ಭಯ ಬೇಡ! ಬಂದಿದೆ ಮುನ್ಸೂಚನೆ ನೀಡೋ ಸ್ಟೆಬಿಲೈಸರ್

ಹೊಸ ತಂತ್ರಜ್ಞಾನ ಹೊಸ ಇಲೆಕ್ಟ್ರಾನಿಕ್ ಉಪಕರಣಗಳು- ಅಷ್ಟೇ ಕಾಸ್ಟ್ಲಿ ಕೂಡಾ. ಆದರೆ  ಸ್ಟೆಬಿಲೈಸರ್ ಹಳೇ ಕಾಲದ್ದು ಇಟ್ರೆ ಹೇಗೆ?

Numeric UPS Launches Voltsafe Plus Stabilizers

ಸರ್ವವೂ ಕರೆಂಟಿನಲ್ಲೇ ನಡೆಯೋ ಈ ಕಾಲದಲ್ಲಿ ವೋಲ್ಟೇಜ್‌ನಲ್ಲಿ ಏರಿಳಿತವಾಗೋದು ಸಾಮಾನ್ಯ. ಸ್ಟೆಬಿಲೈಸರ್ ಇಲ್ಲದೇ ಹೋದರೆ ಫ್ರಿಡ್ಜ್, ಪಿಸಿ ಕತೆ ಏನಾಗುತ್ತದೆಂದು ಹೇಳಲಾಗದು. 

ಇಂಥ ಸಮಸ್ಯೆ ನಿವಾರಿಸಲು ‘ವೋಲ್ಟ್‌ಸೇಫ್ ಪ್ಲಸ್’ ಸ್ಟೆಬುಲೈಸರ್ ಮಾರುಕಟ್ಟೆಗೆ ಬಂದಿದೆ. ನ್ಯೂಮೆರಿಕ್ ಕಂಪೆನಿಯ ಈ ಉತ್ಪನ್ನವನ್ನು ಮೈಕ್ರೋ ಕಂಟ್ರೋಲರ್ ಯುನಿಟ್ ಬೇಸ್‌ಡ್ ತಂತ್ರಜ್ಞಾನದಲ್ಲಿ ವಿನ್ಯಾಸಗೊಳಿಸಲಾಗಿದೆ. 

ಇದನ್ನೂ ಓದಿ | ಅಗ್ಗದ ಸ್ಮಾರ್ಟ್‌ಫೋನ್ ಹುಡುಕುವವರಿಗಾಗಿಯೇ ಬಂದಿದೆ ಈ ಫೋನ್!

ಏನೇ ಸಮಸ್ಯೆಯಾದರೂ ಇದರಿಂದ ಮುನ್ಸೂಚನೆ ಸಿಗುತ್ತದೆ. ಮನೆ ಬಳಕೆಗಷ್ಟೇ ಅಲ್ಲದೇ, ವೈದ್ಯಕೀಯ, ಕೈಗಾರಿಕಾ ಕ್ಷೇತ್ರಗಳಿಗೂ ಅನ್ವಯವಾಗುವಂತೆ ರೂಪಿಸಲಾಗಿದೆ.

ಈ ಸಾಧನ ಇರುವಾಗ ಸುರಕ್ಷಿತತೆಯ ಬಗ್ಗೆ ಭಯ ಬೇಡ ಎನ್ನುವ ಭರವಸೆ ಕಂಪೆನಿ ನೀಡುತ್ತದೆ.

Latest Videos
Follow Us:
Download App:
  • android
  • ios