ರಾತ್ರಿ ಆಗಸದಲ್ಲಿ ಏಕಾಏಕಿ ವಿಚಿತ್ರ ನೀಲಿ ದೀಪಗಳ ನರ್ತನ| ಎರಡೆರಡು ವಿಶಾಲ ನೀಲಿ ದೀಪಗಳನ್ನು ಕಂಡು ಬೆಚ್ಚಿ ಬಿದ್ದ ಜನತೆ| ಸ್ವಿಡನ್, ನಾರ್ವೆ ಆಗಸದಲ್ಲಿ ಕಂಡುಬಂದ ವಿಚಿತ್ರ ನೀಲಿ ದೀಪಗಳು| ನಾಸಾದ AZURE ಸಂಶೋದನೆಗೆ ಉಡಾವಣೆಗೊಂಡ ರಾಕೆಟ್ ಗಳು| ಅಯಾನುಗೋಳದಲ್ಲಿ ಸ್ಥಿರ ಮತ್ತು ಚಲನಾತ್ಮಕ ಕಣಗಳ ಹರಡುವಿಕೆ ಪರಿಣಾಮ ನೀಲಿ ದೀಪ ರಚೆನೆ|

ಅಬಿಸ್ಕೋ(ಏ.10): ರಾತ್ರಿ ಆಗಸದಲ್ಲಿ ಹಿಂದೆಂದೂ ಕಂಡಿರದ ವಿಚಿತ್ರ ನೀಲಿ ದೀಪಗಳು ಕಾಣಿಸಿಕೊಂಡಿದ್ದು, ಸ್ವಿಡನ್ ಮತ್ತು ನಾರ್ವೆ ಜನರಲ್ಲಿ ಆತಂಕ ಉಂಟು ಮಾಡಿದ್ದ ಘಟನೆ ನಡೆದಿದೆ.

ಸ್ವಿಡನ್ನ ಅಬಿಸ್ಕೋ ನಗರದಲ್ಲಿ ರಾತ್ರಿ ಆಗಸದಲ್ಲಿ ಎರಡು ನೀಲಿ ದೀಪಗಳು ಕಾಣಿಸಿಕೊಂಡಿದ್ದು, ಇದನ್ನು ಛಾಯಾಗ್ರಾಹಕ ಚಾಡ್ ಬ್ಲೇಕ್ಲಿ ಸೆರೆಹಿಡಿದಿದ್ದಾರೆ.

ಈ ನೀಲಿ ದೀಪಗಳನ್ನು ಕಂಡ ಜನ ಅನ್ಯಗ್ರಹ ಜೀವಿಗಳ ಯಾನ ಬಂದಿದೆ ಎಂದು ಭಯಭೀತಗೊಂಡಿದ್ದಾರೆ. ಪರಗ್ರಹ ಜೀವಿಗಳು ಭೂಮಿಯ ಮೇಲೆ ದಾಳಿ ಮಾಡಿರಬಹುದು ಎಂದು ಜನ ಮಾತನಾಡಿಕೊಳ್ಳುತ್ತಿದ್ದರು.

ಅಸಲಿಗೆ ಆಗಿದ್ದೇನು?:

ಸ್ವಿಡನ್ ಮತ್ತು ನಾರ್ವೆ ಆಗಸದಲ್ಲಿ ಕಂಡುಬಂದ ವಿಚಿತ್ರ ನೀಲಿ ದೀಪಗಳು ಏಲಿಯನ್ ಶಿಪ್ ಆಗಿರದೇ, ನಾಸಾದ ನೂತನ ಸಂಶೋಧನೆಯೊಂದರ ಫಲಿತಾಂಶವಾಗಿದೆ.

ನಾಸಾ The Auroral Zone Upwelling Rocket Experiment (AZURE) ಎಂಬ ಹೊಸ ಸಂಶೋಧನೆ ಕೈಗೆತ್ತಿಕೊಂಡಿದ್ದು, ಇದಕ್ಕಾಗಿ ನಾರ್ವೆಯ ಅಂಡೋಯಾ ಸ್ಪೇಸ್ ಸೆಂಟರ್ ನಿಂದ ಎರಡು ರಾಕೆಟ್ಗಳನ್ನು ಉಡಾಯಿಸಿತ್ತು.

Scroll to load tweet…

ಈ ವೇಳೆ ಭೂಮಿಯ ಅಯಾನುಗೋಳದಲ್ಲಿ ಸ್ಥಿರ ಮತ್ತು ಚಲನಾತ್ಮಕ ಕಣಗಳ ಹರಡುವಿಕೆಯಿಂದಾಗಿ ಈ ರೀತಿಯ ನೀಲಿ ಬಣ್ಣದ ಬೆಳಕು ಪಸರಿಸಿದೆ.

ಅರೋರಾ ಅಥವಾ ಸೂರ್ಯನಿಂದ ಪ್ರವಹಿಸಿ ಬರುವ ವಿದ್ಯುದಾವಿಷ್ಟ ಕಣಗಳ ಕುರಿತು ಅರಿಯಲು AZURE ಸಂಶೋಧನೆ ಸಹಾಯಕಾರಿಯಾಗಲಿದೆ ಎಂದು ನಾಸಾ ತಿಳಿಸಿದೆ.

Scroll to load tweet…

(ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28).