ಅಗ್ಗದ ಬೆಲೆಯಲ್ಲಿ ಚೆಂದದ ಸ್ಮಾರ್ಟ್‌ಫೋನ್ ಹುಡುಕುವವರಿಗಾಗಿಯೇ Realme ಕಂಪನಿ C1 ಸೀರೀಸ್ ಫೋನ್ ಸಕ್ಸಸ್ ಬೆನ್ನಲ್ಲೇ C2 ಸೀರೀಸ್‌ನ ಹೊಸ ಮೊಬೈಲನ್ನು ಪರಿಚಯಿಸಿದೆ. 

ಇದರ ಬೆಲೆ ಕೇವಲ ರು.5999 ರಿಂದ ಪ್ರಾರಂಭ. ಮೂರು ಮಾದರಿಯ Realme C2 ಫೋನ್‌ಗಳು ಲಭ್ಯ. 2 GB RAM 16 GB ಸ್ಟೋರೇಜ್, 3 GB RAMನಲ್ಲಿ 32GB ಸ್ಟೋರೇಜ್ ಇದರ ಜೊತೆ  3GB RAMನಲ್ಲಿ 16 GB ಸ್ಟೋರೇಜ್ ಸಹ ಇದರಲ್ಲಿ ಕಾಣಬಹುದು. 

ಇದನ್ನೂ ಓದಿ | ಬೆರಗುಪಡಿಸುವ ರಿಯಲ್‌ಮಿಯ ಮೊಬೈಲ್‌ಗಳು ಅಚ್ಚರಿ ಬೆಲೆಯಲ್ಲಿ!

Realme C2 ವರ್ಷನ್‌ನಲ್ಲಿ ಆ್ಯಂಡ್ರಾಯ್ಡ್ 9.0 ಪೈ ವರ್ಷನ್ ಇದ್ದು, ಬಹು ಬಾಳಿಕೆ ಬರುವ 4000 mAh ಸಾಮರ್ಥ್ಯದ ಬ್ಯಾಟರಿಯಿದೆ. 

ಒಳ್ಳೆಯ ಕ್ಯಾಮೆರಾ ಸಹ ಇದೆ. 13 MP, 2 MPಯ ಎರಡು ಕ್ಯಾಮೆರಾ ಹಿಂಬದಿಯಲ್ಲಿದ್ದರೆ, 5 MP ಫ್ರಂಟ್ ಕ್ಯಾಮೆರಾ ಇದೆ. 6.10
ಇಂಚಸ್‌ನ ಟಚ್‌ಸ್ಕ್ರೀನ್ ಡಿಸ್‌ಪ್ಲೇ, ಮೀಡಿಯಾ ಟೆಕ್ ಹೀಲಿಯೊ P22ನ ಪ್ರೊಸೆಸರ್ ಇದರಲ್ಲಿ ಕಾಣಬಹುದು.