ಜಂಕೋ ಫೋನಿನ ಒಟ್ಟಾರೆ ಸುತ್ತಳತೆ 46.7*21*12ಮಿಮಿ ಇದ್ದು, ತೂಕ 13 ಗ್ರಾಂ ಇದೆ. ನ್ಯಾನೋ ಸಿಮ್'ಗೆ ಮಾತ್ರ ಈ ಮೊಬೈಲ್ ಬೆಂಬಲ ನೀಡುತ್ತದೆ.
ಲಂಡನ್(ಡಿ.21): ವಿಶ್ವದ ಅತ್ಯಂತ ಸಣ್ಣ ಮೊಬೈಲ್ ಫೋನ್'ಅನ್ನು ಲಂಡನ್ ಮೂಲದ ಕಂಪನಿ ಬಿಡುಗಡೆ ಮಾಡಿದೆ. ಜಂಕೋ ಟೊನಿ ಟಿ1 ಎಂಬ ಹೆಸರಿನ ಈ ಫೋನ್ ಉದ್ದ 0.49 ಇಂಚು ಮಾತ್ರವಿದೆ. ಜಂಕೋ ಫೋನಿನ ಒಟ್ಟಾರೆ ಸುತ್ತಳತೆ 46.7*21*12ಮಿಮಿ ಇದ್ದು, ತೂಕ 13 ಗ್ರಾಂ ಇದೆ. ನ್ಯಾನೋ ಸಿಮ್'ಗೆ ಮಾತ್ರ ಈ ಮೊಬೈಲ್ ಬೆಂಬಲ ನೀಡುತ್ತದೆ.
ಫೋನ್'ನಲ್ಲಿರುವ ಇತರ ಫೀಚರ್'ಗಳು
·ಫೋನ್ ಬುಕ್'ನಲ್ಲಿ 300 ಸಂಪರ್ಕ ಹೆಸರುಗಳನ್ನು ಮಾತ್ರ ಸ್ಟೋರೇಜ್ ಇಟ್ಟುಕೊಳ್ಳಬಹುದು
·50 ಎಸ್'ಎಂಎಸ್ ಸ್ಟೋರೇಜ್
·ಕಾಲ್ ಲಾಗ್'ನಲ್ಲಿ 50 ಒಳ ಹಾಗೂ ಹೊರ ಹೋಗುವ ಕರೆಗಳನ್ನು ಮಾತ್ರ ಅವಕಾಶ
·ಬ್ಲೂಟೂತ್, ಯುಎಸ್'ಬಿ ಹಾಗೂ 2ಜಿ ಇಂಟರ್'ನೆಟ್ ಸಂಪರ್ಕ, 3ಜಿ ಅಥವಾ 4ಜಿ ಬೆಂಬಲ ನೀಡುವುದಿಲ್ಲ
·32*64 ಪಿಕ್ಸೆಲ್ ರೆಸಲ್ಯೂಶನ್, 200 ಎಂಎಹೆಚ್ ಬ್ಯಾಟರಿ
ಸದ್ಯ ಮಾರುಕಟ್ಟೆಯಲ್ಲಿ ಈ ಮೊಬೈಲ್ ಬೆಲೆ 30 ಯೂರೋಗಳಿದ್ದು, ಭಾರತದ ರೂಪಾಯಿಗಳಿಗೆ 2280 ರೂ. ಮೌಲ್ಯವಾಗುತ್ತದೆ. ಮುಂದಿನ ವರ್ಷದ 2018ರಲ್ಲಿ ವಿವಿಧ ದೇಶಗಳ ಮಾರುಕಟ್ಟೆಗೆ ಈ ಫೋನ್ ಬಿಡುಗಡೆಯಾಗಲಿದೆ.
