, ಯುಎಲ್‌ಇಡಿ, ಎಚ್‌ಡಿಆರ್ ಮಾಡೆಲ್‌ಗಳಲ್ಲಿ ಸ್ಮಾರ್ಟ್ ಆದ ಟಿವಿಗಳು ಮಾರುಕಟ್ಟೆಗೆ ಬಂದಿವೆ. ಹಾಗಾದರೆ ನೀವು ಮನೆಗೆ ಕೊಂಡೊಯ್ಯುವ ಟಿವಿ ಹೇಗಿದ್ದರೆ ಚೆನ್ನ? ಅದರಲ್ಲಿ ಯಾವ್ಯಾವ ವೈಶಿಷ್ಟ್ಯಗಳಿರಬೇಕು? ಈಗ ಮಾರುಕಟ್ಟೆಗೆ ಬಂದಿರುವ ಹೊಸ ಟಿವಿಗಳು ಹೇಗಿವೆ?

1) ದೊಡ್ಡ ಪರದೆ ಇದ್ದರೆ ಉತ್ತಮ
ದೊಡ್ಡ ಪರದೆಯಲ್ಲಿ ಸಿನಿಮಾಗಳನ್ನು ನೋಡಬೇಕು ಮತ್ತು ಗೇಮ್ ಆಡಬೇಕೆಂಬ ಇರಾದೆಯಲ್ಲಿ ಟಿವಿ ಖರೀದಿಸುವವರು, ಸಾಮಾನ್ಯವಾಗಿ ೬೫ ಇಂಚಿನ ಟಿವಿಗಳನ್ನು ಖರೀದಿಸುತ್ತಾರೆ. ಅಲ್ಲದೇ ಟಿವಿಗಳ ಬೆಲೆಯಲ್ಲಿ ಇಳಿಮುಖವಾಗಿರುವುದರಿಂದ ನೀವು ೬೫ ಇಂಚಿನ ದೊಡ್ಡ ಪರದೆಯ, ಎಚ್‌ಡಿ ಗುಣಮಟ್ಟದ ಟಿವಿ ಖರೀದಿಸಬಹುದು. ಈ ಬೆಲೆಯ ಟಿವಿ ಖರೀದಿಸುವಂತಿದ್ದರೆ, ೪ಕೆ ಮಾಡೆಲ್‌ನ ಟಿವಿ ಕೊಂಡುಕೊಳ್ಳಬಹುದು. ಇದರ ಬೆಲೆ ₹೬೦ ಸಾವಿರ.

2) ಸ್ಮಾರ್ಟ್ ಟಿವಿ
ನೀವು ನೆಟ್ ಆಧಾರಿತ ಸಾಕಷ್ಟು ಸೌಲಭ್ಯಗಳಾದ ಸ್ಟ್ರೀಮಿಂಗ್ ಮತ್ತು ಅಮೆಜಾನ್‌ನಂತಹ ಸೇವೆಗಳನ್ನು ಪಡೆಯಬೇಕೆಂದಿದ್ದರೆ, ವೈಫೈ ಸಂಪರ್ಕವನ್ನು ನೀಡಬಹುದಾದ ಸ್ಮಾರ್ಟ್ ಟಿವಿಗಳನ್ನು ಕೊಳ್ಳುವುದು ಸೂಕ್ತ. ಇದರಿಂದ ಯಾವುದೇ ತೊಂದರೆ ಇಲ್ಲದೇ, ಒಂದೇ ರಿಮೋಟ್‌ನಲ್ಲಿ ಎಲ್ಲ ಸೇವೆಗಳನ್ನು ಪಡೆಯಬಹುದು. ಹಾಗಾಗಿ ಇಂತಹ ಸೌಲಭ್ಯ ಹೊಂದಿರುವ ಸ್ಮಾರ್ಟ್ ಟಿವಿಗಳನ್ನು ಕೊಳ್ಳುವುದು ಸೂಕ್ತ.

3) ಬಾಗಿದ ಪರದೆ ಟಿವಿಗಳು
ಸಾಕಷ್ಟು ಜನ ಪರದೆ ಮುಂದೆಯೇ ಕುಳಿತು ಟಿವಿ ನೋಡುತ್ತಾರೆ. ಅನೇಕರು ಕೆಲವು ವರ್ಷಗಳ ಹಿಂದೆ ಇದ್ದ ಕರ್ವ್ ಟಿವಿಗಳಿಗೆ ಪರ್ಯಾಯವಾಗಿ ಫ್ಲಾಟ್ ಟಿವಿಗಳನ್ನು ಕೊಂಡಿದ್ದರು. ನೀವು ಪರದೆ ಹತ್ತಿರ ಕುಳಿತು ಟಿವಿ ನೋಡುವುದಾದರೆ ದೊಡ್ಡ ಪರದೆಯ ಟಿವಿಗಳನ್ನು ಕೊಳ್ಳಬೇಡಿ.

Follow Us:
Download App:
  • android
  • ios