ದೇಶದ ಇಂಟರ್‌ನೆಟ್ ಬಳಕೆಯಲ್ಲಿ ಕ್ರಾಂತಿಯನ್ನೇ ಮಾಡಿ, ದಿನಕ್ಕೆ ಒಂದು ಜಿಬಿ ಡಾಟಾವನ್ನು ಉಚಿತವಾಗಿ ನೀಡಿ, ತದನಂತರ ಆಫರ್ ಅನ್ನು ಒಂದೂವರೆ ಜಿಬಿಗೆ ಏರಿಕೆ ಮಾಡಿದ್ದ ಜಿಯೊ ಈಗ ಮತ್ತೆ ದಿನಕ್ಕೆ 2 ಜಿಬಿ ಡಾಟಾ ನೀಡಲು ಮುಂದಾಗಿದೆ. 

ಇದರಿಂದ ಇಂಟರ್‌ನೆಟ್ ಬಳಕೆದಾರರಿಗೆ ಮತ್ತಷ್ಟು ಡೇಟಾ ಸಿಕ್ಕಂತಾಗುತ್ತದೆ. ನೆಟ್‌ಫ್ಲಿಕ್ಸ್, ಹಾಟ್ ಸ್ಟಾರ್ ಮೊದಲಾದ ತಾಣಗಳು ಈಗಾಗಲೇ ಸಾಕಷ್ಟು ಸಿನಿಮಾಗಳನ್ನು ಉಚಿತವಾಗಿ ನೀಡುತ್ತಿದ್ದು, ಜಿಯೊ ಹೊಸ ಆಫರ್‌ನಿಂದ ಇದಕ್ಕೆಲ್ಲಾ ಹೆಚ್ಚು ಅನುಕೂಲವಾಗುವುದು ಗ್ಯಾರೆಂಟಿ. 

ಹೀಗಾಗಿ ಜಿಯೊ ಗ್ರಾಹಕರಿಗೆ ಮತ್ತಷ್ಟು ಡೇಟಾ ಸಿಕ್ಕಂತಾಗಿದೆ. ಆದರೆ ಈ ಸೇವೆ ಆಯ್ದ ಗ್ರಾಹಕರಿಗೆ ಮಾತ್ರವಾಗಿದೆ. ಮೈ ಜಿಯೊ ಆ್ಯಪ್ ಮುಖಾಂತರ ಪ್ರಸ್ತುತ ನಿಮಗೆ ಈ ಸೇವೆ ಲಭ್ಯವಿದ್ದರೆ 399 ರು. ರೀಚಾರ್ಜ್ ಮಾಡಿಕೊಳ್ಳುವ ಮೂಲಕ ಸೇವೆ ಪಡೆಯಬಹುದು.