ಮೊಬೈಲ್ ಪೋರ್ಟಬಲಿಟಿ ಶುಲ್ಕ 4 ರು.ಗೆ ಇಳಿಕೆ

technology | Thursday, February 1st, 2018
Suvarna Web Desk
Highlights

ಮೊಬೈಲ್ ನಂಬರ್ ಬದಲಾಯಿಸದೆಯೇ, ಮೊಬೈಲ್ ಕಂಪನಿ ಬದಲು ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಮೊಬೈಲ್ ನಂಬರ್ ಪೋರ್ಟಬಲಿಟಿ ಶುಲ್ಕವನ್ನು 19 ರು.ನಿಂದ 4 ರು.ಗೆ ಇಳಿಸಲಾಗಿದೆ.

ನವದೆಹಲಿ: ಮೊಬೈಲ್ ನಂಬರ್ ಬದಲಾಯಿಸದೆಯೇ, ಮೊಬೈಲ್ ಕಂಪನಿ ಬದಲು ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಮೊಬೈಲ್ ನಂಬರ್ ಪೋರ್ಟಬಲಿಟಿ ಶುಲ್ಕವನ್ನು 19 ರು.ನಿಂದ 4 ರು.ಗೆ ಇಳಿಸಲಾಗಿದೆ.

ಈ ಹಿಂದೆ ವಿಧಿಸಲಾಗುತ್ತಿದ್ದ 19 ರು. ಶುಲ್ಕದ ಬದಲಿಗೆ 4 ರು. ಮಾತ್ರ ವಿಧಿಸಬೇಕು ಎಂದು ಎಲ್ಲ ಮೊಬೈಲ್ ನೆಟ್‌ವರ್ಕ್’ಗಳಿಗೂ ಟೆಲಿಕಾಂ ನಿಯಂತ್ರಣ ಸಂಸ್ಥೆ(ಟ್ರಾಯ್) ತಿಳಿಸಿದೆ.

ಹಾಗಾಗಿ, ಮೊಬೈಲ್ ನೆಟ್‌ವರ್ಕ್ ಬದಲಾವಣೆ ಬಯಸುವ ಗ್ರಾಹಕರ ಅನುಮತಿ ಗಾಗಿ 4 ರು.ಗಿಂತ ಹೆಚ್ಚು ದರ ವಿಧಿಸುವಂತಿಲ್ಲ. ಆದರೆ, ಇದಕ್ಕಿಂತ ಕಡಿಮೆ ದರ ವಿಧಿಸಲೂಬಹುದು ಎಂದು ಟ್ರಾಯ್ ತಿಳಿಸಿದೆ.

Comments 0
Add Comment

    ಹೆಚ್ಡಿಕೆಗೆ ಮಲೇಷಿಯಾದಲ್ಲಿ ಆಸ್ತಿ ಇದೆಯೆ? ಇಡಿ, ತೆರಿಗೆ ಅಧಿಕಾರಿಗಳಿಂದ ಬೆದರಿಕೆ

    karnataka-assembly-election-2018 | Friday, May 25th, 2018