ಮೊನ್ನೆ ಮೊನ್ನೆ ಮೊಬೈಲ್‌ ಕಂಪೆನಿಯೊಂದು ದೀಪಾವಳಿ ಹಬ್ಬದ ಪ್ರಯುಕ್ತ ಫೋನ್‌ ಖರೀದಿಸಿದವರಿಗೆ ಮುನ್ನೂರು ಕೋಟಿ ರುಪಾಯಿಗಳ ಡಿಸ್ಕೌಂಟ್‌ ಘೋಷಿಸಿತ್ತು. ಪ್ರತಿಯೊಂದು ಫೋನಿನ ಬೆಲೆಯನ್ನೂ ಒಂದು ಸಾವಿರ ರೂಪಾಯಿಯಿಂದ ಎರಡು ಸಾವಿರ ರೂಪಾಯಿಗಳ ತನಕ ಇಳಿಸಿತ್ತು. ಅಂಥದ್ದೊಂದು ಅದ್ಭುತ ಕಡಿತವನ್ನು ಇಲ್ಲೀ ತನಕ ಕಾಣದೇ ಇದ್ದ ಮೊಬೈಲ್‌ ಜಗತ್ತು ಬೆಚ್ಚಿಬೀಳುವಂತೆ ಮಾಡಿದ ಪ್ರಸಂಗ ಅದು.

ಅದಕ್ಕೂ ಮುಂಚೆ ಆ್ಯಪಲ್‌ ಫೋನ್‌ ಕೂಡ ಎಕ್ಸ್‌ಎಸ್‌ ನಂತರದಲ್ಲಿ ಎಕ್ಸ್‌ಆರ್‌ ಎಂಬ ಹೊಸದೊಂದು ಬ್ರಾಂಡನ್ನು ಮಾರುಕಟ್ಟೆಗೆ ರಿಲೀಸ್‌ ಮಾಡಿತು. ಅದರ ಬೆಲೆಯನ್ನೂ ತೀವ್ರವಾಗಿ ಕಡಿತಗೊಳಿಸಿತು. ಈಗ ಮಾರುಕಟ್ಟೆಗೆ ಬಂದಿರುವ ಐಫೋನ್‌ 11 ಕೂಡ ಬೆಲೆಯಲ್ಲಿ ಭಾರೀ ಕಡಿತ ಕಂಡಿದೆ.

ಅಂದರೆ ಮೊಬೈಲ್‌ ಮಾರುಕಟ್ಟೆಕೂಡ ಕುಸಿಯುತ್ತಿದೆಯೇ? ಹಾಗಂತ ಸ್ವಷ್ಟವಾಗಿ ಹೇಳುವಂತಿಲ್ಲ. ಆದರೆ ಹೊಸ ಹೊಸ ಕಂಪೆನಿಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ಹೊಸ ಹೊಸ ಫೋನುಗಳನ್ನು ನೀಡುತ್ತಿವೆ ಅನ್ನುವುದಂತೂ ನಿಜ.

ಮಾರುಕಟ್ಟೆಯಲ್ಲಿರುವ ಪ್ರಸಿದ್ಧ ಹಾಗೂ ಜನಪ್ರಿಯ ಬ್ರಾಂಡುಗಳ ನಡುವೆಯೇ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಯತ್ನಿಸುತ್ತಿರುವ ಇನ್‌ಫಿನಿಕ್ಸ್‌ ಇದೀಗ ಇನ್‌ಫಿನಿಕ್ಸ್‌ ಹಾಟ್‌ 8 ಎಂಬ ಬ್ರಾಂಡನ್ನು ಹೊರತಂದಿದೆ. 

ಒಳ್ಳೆಯ ಕ್ಯಾಮೆರಾ, ಸುದೀರ್ಘ ಬ್ಯಾಟರಿ ಲೈಫ್‌, ಸಾಕಷ್ಟು ಸ್ಟೋರೇಜ್‌ ಮತ್ತು ಒಳ್ಳೆಯ ಕಾರ್ಯದಕ್ಷತೆಯಿರುವ ಫೋನು ಎಂದು ಕರೆಸಿಕೊಂಡಿರುವ ಹಾಟ್‌ 8ನ ಬೆಲೆ ಕೇವಲ 6999 ರೂಪಾಯಿ ಮಾತ್ರ. 

ಮಲ್ಟಿಟಾಸ್ಕಿಂಗ್‌, ಗೇಮಿಂಗ್‌ಗಳಿಗೆ ಹೇಳಿ ಮಾಡಿಸಿದಂತಿರುವ ಹಾಟ್‌ 8. 6.52 ಇಂಚಿನ ಎಲ್‌ಸಿಡಿ ಐಪಿಎಸ್‌ ಡಿಸ್‌ಪ್ಲೇ ಹೊಂದಿದೆ. ಪಿಕ್ಸೆಲ್‌ ಡೆನ್ಸಿಟಿ 269 ಪಿಪಿಐ ಹೊಂದಿದೆ. ಬೆಜೆಲ್‌ಲೆಸ್‌ ಫಿನಿಷ್‌, ವಾಟರ್‌ಪ್ರೂಫ್‌ ನಾಚ್‌ 20:9 ಆ್ಯಸ್ಪೆಕ್ಟ್ ಅನುಪಾತ ಹೊಂದಿರುವ ಇದು ಆ ಬೆಲೆಗೆ ಅತ್ಯುತ್ತಮ ಫೋನ್‌ ಎಂದೇ ಹೇಳಬಹುದು.

Read more:  | Infinix Hot 7 Pro ಮಾರುಕಟ್ಟೆಗೆ ಲಗ್ಗೆ; ಇಲ್ಲಿದೆ ಬೆಲೆ ಮತ್ತು ಫೀಚರ್ಸ್...

ಆಕ್ಟಾಕೋರ್‌ ಪ್ರಾಸೆಸರ್‌, 2 ಗಿಗಾಹರ್ಟ್ಜ್ ಕ್ಲಾಕ್‌ ಫ್ರೀಕ್ವೆನ್ಸಿಯ ಸ್ಪೀಡ್‌, ಮೀಡಿಯಾಟೆಕ್‌ ಹೇಲಿಯೋ ಪಿ 22 ಚಿಪ್‌ಸೆಟ್‌ ಜಿಇ8320 ಜಿಪಿಯು ಹೊಂದಿರುವ ಇದು ಇದೇ ಬ್ರಾಂಡಿನ ಹಿಂದಿನ ಫೋನ್‌ಗಳಷ್ಟೇ ಸದೃಢ. ಆದರೆ ಬೆಲೆ ಕಡಿಮೆ.

ಎರಡು ರೇರ್‌ ಕ್ಯಾಮೆರಾಗಳ ಪೈಕಿ ಒಂದು 13 ಮೆಗಾಪಿಕ್ಸೆಲ್‌ ಮತ್ತೊಂದು 8 ಮೆಗಾಪಿಕ್ಸೆಲ್‌ ಇದ್ದರೆ, ಫ್ರಂಟ್‌ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಹೊಂದಿದೆ. 64 ಜಿಬಿ ಸ್ಟೋರೇಜ್‌. ಇದನ್ನು 256 ಜಿಬಿಗೆ ವಿಸ್ತರಿಸುವುದಕ್ಕೂ ಅವಕಾಶವಿದೆ.

4ಜಿ ವೋಲ್ಟೆಯನ್ನೂ ನಿಭಾಯಿಸಬಲ್ಲ ಇದು ಮಿಕ್ಕ ಪೋನುಗಳಲ್ಲಿರುವ ಬ್ಲೂಟೂಥ್‌, ಹಾಟ್‌ಸ್ಪಾಟ್‌, ವೈಫೈ, ಜಿಬಿಸ್‌, ಮೈಕ್ರೋ ಯುಎಸ್‌ಬಿ ಸೌಲಭ್ಯಗಳನ್ನೂ ಹೊಂದಿದೆ. 5000 ಎಂಎಎಚ್‌ ಬ್ಯಾಟರಿ ಹೊಂದಿರುವ ಇದರಲ್ಲಿ 18 ಗಂಟೆಗಳ ಟಾಕ್‌ಟೈಮ್‌, 609 ಗಂಟೆಗಳ ಸ್ಟಾಂಡ್‌ಬೈ ಟೈಮ್‌ ಸಾಧ್ಯ.

ಆರಂಭಿಕ ಫೋನುಗಳನ್ನು ಹೊಂದುವವರಿಗೆ ಇದು ದಿ ಬೆಸ್ಟ್‌ ಎಂದೇ ಹೇಳಬಹುದು.