Asianet Suvarna News Asianet Suvarna News

Solnet Service: ಚಂದ್ರನ ಮೇಲೂ ಹೈ ಸ್ಪೀಡ್ ಇಂಟರ್ನೆಟ್‌ ಸೇವೆ ನೀಡಲಿದೆ ಅಕ್ವೇರಿಯನ್ ಸ್ಪೇಸ್

ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸೋಲ್ನೆಟ್ ಎಂದು ಕರೆಯಲಾಗುವುದು ಎಂದು ಅಕ್ವೇರಿಯನ್‌ ಹೇಳಿಕೆಯಲ್ಲಿ ತಿಳಿಸಿದೆ.

Moon Might Have Access To High Speed Internet through Aquarian Space Solnet service mnj
Author
Bengaluru, First Published Mar 21, 2022, 2:52 PM IST | Last Updated Mar 21, 2022, 2:52 PM IST

Tech Desk: ಪ್ರಪಂಚದಾದ್ಯಂತ ಇಂಟರ್‌ನೆಟ್ ಮಾರುಕಟ್ಟೆ ಅತಿ ವೇಗದ ಬೆಳವಣಿಗೆ ಕಾಣುತ್ತಿದೆ. ಅಮೆರಿಕಾ ಸೇರಿದಂತೆ ಕೆಲವು ದೇಶಗಳಲ್ಲಿ ಈಗಾಗಲೇ 5G ಇಂಟರ್‌ನೆಟ್ ಸೇವೆ ಲಭ್ಯವಿದ್ದು, 6G ತಂತ್ರಜ್ಞಾನ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿವೆ. ಭಾರತದಲ್ಲೂ 2023ರ ವೇಳೆಗೆ 5G ಸೇವೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಮಧ್ಯೆ ಆರಂಭಿಕ ಹಂತಗಳಲ್ಲಿರುವ ಬಾಹ್ಯಾಕಾಶ ಅಂತರ್ಜಾಲ ಯೋಜನೆಯೊಂದು  ಇತ್ತೀಚೆಗೆ ಭೂಮಿ, ಚಂದ್ರ ಮತ್ತು ಪ್ರಾಯಶಃ ಮಂಗಳ ಗೃಹದಲ್ಲಿ ಹೆಚ್ಚಿನ ವೇಗದ ಇಂಟರ್ನೆಟ್ ಸಂಪರ್ಕಿಸುವ ಸಲುವಾಗಿ ಸಂಶೋಧನೆ ಮತ್ತು ತಾಂತ್ರಿಕ ಮೌಲ್ಯಮಾಪನಗಳಲ್ಲಿ ಕೆಲಸ ಮಾಡಲು  $650,000 ಫಂಡಿಂಗ್ ಪಡೆದುಕೊಂಡಿದೆ.

ಮಾರ್ಚ್ 17 ರಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಡ್ರೇಪರ್ ಅಸೋಸಿಯೇಟ್ಸ್‌ನಿಂದ ‌ ಪಡೆದ ಹಣವನ್ನು ಬಳಿಸಿ ಈ ಯೋಜನೆಯೂ ಮುಂಬರುವ ವರ್ಷಗಳಲ್ಲಿ ಭೂಮಿ, ಚಂದ್ರ ಮತ್ತು ಮಂಗಳದ ನಡುವೆ ಹೈ-ಸ್ಪೀಡ್ ಇಂಟರ್ನೆಟನ್ನು ಸ್ಥಾಪಿಸುವ ಅಂತಿಮ ಗುರಿಯತ್ತ ಒಂದು ಹೆಜ್ಜೆಯಾಗಿದೆ ಎಂದು ಅಕ್ವೇರಿಯನ್ ಸ್ಪೇಸ್ ಹೇಳಿದೆ. 

ಈ  ಹೈ-ಸ್ಪೀಡ್ ಇಂಟರ್ನೆಟ್‌  4K ವೀಡಿಯೊವನ್ನು ರವಾನಿಸುವಷ್ಟು ವೇಗ ಹೊಂದಲಿದೆ ಎಂದು ಕಂಪನಿ ತಿಳಿಸಿದೆ. 2024 ರ ಹೊತ್ತಿಗೆ ಕಂಪನಿಯು ತನ್ನ ವೇಗದ ಇಂಟರ್‌ನೆಟ್ ನೀಡುವ ಚಂದ್ರನ ಸಂವಹನ ವ್ಯವಸ್ಥೆಯನ್ನು ಕಾರ್ಯಗತಗೊಳಿಸಲು ಆಶಿಸುತ್ತಿದೆ ಎಂದು ಹೇಳಿದೆ.

ಇದನ್ನೂ ಓದಿ: ಗೂಗಲ್‌ ಹೋಮ್‌ ಪೇಜ್‌ನಲ್ಲೇ ಸುಲಭವಾಗಿ ಇಂಟರ್ನೆಟ್ ಸ್ಪೀಡ್ ಪರೀಕ್ಷಿಸುವುದು ಹೇಗೆ?

ಸೊಲ್ನೆಟ್ ಸೇವೆ:  ಮಹತ್ವಾಕಾಂಕ್ಷೆಯ ಯೋಜನೆಯನ್ನು ಸೋಲ್ನೆಟ್ ಎಂದು ಕರೆಯಲಾಗುವುದು ಎಂದು ಅಕ್ವೇರಿಯನ್‌ ಹೇಳಿಕೆಯಲ್ಲಿ ತಿಳಿಸಿದೆ.  ಇದು ಸೆಕೆಂಡಿಗೆ 100 ಮೆಗಾಬಿಟ್‌ಗಳ ದರವನ್ನು ಹೊಂದಿರುವ ಹೆಚ್ಚಿನ ಡೇಟಾ ದರ, ಹೆಚ್ಚಿನ ವೇಗದ ವಿತರಣಾ ಉಪಗ್ರಹ ವ್ಯವಸ್ಥೆಗಳನ್ನು ಆಧರಿಸಿದೆ.

ನಾಸಾದ ಕಮರ್ಷಿಯಲ್ ಲೂನಾರ್ ಪೇಲೋಡ್ ಸರ್ವೀಸಸ್ (CLPS) ಕಾರ್ಯಕ್ರಮದಲ್ಲಿ ತೊಡಗಿರುವ ಹಲವಾರು ಸಂಸ್ಥೆಗಳೊಂದಿಗೆ ತಾಂತ್ರಿಕ ಮೌಲ್ಯಮಾಪನಗಳನ್ನು ಪೂರ್ಣಗೊಳಿಸುವುದರ ಜೊತೆಗೆ, ಅಕ್ವೇರಿಯನ್ ಸ್ಪೇಸ್ ಯುನೈಟೆಡ್ ಸ್ಟೇಟ್ಸ್ ಮತ್ತು ವಿದೇಶಗಳಲ್ಲಿ ಚಂದ್ರನ ಕಾರ್ಯಾಚರಣೆಗಳನ್ನು ಯೋಜಿಸುತ್ತಿರುವ ಹೆಚ್ಚುವರಿ ಕಂಪನಿಗಳೊಂದಿಗೆ ತಾಂತ್ರಿಕ ಮೌಲ್ಯಮಾಪನಗಳನ್ನು ನಡೆಸುತ್ತಿದೆ ಎಂದು ಕಂಪನಿ ತಿಳಿಸಿದೆ. 

ನಾಸಾದ ಆರ್ಟೆಮಿಸ್ ಮಿಷನ್‌ಗೆ ಬೆಂಬಲವಾಗಿ, ಕಮರ್ಷಿಯಲ್ ಮೂನ್ ಪೇಲೋಡ್ ಸೇವೆಗಳ ಪರಿಣಾಮವಾಗಿ ಈ ದಶಕದ ನಂತರ ಅನೇಕ ಪೇಲೋಡ್‌ಗಳು, ಲ್ಯಾಂಡರ್‌ಗಳು ಮತ್ತು ಇತರ ಸಂಶೋಧನಾ ಉಪಕರಣಗಳು ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ.‌

ಇದನ್ನೂ ಓದಿ: 6G ತಂತ್ರಜ್ಞಾನದಲ್ಲಿ ಭಾರತ ಮುಂದಾಳತ್ವ ವಹಿಸಿ ಜಗತ್ತಿಗೆ ಮಾದರಿಯಾಗಲಿ: ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್!

ಅಕ್ವೇರಿಯನ್ ಸಹಯೋಗ ಹೊಂದಿರುವ ಕಂಪನಿಗಳಲ್ಲಿ, ಕಂಪನಿಯು 2024 ರ ವೇಳೆಗೆ ಎಲ್ಲ ಡೇಟಾ ಮತ್ತು ಸಂವಹನ ಸೌಲಭ್ಯಗಳನ್ನು ಒದಗಿಸಲು ಆಶಿಸುತ್ತಿದೆ. ನಿರ್ದಿಷ್ಟತೆಗಳನ್ನು ಬಹಿರಂಗಪಡಿಸದಿದ್ದರೂ,  ಗ್ರಾಹಕರು ಅಕ್ವೇರಿಯನ್ ತಂತ್ರಜ್ಞಾನವನ್ನು ಸರಿಹೊಂದಿಸಲು ತಮ್ಮ ವಿನ್ಯಾಸವನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ಕಂಪನಿ ಹೇಳಿದೆ. 

ಅಕ್ವೇರಿಯನ್ ಅಂತಿಮವಾಗಿ Solnet ಎಂಬ ಬಾಹ್ಯಾಕಾಶ-ಆಧಾರಿತ ಸೇವೆಯನ್ನು ನಿಯೋಜಿಸಲು ಆಶಿಸುತ್ತಿದೆ, ಆದರೆ ಕಂಪನಿಯು ಇನ್ನೂ ಕೆಲವು ತಾಂತ್ರಿಕ ನಿಶ್ಚಿತಗಳನ್ನು ಒದಗಿಸಿದೆ, ಉದಾಹರಣೆಗೆ ಅದು ಬಳಸಿಕೊಳ್ಳಲು ಬಯಸುವ ರೀತಿಯ ಉಪಗ್ರಹಗಳು ಅಥವಾ ಈ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ವಿಧಾನ ಯಾವ ರೀತಿ ಇರಬೇಕೆಂದು ತಿಳಿಸಿದೆ.

ಹೆಚ್ಚಿನ ವೇಗದ ಇಂಟರ್ನೆಟ್‌ಗೆ ಹೆಚ್ಚುವರಿಯಾಗಿ, ಅಕ್ವೇರಿಯನ್ ಬಾಹ್ಯಾಕಾಶ ಪರಿಸ್ಥಿತಿ ಮೇಲ್ವಿಚಾರಣೆ ಸೇವೆಯನ್ನು ಆರಂಭಿಸಲು ಬಯಸುತ್ತದೆ ಎಂದು ತಿಳಿಸಿದೆ, ಇದು ಬಾಹ್ಯಾಕಾಶ ಕಸವನ್ನು (Space trash) ಸ್ಕ್ಯಾನ್ ಮಾಡುವುದು, ಬಾಹ್ಯಾಕಾಶ ಹವಾಮಾನವನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಚಂದ್ರ ಅಥವಾ ಮಂಗಳದಿಂದ ವೈಜ್ಞಾನಿಕ ಡೇಟಾವನ್ನು ನೀಡುವಂತಹ ವಿಷಯಗಳನ್ನು ಒಳಗೊಂಡಿರುತ್ತದೆ.

Latest Videos
Follow Us:
Download App:
  • android
  • ios