ಕ್ಯಾಲಿಕಟ್(ಸೆ.09): ಕೇರಳ ಭೀಕರ ಮಳೆ ಹಾಗೂ ಪ್ರವಾಹದಿಂದ ತತ್ತರಿಸಿದ್ದ ಕೇರಳ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಈ ಪ್ರವಾಹದಲ್ಲಿ ಹಲವರು ತಮ್ಮ ಪ್ರಾಣದ ಹಂಗು ತೊರೆದು ಹಲವರನ್ನ ರಕ್ಷಿಸಿದ್ದರು. ಇನ್ನು ಸಂತ್ರಸ್ತರನ್ನ ಸುರಕ್ಷಿತ ಸ್ಥಳಗಳಿಗೆ ರವಾನಿಸಲು ಭಾರತೀಯ ಸೇನೆ ಜೊತೆ ಹಲವರು ಕೈಜೋಡಿಸಿದ್ದರು.

ಇದನ್ನೂ ಓದಿ: ಬೋಟ್ ಹತ್ತಲಾಗದವರಿಗೆ ಈ ಯುವಕನ ಬೆನ್ನೇ ಮಟ್ಟಿಲು!

ಪ್ರವಾಹ ಸಂತ್ರಸ್ತರನ್ನ ರಕ್ಷಿಸಿದವರಲ್ಲಿ ಕೇರಳದ ಮೀನುಗಾರ ಜೈಸಾಲ್ ಕಾರ್ಯಕ್ಕೆ ಎಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು.  ನೆರೆ ಸಂತ್ರಸ್ತರು ರಕ್ಷಣಾ ಬೋಟ್ ಹತ್ತುವಾಗ ಮೆಟ್ಟಿಲಾಗಿ ಬೆನ್ನು ಬಾಗಿಸಿ ನೀಡಿದ ಜೈಸಾಲ್ ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿತ್ತು.  

ಜೈಸಾಲ್ ಸಾಮಾಜಿಕ ಕಾರ್ಯಕ್ಕೆ ಇದೀಗ ಮಹೀಂದ್ರ ಕಂಪೆನಿ ಭರ್ಜರಿ ಗಿಫ್ಟ್ ನೀಡಿದೆ. ಕೇರಳದ  ಕ್ಯಾಲಿಕಟ್ ಮಹೀಂದ್ರ ಶೋ ರೂಂ , ಜೈಸಾಲ್‌ಗೆ ನೂತನ ಮರಾಜೋ MPV ಕಾರನ್ನ ಉಡುಗೊರೆಯಾಗಿ ನೀಡಿದೆ.

ಎರಾಮ್ ಮೋಟಾರ್ ಶೋ ರೂಂ , ಜೈಸಾಲ್‌ಗೆ ಮಹೀಂದ್ರ ಇತ್ತೀಚೆಗೆ ಬಿಡುಗಡೆ ಮಾಡಿದ 13 ಲಕ್ಷ(ಎಕ್ಸ್ ಶೋ ರೂಂ) ಬೆಲೆಯ ಮಹೀಂದ್ರ ಮರಾಜೋ ಕಾರು ಗಿಫ್ಟ್ ನೀಡಿದೆ. ಈ ವೇಳೆ ಕೇರಳ ಸರ್ಕಾರದ ಕಾರ್ಮಿಕ ಸಚಿವ ಪಿ ರಾಮಕೃಷ್ಣನ್ ಕೂಡ ಹಾಜರಿದ್ದರು.