ಬೆಂಗಳೂರು (ಜೂ.13): ಇಂಗ್ಲಂಡಿನ ಸುಂದರ ಸ್ಥಳ ಮ್ಯಾಂಚೆಸ್ಟರ್ ನೋಡೋ ಆಸೆ ಯಾರಿಗಿಲ್ಲ? ಅದು ಕೂಡಾ, ಯಾವುದೇ ಖರ್ಚಿಲ್ಲದೇ ನೋಡೋ ಅವಕಾಶ ಸಿಕ್ಕಿಬಿಟ್ರೆ? ಹೌದು, ಇಂತಹದ್ದೊಂದು ಅವಕಾಶವನ್ನು ಟೆಕ್ನೋ ಮೊಬೈಲ್ ಕಂಪನಿಯು ಇದೀಗ ಕಲ್ಪಿಸಿದೆ. ಆದರೆ ಅದಕ್ಕಾಗಿ ನೀವೊಂದು ಸವಾಲನ್ನು ಎದುರಿಸಬೇಕು!

ಸವಾಲೆಂದರೆ ಬಹಳ ದೊಡ್ಡದಾದ, ಕಷ್ಟಕರ ಅಥವಾ ತಲೆಕೆಡಿಸಿಕೊಳ್ಳುವಂಥದ್ದಲ್ಲ. ಅದು ಸಿಂಪಲ್... ನೀವು ನಡೆಯಲು ಆರಂಭಿಸಬೇಕು ಅಷ್ಟೇ !     

'ಟೆಕ್ನೋ ರೇಸ್ ಟು ಮ್ಯಾಂಚೆಸ್ಟರ್ ಸಿಟಿ’ ಎಂಬ ಕಾರ್ಯಕ್ರಮ ಇದಾಗಿದ್ದು, ಯಾರೂ ಬೇಕಾದರೂ ಪಾಲ್ಗೊಳ್ಳಬಹುದು. 60 ದಿನಗಳ ಫಿಟ್ನೆಸ್ ಸವಾಲನ್ನು ಇದು ಒಳಗೊಂಡಿದ್ದು, ದೈಹಿಕ ಕ್ರಿಯಾಶೀಲತೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ.

ಇದನ್ನೂ ಓದಿ | 2ನೇ ಬಾರಿ ಚಂದ್ರನ ಶೋಧಕ್ಕೆ ಇಸ್ರೋ ರೆಡಿ

ಫಿಟ್ನೆಸ್ ಉತ್ಸಾಹಿಗಳಿಗೆ, ಕ್ರೀಡಾಳುಗಳಿಗೆ ಮತ್ತು ಭಾರತೀಯ ಫುಟ್ಬಾಲ್ ಅಭಿಮಾನಿಗಳಿಗೆ, ಮ್ಯಾಂಚೆಸ್ಟರ್ ಸಿಟಿಯಲ್ಲಿ ನಡೆಯಲಿರುವ ‘ಟೆಕ್ನೋ ರೇಸ್ ಟು ಮ್ಯಾಂಚೆಸ್ಟರ್ ಸಿಟಿ’ ಯಲ್ಲಿ ಭಾಗವಹಿಸಲು ನೋಂದಣಿ ಶುರುವಾಗಿದೆ. ಸ್ಟೆಫಾಥ್ಲಾನ್ ಮತ್ತು ರಾ ಪ್ರೆಸ್ರೀರಿ ಸಹಯೋಗದೊಂದಿಗೆ ನಡೆಸಲಾಗುತ್ತಿರುವ ಈ ಕಾರ್ಯಕ್ರಮ ಮೂಲಕ, ದಿನಕ್ಕೆ ಕನಿಷ್ಠ 10,000 ಹೆಜ್ಜೆಗಳನ್ನು ಹಾಕಿ ನಡೆಯುವ ಅಭ್ಯಾಸವನ್ನು ಹುಟ್ಟುಹಾಕಲು ಇದೊಂದು ಪ್ರಯತ್ನ. ಈ ರೇಸ್‌ಗೆ ನೋಂದಣಿಯು ಇಂದಿನಿಂದ ಆರಂಭವಾಗಿದ್ದು, ಜುಲೈ 8, 2019 ರಂದು ಕೊನೆಗೊಳ್ಳುತ್ತದೆ. 

‘ಟೆಕ್ನೋ ರೇಸ್ ಟು ಮ್ಯಾಂಚೆಸ್ಟರ್ ಸಿಟಿ’ ಜುಲೈ 10, 2019 ರಂದು ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 7, 2019 ರವೆರೆಗೆ ನಡೆಯಲಿದೆ. ಆಸಕ್ತರು ಇಬ್ಬರಾಗಿ ತಂಡದಲ್ಲಿ ಪಾಲ್ಗೊಳ್ಳಬಹುದು. ತಮ್ಮ ಆಯ್ಕೆಯ ಸಾಧನವನ್ನು ಬಳಸಿ ಅಥವಾ ಸರಳವಾಗಿ ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಮ್ಯಾಂಚೆಸ್ಟರ್ ಸಿಟಿ ಅಪ್ಲಿಕೇಶನ್ ಬಳಸಿ,  ಆಸಕ್ತರು ನಡೆಯಬಹುದು, ಓಡಬಹುದು ಅಥವಾ ಜಾಗ್ ಮಾಡಬಹುದು.  ಜೊತೆಗೆ ಭಾರತದಾದ್ಯಂತ ಇತರ ತಂಡಗಳೊಂದಿಗೆ ಸ್ಪರ್ಧಿಸಬಹುದು ಕೂಡಾ.

ಇದನ್ನೂ ಓದಿ | ಮಹತ್ವಾಕಾಂಕ್ಷಿ ಚಂದ್ರಯಾನ - 2 ಕ್ಕೆ ಮುಹೂರ್ತ ಫಿಕ್ಸ್

ರೇಸ್ ಅವಧಿಯಲ್ಲಿ ‘ವಾರದ ಸವಾಲು’ಗಳು ನಡೆಯಲಿದ್ದು, ಪಾಲ್ಗೊಳ್ಳುವವರಿಗೆ ಹಲವು ಪ್ರಶಸ್ತಿಗಳನ್ನು ಪಡೆದುಕೊಳ್ಳುವ ಅವಕಾಶವೂ ದೊರೆಯಲಿದೆ. ಅದೃಷ್ಟಶಾಲಿ ತಂಡಕ್ಕೆ ಎಲ್ಲಾ ಖರ್ಚುಗಳನ್ನು ಪಾವತಿಸುವ ಪ್ರವಾಸ ಭಾಗ್ಯ, ಅದರೊಂದಿಗೆ ಎತಿಹಾದ್ ಕ್ರೀಡಾಂಗಣದಲ್ಲಿ ನಡೆಯುವ ಮ್ಯಾಂಚೆಸ್ಟರ್ ಸಿಟಿ ಲೈವ್ ಕಾರ್ಯಕ್ರಮವನ್ನು ವೀಕ್ಷಿಸುವ ಅವಕಾಶವೂ ಬಾಚಿಕೊಳ್ಳಬಹುದು. ಜೊತೆಗೆ, ಮ್ಯಾಂಚೆಸ್ಟರ್ ಸಿಟಿ ಪ್ರಿ ಸೀಸನ್ ಗೇಮ್ ವೀಕ್ಷಣೆಗೆ ಹಾಂಕಾಂಗ್‌ಗೆ ತೆರಳುವ ಅವಕಾಶ, ಪ್ರಸಿದ್ಧ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸುವ ಚಾನ್ಸ್, ಮ್ಯಾಂಚೆಸ್ಟರ್ ಸಿಟಿ ಕ್ಲಬ್ ಮರ್ಚೆಂಡೈಸ್, ರೆಫರಲ್ ಕ್ಯಾಶ್ ಹಾಗು ಇತರ ಉಡುಗೊರೆಗಳನ್ನು ಪಡೆಯುವ ಅವಕಾಶ ಕೂಡಾ ಇದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ/ ನೋಂದಣಿಗಾಗಿ ಫೇಸ್ಬುಕ್, ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್‌ನಲ್ಲಿ @RacetoManCity ಖಾತೆಗೆ ಅಥವಾ  www.racetomancity.in ಭೇಟಿ ನೀಡಬಹುದು.