ಸಾಂಪ್ರದಾಯಿಕ ಚಿಲ್ಲರೆ ಮಾರಾಟಗಾರರಿಗೆ ಕಮಿಷನ್ ನಿಂದ ವಿನಾಯಿತಿ ನೀಡಿದ ಪೇಟಿಎಂ ಮಾಲ್. ಮೊಬೈಲ್, ಬೃಹತ್ ಗೃಹೋಪಯೋಗಿ ವಸ್ತುಗಳು, ಲ್ಯಾಪ್ ಟಾಪ್ ಚಿಲ್ಲರೆ ಮಾರಾಟಗಾರರಿಗೆ ಪ್ರಯೋಜನ. ಇಲ್ಲಿದೆ ಹೆಚ್ಚಿನ ವಿವರ.

ಬೆಂಗಳೂರು(ಅ.15): ಚಿಲ್ಲರೆ ಮಾರಾಟಗಾರರೊಂದಿಗೆ ತನ್ನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಉದ್ದೇಶಿಸಿರುವ ಪೇಟಿಎಂ ಮಾಲ್, ಈ ಹಬ್ಬದ ಋತುವಿಗೆ ಅನ್ವಯವಾಗುವಂತೆ ಮೊಬೈಲ್, ಬೃಹತ್ ಗೃಹೋಪಯೋಗಿ ವಸ್ತುಗಳು ಮತ್ತು ಲ್ಯಾಪ್ ಟಾಪ್ ಗಳನ್ನು ಸಾಂಪ್ರದಾಯಿಕ ಕ್ರಮದಲ್ಲಿ ಮಾರಾಟ ಮಾಡುವ ವ್ಯಾಪಾರಿಗಳಿಗೆ ಕಮಿಷನ್ ಪಾವತಿಯಿಂದ ವಿನಾಯಿತಿ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತನ್ನೊಂದಿಗೆ ಸಹಭಾಗಿತ್ವ ಹೊಂದಿರುವ ಚಿಲ್ಲರೆ ಮಾರಾಟ ಮಳಿಗೆಗಳಿಗೆ ವ್ಯಾಪಾರದ ಹೆಚ್ಚಿನಂಶ ಲಾಭ ಸಿಗುವಂತೆ ಮಾಡುವುದು ಇದರ ಉದ್ದೇಶವಾಗಿದೆ. 
ಓ2ಓ ಮಾದರಿಯ ಈ ವ್ಯಾಪಾರ ಮಾದರಿಯಿಂದಾಗಿ ಆನ್-ಲೈನ್ ಮತ್ತು ಆಫ್-ಲೈನ್ ಎರಡು ಮಾದರಿಯಲ್ಲೂ ಗ್ರಾಹಕರಿಗೆ ಆಕರ್ಷಕ ರಿಯಾಯಿತಿ ಸಿಗಲಿದೆ ಎಂದು ಪೇಟಿಎಂ ಮಾಲ್ ಹೇಳಿದೆ.

ಭಾರತದಾದ್ಯಂತ ಯಾವುದೇ ವಸ್ತುವನ್ನು ಖರೀದಿ ಮಾಡುವ ಮುನ್ನ ಗ್ರಾಹಕರು ಆ ಉತ್ಪನ್ನವನ್ನು ಕೈಯಾರೆ ಸ್ಪರ್ಶಿಸಿ, ಅನುಭವ ಪಡೆದುಕೊಳ್ಳಲು ಬಯಸುವ ಪ್ರವೃತ್ತಿಯುನ್ನು ಕಂಡು, ಚಿಲ್ಲರೆ ಮಾರಾಟಗಾರರಿಗೆ ಕಮಿಷನ್ ನಿಂದ ವಿನಾಯಿತಿ ನೀಡಲು ತೀರ್ಮಾನಿಸಲಾಗಿದೆ ಎಂದು ಪೇಟಿಎಂ ಮಾಲ್ ನ ಮಾಲೀಕತ್ವವನ್ನು ಹೊಂದಿರುವ ಪೇಟಿಎಂ ಇ-ಕಾಮರ್ಸ್ ಪ್ರೈವೇಟ್ ಲಿಮಿಟೆಡ್ ಬುಧವಾರ ವಿವರಿಸಿದೆ.