ನೋಕಿಯಾ ಕಂಪನಿಯ ಹೊಸ ಮೊಬೈಲ್ ಫೋನ್ Nokia 3.2 ಮಾರುಕಟ್ಟೆಗೆ ಪದಾರ್ಪಣೆ ಮಾಡಿದೆ. ಈ ಬಜೆಟ್ ಸ್ಮಾರ್ಟ್‌ಫೋನ್ ಜಾಗತಿಕ ಮಟ್ಟದಲ್ಲಿ ಕಳೆದ ಫೆಬ್ರವರಿಯಲ್ಲೇ ಬಿಡುಗಡೆಯಾಗಿದ್ದರೂ, ಭಾರತಕ್ಕೆ ಈಗ ಎಂಟ್ರಿ ನೀಡಿದೆ.

6.26 ಇಂಚು HD ಪರದೆ, 19:9 ಆ್ಯಸ್ಪೆಕ್ಟ್ ರೇಶ್ಯೋ ಹೊಂದಿರುವ Nokia 3.2 ಫೋನಿನ ವಿಶೇಷತೆ 4000 mAh ಬ್ಯಾಟರಿ. ಕಂಪನಿ ಪ್ರಕಾರ, ಬಳಕೆದಾರರಿಗೆ 2 ದಿನಗಳ ಮಟ್ಟಿಗೆ ಚಾರ್ಜ್ ಮಾಡೋ ಚಿಂತೆ ಇಲ್ಲ. Android 9 Pie ಆಪರೇಟಿಂಗ್ ಸಿಸ್ಟಮ್ ಹೊಂದಿರುವ Nokia 3.2 ಫೋನ್‌ನ ಇನ್ನೊಂದು ಮುಖ್ಯ ಫೀಚರ್- ಗೂಗಲ್ ಅಸಿಸ್ಟೆಂಟ್ ಬಟನ್.

Quad-core Qualcomm Snapdragon 429 SoC ಪ್ರೊಸೆಸರ್ ಒಳಗೊಂಡಿರುವ Nokia 3.2, ಹಿಂಬದಿಯಲ್ಲಿ 13 ಮೆಗಾ ಪಿಕ್ಸೆಲ್ ಕ್ಯಾಮೆರಾ, ಮತ್ತು 5 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿವೆ.

ಇದನ್ನೂ ಓದಿ | ಪ್ರಮುಖ ಫೀಚರ್‌ಗೆ ಕತ್ತರಿ ಹಾಕಿದ WhatsApp!

Nokia 3.2 ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. 16GB ಮತ್ತು 32GB ಇನ್‌ಬಿಲ್ಟ್ ಸ್ಟೋರೆಜ್ ಹೊಂದಿದ್ದು, ಅವನ್ನು ಮೈಕ್ರೋ SD ಕಾರ್ಡ್ ಮೂಲಕ 400GB ವರೆಗೂ ವಿಸ್ತರಿಸಬಹುದಾಗಿದೆ.

ಹೊಸ ಫೋನಿನ ಎರಡು ವೇರಿಯಂಟ್‌ಗಳಲ್ಲೂ ಫೇಸ್ ಅನ್‌ಲಾಕ್ ಫೀಚರ್ ಇದೆ. 32GB  ವೇರಿಯಂಟ್‌ನಲ್ಲಿ ಹೆಚ್ಚುವರಿ ಫಿಂಗರ್ ಪ್ರಿಂಟ್ ಅನ್‌ಲಾಕ್ ಸೌಲಭ್ಯವನ್ನು ಒದಗಿಸಲಾಗಿದೆ. 

ಇವುಗಳ ಹೊರತಾಗಿ, 4G VoLTE, Wi-Fi 802, Bluetooth v4.2, GPS/ A-GPS, FM radio, a 3.5mm ಆಡಿಯೋ ಜ್ಯಾಕ್, ಮತ್ತು Micro-USB ಪೋರ್ಟ್ ಕೂಡಾ ಇವೆ.

2GB RAM/ 16GB  ಸ್ಟೋರೆಜ್ Nokia 3.2 ವೇರಿಯೆಂಟ್‌ ಬೆಲೆ ₹ 8990 ಆಗಿದ್ದರೆ,  3GB RAM/ 32GB ವೇರಿಯೆಂಟ್ ಬೆಲೆ ₹10790 ಆಗಿದೆ. ಕಪ್ಪು ಮತ್ತು ಸ್ಟೀಲ್ ಬಣ್ಣಗಳಲ್ಲಿ ಲಭ್ಯವಿರುವ Nokia 3.2 ಫೋನ್ ಮೇಲೆ ಆಕರ್ಷಕ ಆಫರ್‌ಗಳನ್ನು ಕೂಡಾ ಪ್ರಕಟಿಸಲಾಗಿದೆ.

ಮೇ 23 ರಿಂದ Nokia 3.2 ಎಲ್ಲಾ ಪ್ರಮುಖ ಸ್ಟೋರ್ ಹಾಗೂ ನೋಕಿಯಾ ವೆಬ್‌ಸೈಟ್ ನಲ್ಲಿ ಖರೀದಿಗೆ ಲಭ್ಯವಾಗಲಿದೆ. Vodafone ಮತ್ತು Idea ಬಳಕೆದಾರರಿಗೆ ವೋಚರ್ ರೂಪದಲ್ಲಿ ₹2500 ವರೆಗೆ ಇನ್ಸ್ಟಾಂಟ್ ಕ್ಯಾಶ್ ಬ್ಯಾಕ್ ಸಿಗಲಿದೆ. ಅದನ್ನು ರೀಚಾರ್ಜ್ ಗಾಗಿ ಬಳಸಬಹುದಾಗಿದೆ.  HDFC ಗ್ರಾಹಕರಿಗೂ 10% ಕ್ಯಾಶ್‌ಬ್ಯಾಕ್ ಆಫರ್‌ಗಳಿವೆ.

ನೋಕಿಯಾ ವೆಬ್‌ಸೈಟ್‌ನಲ್ಲಿ LAUNCHGIFT ಆಫರನ್ನು ಪ್ರಕಟಿಸಲಾಗಿದ್ದು, ಗ್ರಾಹಕರಿಗೆ ₹1000 ಮೌಲ್ಯದ ಗಿಫ್ಟ್ ಕಾರ್ಡ್ ಸಿಗಲಿದೆ. ಜೊತೆಗೆ ಒಂದು ಬಾರಿ ಉಚಿತ ಸ್ಕ್ರೀನ್ ಬದಲಾವಣೆಯ ಅವಕಾಶವೂ ಇದೆ.