ಸ್ಮಾರ್ಟ್‌ಫೋನ್ ಬಳಕೆ ಎಷ್ಟರಮಟ್ಟಿಗೆ ಹೆಚ್ಚಾಗಿದೆ ಎಂದರೆ ಮೊಬೈಲ್‌ನಲ್ಲಿ ಫುಲ್ ಚಾರ್ಜ್ ಇಂಟರ್‌ನೆಟ್ ಇದ್ದರೆ ಸಾಕು ಯಾವುದೇ ಲೈವ್ ಕಾರ್ಯಕ್ರಮವನ್ನು ಅಂಗೈನಲ್ಲಿಟ್ಟುಕೊಂಡು ಎಲ್ಲಿ ಬೇಕಾದರೂ ನೋಡಬಹುದು. ಅಂತಹವರನ್ನು ಗಮನದಲ್ಲಿ ಇಟ್ಟುಕೊಂಡು Infinix ಕಂಪನಿ Hot 7 Pro ಎಂಬ ಹೊಸ ಸ್ಮಾರ್ಟ್‌ಫೊನ್ ಬಿಡುಗಡೆ ಮಾಡಿದೆ.

ಆ್ಯಂಡ್ರಾಯ್ಡ್ 9 ಪೈ ವರ್ಷನ್ ಹೊಂದಿರುವ Hot 7 Pro ಸ್ಮಾರ್ಟ್‌ಫೋನ್ ಗ್ರಾಹಕರನ್ನು ಆಕರ್ಷಿಸುತ್ತಿದೆ. ಇದು 6.19 ಇಂಚಸ್‌ನ ಟಚ್ ಸ್ಕ್ರೀನ್ ಡಿಸ್‌ಪ್ಲೇ ಇದ್ದು, ಮೆಡಿಟೇಕ್ ಹೀಲಿಯೊ P22 ಪ್ರೊಸೆಸರ್ ಅನ್ನು ಇದರಲ್ಲಿ ಬಳಕೆ ಮಾಡಿದ್ದಾರೆ.

ಇದನ್ನೂ ಓದಿ | ಅಗ್ಗ, ಆದ್ರೂ ಫೀಚರ್ ಮಾತ್ರ ಸಖತ್! ಮೊಬೈಲ್ ಮಾರುಕಟ್ಟೆಗೆ S4

ಇನ್ನು ಕ್ಯಾಮೆರಾಗೆ ಬಂದರೆ ಫ್ರಂಟ್ ಆ್ಯಂಡ್ ಬ್ಯಾಕ್‌ನಲ್ಲಿ ಎರಡು ಕ್ಯಾಮೆರಾಗಳು ಇವೆ. ಸೆಲ್ಫಿಗೂ ಬೆಸ್ಟ್ ಎನ್ನುವ ಕಂಪನಿ ಚೆಂದದ ಫೋಟೋಗಳನ್ನು 13 MP+2MP ಕ್ಯಾಮೆರಾದಲ್ಲಿ ಸೆರೆಹಿಡಿಯಬಹುದು.

ಡ್ಯುಯಲ್ ನ್ಯಾನೊ ಸ್ಲಾಟ್ ಇರುವ ಇದರಲ್ಲಿ 4000 mAh  ಬಾಳಿಕೆಯ ಬ್ಯಾಟರಿ ಸಾಮರ್ಥ್ಯದಲ್ಲಿ ಹೆಚ್ಚು ಕಾಲ ನಿಮ್ಮಿಷ್ಟದ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ. 6GB RAM, 64 GB ಇನ್ ಬಿಲ್ಟ್ ಹಾಗೂ 256ಜಿಬಿವರೆಗೂ ವಿಸ್ತರಿಸಬಹುದಾದ ಸ್ಟೋರೇಜ್ ಸೌಲಭ್ಯ ಇದರಲ್ಲಿದೆ. 

Infinix Hot 7 Pro ಬೆಲೆ ರು. 8999