Asianet Suvarna News Asianet Suvarna News

ವನ್ಯಜೀವಿ ಪ್ರಿಯರಿಗೆ ಸಿಹಿ ಸುದ್ದಿ!

ಅಂತೂ ವರ್ಷದ ಚುಮುಚುಮು ಅಕ್ಟೋಬರ್ ಬಂದಾಯ್ತು. ಇದು ಎಲ್ಲೆಡೆ ಹಕ್ಕಿಗಳ ಕಲರವ ಕೇಳುವ ಸಮಯ. ಪಕ್ಷಿ ಪ್ರಿಯರು ಪಕ್ಷಿ ವೀಕ್ಷಣೆಗೆ ಹೊರಡುವ ಸಮಯ. ಏಕೆಂದರೆ, ಇದು ನಮ್ಮ ಪಕ್ಷಿಧಾಮಗಳು ವಲಸಿಗ ಹಕ್ಕಿಗಳನ್ನು ಸ್ವಾಗತಿಸುವ ಸಮಯ.

Mobile App For Wildlife Lovers Launched
Author
Bengaluru, First Published Oct 16, 2018, 8:54 PM IST
  • Facebook
  • Twitter
  • Whatsapp

ತಂಪಾದ ಚುಮುಚುಮು ವಾತಾವರಣದಲ್ಲಿ ಹಕ್ಕಿಗಳ ಕಲರವದ ನಡುವೆ ವಿವಿಧ ಬಗೆಯ ಹಕ್ಕಿಗಳನ್ನು ವೀಕ್ಷಿಸುವುದೇ ಒಂದು ಮಜ. ಅದು ನಮ್ಮೆಲ್ಲ ಒತ್ತಡವನ್ನು ಕ್ಷಣಮಾತ್ರದಲ್ಲಿ ದೂರಮಾಡುತ್ತವೆ. ನಮ್ಮ ದೇಶದಲ್ಲೊಂದು ಇದೊಂದು ಜನರ ನೆಚ್ಚಿನ ಹವ್ಯಾಸವೂ ಹೌದು. ವಿವಿಧ ವರ್ಗಗಳ ಜನರು, ಸೇನೆ, ನೌಕಾಸೇನೆ, ಟಿಕ್ಕಿಗಳು, ವೈದ್ಯರು ಸೇರಿದಂತೆ ಎಲ್ಲರೂ ವರ್ಷದ ನಿರ್ಧಿಷ್ಟ ಅವಧಿಯನ್ನು ಪಕ್ಷಿ ವೀಕ್ಷಣೆಗಾಗಿ ಮೀಸಲಿರುಸುತ್ತಾರೆ. ಅದರಲ್ಲೂ ವರ್ಷದಲ್ಲಿ ಅಕ್ಟೋಬರ್, ನವೆಂಬರ್ ತಿಂಗಳು ಪಕ್ಷಿ ವೀಕ್ಷಣೆಗೆ ಸೂಕ್ತವಾದ ಸಮಯ. ಈ ಸಂದರ್ಭದಲ್ಲಿ ವಿಶ್ವದ ವಿವಿಧ ಭಾಗಗಳಿಂದ ಪಕ್ಷಿಗಳು ಭಾರತದ ಅನೇಕ ಪಕ್ಷಿಧಾಮಗಳಿಗೆ ವಲಸೆ ಬರುವುದರಿಂದ ನೋಡುಗರ ಕಣ್ಣಿಗಂತೂ ಹಬ್ಬವೇ ಸರಿ. ಸರುಸ್‍ಕೇನ್‍ನಂತಹ ಅಪರೂಪದ ಹಕ್ಕಿಗಳು ಈ ಸಂದರ್ಭದಲ್ಲಿ ವಲಸೆ ಬರುತ್ತವೆ.

ಭಾರತದಲ್ಲಿ ವನ್ಯಜೀವಿ ಪ್ರವಾಸೋದ್ಯಮ ತೀವ್ರ ವೇಗದಲ್ಲಿ ಬೆಳವಣಿಗೆ ಕಾಣುತ್ತಿದೆ. ಭಾರತ ಬಂಗಾಲದ ಹುಲಿ, ಆನೆಗಳು, ಘೆಂಡಾಮೃಗ ಹಾಗೂ ಹಲವು ಜಾತಿಯ ಪಕ್ಷಿಗಳ ಮತ್ತಿತರರ ವೈವಿದ್ಯಮಯ ಜೀವ ಸಂಕುಲದ ವಾಸಸ್ಥಳವಾಗಿದ್ದು, ಪ್ರವಾಸಿಗರ ನೆಚ್ಚಿನ ಸ್ಥಳವಾಗಿದೆ. ಜೊತೆಗೆ, ಪ್ರವಾಸೋದ್ಯಮ ಮಂಡಳಿಗಳು ಪ್ರವಾಸಿ ತಾಣಗಳ ಕುರಿತು ನೀಡುತ್ತಿರುವ ಪ್ರಚಾರ, ಕಡಿಮೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿದೆ.

ಆದರೆ, ನೀವು ಪ್ರವಾಸಕ್ಕೆಂದು ಹೋದಾಗ, ಸಫಾರಿ ಕೈಗೊಂಡಾಗ ಪ್ರಾಣಿ, ಪಕ್ಷಿಗಳು ಎಲ್ಲಿವೆ ಎಂದು ತಿಳಿಯುವುದು ಹೇಗೆ? ಅನೇಕ ಬಾರಿ ಗಂಟೆಗಟ್ಟಲೆ ಸುತ್ತಿದರೂ ಒಂದು ಪ್ರಾಣಿಯೂ ಕಣ್ಣಿಗೆ ಬೀಳುವುದಿಲ್ಲ. ಕೊನೆಗುಳಿಯುವುದು ನಿರಾಸೆಯಷ್ಟೇ. 

ಆದರೆ, ಇನ್ನು ಆ ಚಿಂತೆ ಬೇಡ. ಸಫಾರಿಯನ್ನು ಸುಲಭವಾಗಿಸುವ ಸಲುವಾಗಿಯೇ ಒಂದು ಆ್ಯಪ್ ಬಿಡುಗಡೆಯಾಗಿದೆ. ಇದರಲ್ಲಿನ ತಂತ್ರಜ್ಞಾನ ಭಾರತದಾದ್ಯಂತ ಯಾವ ದಿಕ್ಕಿನಲ್ಲಿ  ಸಫಾರಿ ಹೊರಟರೆ ಪ್ರಾಣಿ, ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತವೆ ಎಂಬ ಮಾಹಿತಿ ನೀಡುತ್ತದೆ. "ವೈಲ್ಡ್ ಟ್ರಯಲ್ಸ್" ಎಂಬ ಆ್ಯಪ್ ಅನ್ನು ಇದಕ್ಕಾಗಿಯೇ ತಯಾರಿಸಲಾಗಿದೆ. ಇದರ ಸಿಇಒ ಮಂಜುನಾಥ್ ಗೌಡ ಅವರು ಇದರ ಕುರಿತು ಮಾಹಿತಿ ನೀಡಿದ್ದಾರೆ. ಇದರಲ್ಲಿ ನೀವು ಈ ಮಾಹಿತಿಗಳನ್ನು ಪಡೆಯಬಹುದು.

*ಪಕ್ಷಿ ವೀಕ್ಷಿಸಬೇಕಾದ ಸ್ಥಳಗಳು

*ಉತ್ತಮ ವೀಕ್ಷಣೆಗೆ ಬೇಕಾದ ಉಪಕರಣಗಳು

*ಪಕ್ಷಿಧಾಮಕ್ಕೆ ವಲಸೆ ಬರುವ ಪಕ್ಷಿಗಳ ವೀಕ್ಷಣೆಗೆ ಸೂಕ್ತ ಸಮಯ(ಮುಖ್ಯವಾಗಿ ಚಳಿಗಾಲ)

*ಪಕ್ಷಿ ವೀಕ್ಷಣೆ ಒತ್ತಡವನ್ನು ಕಡಿಮೆಗೊಳಿಸುತ್ತದೆ.

*ಪಕ್ಷಿ ವೀಕ್ಷಕರ ಸಂಖ್ಯೆ ಹೆಚ್ಚುತ್ತಿದ್ದಂತೆ ವಲಸಿಗ ಪಕ್ಷಿಗಳ ಸಂಖ್ಯೆ ಕಡಿಮೆಯಾಗಿದೆ ಏಕೆ? ಪಕ್ಷಿ ವಈಕ್ಷಣೆ ಸಂದರ್ಭದಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಲಹೆಗಳು

ವೈಲ್ಡ್ ಟ್ರಯಲ್ಸ್ ಕುರಿತು:

ಈ ಆ್ಯಪ್ ಜನರಿಗೆ ವನ್ಯಜೀವಿಗಳ ವೀಕ್ಷಣೆಗೆ ಸೂಕ್ತ ಅಭಯಾರಣ್ಯ, ಪಕ್ಷಿಧಾಮ ಸೇರಿದಂತೆ ಇತರ ಮಾಹಿತಿಗಳನ್ನು ನೀಡುತ್ತದೆ. ಈ ಅಭಯಾರಣ್ಯಗಳಿಗೆ ಹೊಂದಿಕೊಂಡಂತಿರುವ ವಸತಿ ಸ್ಥಳ, ವಲಯಗಳ ಮಾಹಿತಿ, ಸಫಾರಿ ಸೇವೆಯನ್ನು ಕಾಯ್ದಿರಿಸಲು ನೆರವು, ಸ್ಥಳೀಯ ಮಾರ್ಗದರ್ಶಕರು ಹಾಗೂ ಇತರ ಪ್ಯಾಕೇಜ್‍ಗಳನ್ನು ಒದಗಿಸುತ್ತದೆ. 

Follow Us:
Download App:
  • android
  • ios