ಮೈಸೂರು [ಡಿ.09]: ದೇಶದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ಏರ್‌ಟೆಲ್‌ನ 32 ಕೋಟಿ ಗ್ರಾಹಕರ ವೈಯಕ್ತಿಕ ಮಾಹಿತಿ ಬಟಾಬಯಲಾಗುವುದರಿಂದ ಸ್ವಲ್ಪದರಲ್ಲೇ ಪಾರಾಗಿದೆ. ಏರ್‌ಟೆಲ್‌ ಮೊಬೈಲ್‌ ಆ್ಯಪ್‌ನಲ್ಲಿದ್ದ ಭದ್ರತಾ ದೋಷವನ್ನು ಮೈಸೂರು ಮೂಲದ ವೆಬ್‌ ಭದ್ರತಾ ಸಂಶೋಧಕರೊಬ್ಬರು ಕೇವಲ 15 ನಿಮಿಷದಲ್ಲಿ ಪತ್ತೆ ಮಾಡಿದ್ದಾರೆ. ಬಳಿಕ ದೋಷವನ್ನು ಕಂಪನಿ ಸರಿಪಡಿಸಿದೆ.

ಏರ್‌ಟೆಲ್‌ ಕಂಪನಿಯ ‘ಅಪ್ಲಿಕೇಷನ್‌ ಪ್ರೋಗ್ರಾಮ್ಮಿಂಗ್‌ ಇಂಟರ್‌ಫೇಸ್‌’ (ಎಪಿಐ)ನಲ್ಲಿ ದೋಷವಿತ್ತು. ಇದರಿಂದಾಗಿ ಆ ಕಂಪನಿಯ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿರುವ ಗ್ರಾಹಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇತ್ತು. ಇದನ್ನು ಮೈಸೂರು ಮೂಲದ ಎಹ್ರಾಜ್‌ ಅಹಮದ್‌ ಪತ್ತೆ ಹಚ್ಚಿ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ಬಳಿಕ ದೋಷವನ್ನು ಏರ್‌ಟೆಲ್‌ ಸರಿಪಡಿಸಿದೆ.

ಎಪಿಐವೊಂದರಲ್ಲಿ ದೋಷವಿತ್ತು. ಇದರಿಂದಾಗಿ ಏರ್‌ಟೆಲ್‌ ಗ್ರಾಹಕರ ಸೂಕ್ಷ್ಮ ಮಾಹಿತಿಯನ್ನು ಗಳಿಸಿಕೊಳ್ಳಬಹುದಾಗಿತ್ತು. ಗ್ರಾಹಕರ ಮೊದಲ, ಕೊನೆಯ ಹೆಸರು, ಲಿಂಗ, ಇ-ಮೇಲ್‌, ಜನ್ಮದಿನಾಂಕ, ವಿಳಾಸ, ಚಂದಾ ವಿವರ, ಮೊಬೈಲ್‌ನ 4ಜಿ, 3ಜಿ ಹಾಗೂ ಜಿಪಿಆರ್‌ಎಸ್‌ ಸಾಮರ್ಥ್ಯ, ನೆಟ್‌ವರ್ಕ್ ಮಾಹಿತಿ, ಆ್ಯಕ್ಟಿವೇಷನ್‌ ದಿನಾಂಕ, ಗ್ರಾಹಕರ ವಿಧ (ಪ್ರಿಪೇಯ್ಡ್‌/ಪೋಸ್ಟ್‌ಪೇಯ್ಡ್‌) ಹಾಗೂ ಹಾಲಿ ಐಎಂಇಐ ಸಂಖ್ಯೆ ಮತ್ತಿತರ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿತ್ತು. ಐಎಂಇಐ ಸಂಖ್ಯೆ ಬಳಸಿ, ಗ್ರಾಹಕರ ಮೊಬೈಲ್‌ ಉಪಕರಣದ ಮಾಹಿತಿಯನ್ನು ಪತ್ತೆ ಮಾಡಬಹುದಾಗಿತ್ತು. ಈ ದೋಷವನ್ನು 15 ನಿಮಿಷಗಳಲ್ಲಿ ಪತ್ತೆ ಹಚ್ಚಿದೆ ಎಂದು ಎಹ್ರಾಜ್‌ ಅಹಮದ್‌ ಅವರು ತಿಳಿಸಿದ್ದಾರೆ

ಹಬಲ್ ಗುರುತಿಸಿದ ಈ ಗ್ಯಾಲಕ್ಸಿ ಸೂಪರ್ ನೋವಾಗಳ ಮದರ್‌ಲ್ಯಾಂಡ್!...

ತನ್ನ ಆ್ಯಪ್‌ನಲ್ಲಿ ದೋಷವಿದ್ದದ್ದನ್ನು ಏರ್‌ಟೆಲ್‌ ಕೂಡ ಒಪ್ಪಿಕೊಂಡಿದೆ. ಅದನ್ನು ಸರಿಪಡಿಸಿರುವುದಾಗಿಯೂ ಹೇಳಿದೆ.