ಗಗನಕ್ಕೆ ಹೊರಟಳು ವ್ಯೋಮಮಿತ್ರ: ಬಾಹ್ಯಾಕಾಶ ಗೆಲ್ಲಲು ಇಸ್ರೋ ಸಜ್ಜು!

ಗಗನಯಾನ್‌ಕ್ಕೆ ಸಜ್ಜಾಗಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ| ಮಹತ್ವಾಕಾಂಕ್ಷಿ ಯೋಜನೆಗೆ ಎಲ್ಲ ಸಿದ್ಧತೆ ನಡೆಸಿರುವ ಇಸ್ರೋ| ನಾಲ್ಕು ಗಗನಯಾತ್ರಿಗಳಿಗೆ ರಷ್ಯಾದಲ್ಲಿ ತರಬೇತಿ ನೀಡಲು ಇಸ್ರೋ ಯೋಜನೆ| ಇದಕ್ಕೂ ಮೊದಲು ಇಸ್ರೋ ಮಾನವ ರಹಿತ ಗಗನಯಾನ ಯೋಜನೆ| ಮಾನವ ರಹಿತ ರಾಕೆಟ್‌ನಲ್ಲಿ ತೆರಳಲು ಸಜ್ಜಾದ ಹ್ಯೂಮನಾಯ್ಡ್‌| ಬಾಹ್ಯಾಕಾಶ ಅರಿಯಲು ಇಸ್ರೋದ ವ್ಯೋಮಮಿತ್ರ ಸಜ್ಜು|

Meet Vyommitra The ISRO Humanoid For Gaganyaan Mission

ಬೆಂಗಳೂರು(ಜ.22): ಗಗನಯಾನ್‌ಕ್ಕೆ ಸಜ್ಜಾಗಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ತನ್ನ ಮಹತ್ವಾಕಾಂಕ್ಷಿ ಯೋಜನೆಗೆ ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿದೆ. 

ಈಗಾಗಲೇ ಮಾನವ ಸಹಿತ ಗಗನಯಾನ್‌ ಯೋಜನೆಗೆ ಮುಂದಡಿ ಇಟ್ಟಿರುವ ಇಸ್ರೋ, ಇದಕ್ಕಾಗಿ ನಾಲ್ಕು ಗಗನಯಾತ್ರಿಗಳಿಗೆ ರಷ್ಯಾದಲ್ಲಿ ತರಬೇತಿ ನೀಡಲು ಸಕಲ ಸಿದ್ಧತೆ ನಡೆಸಿದೆ. ಈ ತಿಂಗಳ ಅಂತ್ಯಕ್ಕೆ ನಾಲ್ವರು ಗಗನಯಾತ್ರಿಗಳು ರಷ್ಯಾಗೆ ತೆರಳಲಿದ್ದಾರೆ.

ಆದರೆ ಇದಕ್ಕೂ ಮೊದಲು ಇಸ್ರೋ ಮಾನವ ರಹಿತ ಗಗನಯಾನ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಮಾನವ ರಹಿತ ರಾಕೆಟ್‌ನಲ್ಲಿ ತೆರಳಲು ರೋಬೋ (ಹ್ಯೂಮನಾಯ್ಡ್‌) ಸಿದ್ಧಪಡಿಸಿದೆ.

ದೇಶದ ಗಗನಯಾನಿಗಳಿಗೆ ಚಿತ್ರದುರ್ಗ ಬಳಿ ತರಬೇತಿ: ವಿಜ್ಞಾನನಗರಿಯಲ್ಲಿ ಇಸ್ರೋ ಕೇಂದ್ರ!

ವ್ಯೋಮಮಿತ್ರ ಎಂದು ಹ್ಯೂಮನಾಯ್ಡ್‌ ಬಾಹ್ಯಾಕಾಶದಲ್ಲಿ ಕರ್ತವ್ಯ ನಿರ್ವಹಿಸುವ ಕ್ಷಮತೆ ಹೊಂದಿದ್ದು, ಗಗನಯಾನ್ ಯೋಜನೆಗೆ ಪೂರಕವಾಗಿ ಇದು ಕೆಲಸ ನಿರ್ವಹಿಸಲಿದೆ ಎನ್ನಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಇಸ್ರೋ ಮುಖ್ಯಸ್ಥ ಕೆ. ಶಿವನ್, ಬಾಹ್ಯಾಕಾಶ ಪರ್ಯಟನೆಗೆ ವ್ಯೋಮಮಿತ್ರ ಸಂಪೂರ್ಣ ಸಜ್ಜಾಗಿದ್ದಾಳೆ ಎಂದು ತಿಳಿಸಿದರು. ಪ್ರಯೋಗಾತ್ಮಕವಾಗಿ ಮಾನವ ರಹಿತ ರಾಕೆಟ್ 

ಅದರಂತೆ 2022 ರಲ್ಲಿ ಮಾನವ ಸಹಿತ ಗಗನಯಾನ ಯೋಜನೆ ಕಾರ್ಯರೂಪಕ್ಕೆ ಬರಲಿದ್ದು, ಈ ಕುರಿತು ಸಿದ್ಧತೆ ಪ್ರಗತಿಯಲ್ಲಿದೆ ಎಂದು ಶಿವನ್ ಸ್ಪಷ್ಟಪಡಿಸಿದರು.

Latest Videos
Follow Us:
Download App:
  • android
  • ios