2020ರಿಂದ ವಿಂಡೋಸ್ 7 ಅಪ್‌ಡೇಟ್ ಸಿಗೋದಿಲ್ಲ!| ತದ ನಂತರದಲ್ಲಿ ಗ್ರಾಹಕರು ಹೊಸ ಸಾಫ್ಟ್‌ವೇರ್‌ಗೆ ವರ್ಗಾವಣೆಗೊಳ್ಳುವುದು ಅನಿವಾರ್ಯ

ಜೈಪುರ[ಜೂ.20]: 2020ರ ಜ. 14ರಿಂದ ವಿಂಡೋಸ್-7 ಆಪರೇಟಿಂಗ್ ಸಿಸ್ಟಮ್‌ಗೆ ಸಂಬಂಧಿಸಿದ ಭದ್ರತೆ ಮತ್ತು ತಾಂತ್ರಿಕ ಅಪ್ಡೇಟ್‌ಗಳು ಲಭ್ಯವಿರುವುದಿಲ್ಲ ಎಂದು ಮೈಕ್ರೋಸಾಫ್ಟ್ ತಿಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತದ ನಂತರದಲ್ಲಿ ಗ್ರಾಹಕರು ಹೊಸ ಸಾಫ್ಟ್‌ವೇರ್‌ಗೆ ವರ್ಗಾ ವಣೆಗೊಳ್ಳುವುದು ಅನಿವಾರ್ಯ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಈ ಬಗ್ಗೆ ಬುಧವಾರ ಪ್ರಕಟಣೆ ಹೊರಡಿಸಿದ ಮೈಕ್ರೋಸಾಫ್ಟ್‌ನ ಭಾರತ ವಿಭಾಗದ ಫರ್ಹನಾ ಹಕ್, ‘2020ರ ಜ. 14ಕ್ಕೆ ವಿಂಡೋಸ್-7 ಸ್ಥಗಿತಗೊಳ್ಳಲಿದೆ. ವಿಂಡೋಸ್-7ಗೆ ಭದ್ರತೆ ಮತ್ತು ಅಪ್ಡೇಟ್‌ಗಳು ಲಭ್ಯವಿರುವುದಿಲ್ಲ. ಹಾಗಾಗಿ, ಆ ನಂತರ ಕಂಪ್ಯೂಟರ್‌ನಲ್ಲಿ ವಿಂಡೋಸ್-7 ಬಳಕೆ ಸುರಕ್ಷಿತವಲ್ಲ’ ಎಂದಿದ್ದಾರೆ.